ತಾಯಿಯ ಎದೆ ಹಾಲು ಅಮೃತಕ್ಕೆ ಸಮ :ಆರೋಗ್ಯ ಸಹಾಯಕಿ ವೀಣಾ
1 min readಹಿರಿಯೂರು: ತಾಲೂಕಿ ಭರಮಗಿರಿ ಗ್ರಾಮದಲ್ಲಿ ವಿಶ್ವ ಸ್ತನ್ಯ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂದು ಆರೋಗ್ಯ ಸಹಾಯಕಿ ವೀಣಾ ತಿಳಿಸಿದರು.
ಮಗು ಜನಿಸಿದ ಅರ್ಧಗಂಟೆಯೊಳಗೆ ಮತ್ತು ಆರು ತಿಂಗಳ ತನಕ ಕಡ್ಡಾಯವಾಗಿ ಮಗುವಿಗೆ ಎದೆ ಹಾಲು ಮಹತ್ವ ಎಂದರು. ಏಕೆಂದರೆ ಎದೆಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಮಗುವಿಗೆ ಎದೆಹಾಲು ನೀಡಬೇಕೆಂದರು ಹೇಳಿದರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತ ನಾಗಮ್ಮ ಆಶಾ ಕಾರ್ಯಕರ್ತೆ ಫರೀದಾ ಬೇಗಮ್ ಗರ್ಭಿಣಿ ಬಾಣಂತಿಯರು ಹಾಗೂ ಗ್ರಾಮಸ್ಥರು ಇದ್ದರು.