May 29, 2024

Chitradurga hoysala

Kannada news portal

ನಮ್ಮ ಕಾಲೇಜು ನಮಗೆ ಕೊಡಿ : ಶಾಸಕ ಟಿ.ರಘುಮೂರ್ತಿ

1 min read

ಚಿತ್ರದುರ್ಗ:ನಗರದ‌ ಜಿಲ್ಲಾಧಿಕಾರಿ‌ವೃತ್ತದಲ್ಲಿ ತುರುವನೂರು ಪ್ರಥಮ ದರ್ಜೆ ಕಾಲೇಜು ಸ್ಥಳಾಂತರಕ್ಕೆ ವಿರೋಧಿಸಿ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ನೇತೃತ್ವದಲ್ಲಿ ಈ ಧರಣಿ ಸತ್ಯಗ್ರಹ ಹಮ್ಮಿಕೊಂಡಿದ್ದು, ಕಾಲೇಜು ಸ್ಥಳಾಂತರವನ್ನು ಸ್ಥಗಿತ ಗೊಳಿಸುವವರೆಗೂ ಅವಿರತವಾಗಿ ಧರಣಿ ಮುಂದುವರೆಸುವುದಾಗಿ ಶಾಸಕರು ವಿವಿಧ ಸಂಘಟನೆಗಳು ಹಾಗೂ ಪೋಷಕರು ಅಗ್ರಹ ಪಡಿಸಿದ್ದಾರೆ.

ಶಾಸಕ ಟಿ.ರಘುಮೂರ್ತಿ ಮಾತನಾಡಿ ನಮ್ಮ‌ ಕಾಲೇಜು ನಮಗೆ ಬೇಕು. ಹೋರಟ ನಿಲ್ಲಿಸಲ್ಲ ಏನ್ ಕ್ರಮ‌ ಕೈಗೊಂಡರು ಸಹ ಹೋರಟದ ತೀವ್ರತೆ ಹೆಚ್ಚತ್ತದೆ ಒರತು ಕಮ್ಮಿಯಾಗಲ್ಲ. ನಮ್ಮ ಕಾಲೇಜು ಕಿತ್ತುಕೊಂಡಿದ್ದಾರೆ.ನಮ್ಮ ಮಕ್ಕಳ ಭವಿಷ್ಯವನ್ನು ಯೋಚಿಸದೆ ಮನಸ್ಸಿಗೆ ಬಂದಂತೆ ಕಾಲೇಜು ಸ್ಥಳಾಂತರಿಸಿದ್ದಾರೆ. ನಾವು ರಾಜಕಾರಣ ಮಾಡಲ್ಲ ಮಕ್ಕಳ ಭವಿಷ್ಯ ಮುಖ್ಯವಾಗಿದೆ. ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ. ಯಾವ ಉದ್ದೇಶಕ್ಕೆ ಕಾಲೇಜು ಸ್ಥಳಾಂತರ ಮಾಡಿದ್ದಿರ ಸ್ವಾಮಿ ಬರದ ನಾಡಿನ ಮಕ್ಕಳ ಜೊತೆ ಆಟವಾಡದೆ ಕಾಲೇಜು ಸ್ಥಳಾಂತರ ರದ್ದುಗೊಳಿಸಿ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಮೂರ್ತಿ, ವಂದೇ ಮಾತರಂ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್, ರೈತ ಮುಖಂಡ ಸೋಮಗುದ್ದ ರಂಗಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಕಾಂಗ್ರೆಸ್ ಮುಖಂಡರಾದ ಬಿ.ಟಿ.ಜಗದೀಶ್,ಇಂಗಳದಾಳ್ ರಘು, ಪ್ರತಿಭಟನೆಗೆ ರೈತರು, ಸಂಘ ಸಂಸ್ಥೆಗಳು ಸಂಘಟನೆಗಳು, ಪೋಷಕರು ಸೇರಿದಂತೆ ವಿವಿಧ ಜನಪತ್ರಿನಿಧಿಗಳು ಸಾಥ್.

About The Author

Leave a Reply

Your email address will not be published. Required fields are marked *