April 20, 2024

Chitradurga hoysala

Kannada news portal

ಅಜ್ಞಾನಿಗೆ ಜ್ಞಾನದ ಬೆಳಕನ್ನು ನೀಡಲು ಈ ಶಿವರಾತ್ರಿ ಮಹೋತ್ಸವ ಸಪ್ತಾಹ ದಾರಿ ದೀಪವಾಗಿದೆ: ಡಾ.ನಿರ್ಮಾಲಾನಂದನಾಥ ಶ್ರೀಗಳು ಕಭೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳಲ್ಲಿ ತಾಯತ್ತನ ಇದೆ ಮಾಜಿ ಸಚಿವ ಆಂಜನೇಯ

1 min read



ಅಜ್ಞಾನಿಗೆ ಜ್ಞಾನದ ಬೆಳಕನ್ನು ನೀಡಲು ಈ ಶಿವರಾತ್ರಿ ಮಹೋತ್ಸವ ಸಪ್ತಾಹ ದಾರಿ ದೀಪವಾಗಿದೆ: ಡಾ.ನಿರ್ಮಾಲಾನಂದನಾಥ ಶ್ರೀಗಳು

ಕಭೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳಲ್ಲಿ ತಾಯತ್ತನ ಇದೆ ಮಾಜಿ ಸಚಿವ ಆಂಜನೇಯ

ಚಿತ್ರದುರ್ಗಹೊಯ್ಸಳ ನ್ಯೂಸ್/

ಚಿತ್ರದುರ್ಗ:
ಅಜ್ಞಾನಿಗೆ ಜ್ಞಾನದ ಬೆಳಕನ್ನು ನೀಡಲು ಈ ಶಿವರಾತ್ರಿ ಮಹೋತ್ಸವ ಸಪ್ತಾಹ ದಾರಿ ದೀಪವಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ.ನಿರ್ಮಾಲಾನಂದನಾಥ ಶ್ರೀಗಳು ತಿಳಿಸಿದರು.
ನಗರದ ಕಭೀರಾನಂದಾಶ್ರಮದವತಿಯಿಂದ ಇಂದಿನಿಂದ ಪ್ರಾರಂಭವಾದ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆಯುವ ಶಿವನಾಮ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಈ ರೀತಿಯಾದ ಕಾರ್ಯಕ್ರಮ ಮಠಾಧೀಶರಿಗಿಂತ ಭಕ್ತರಿಗೆ ಹೆಚ್ಚಿನ ರೀತಿಯ ಅಗತ್ಯ ಇದೆ. ಮಾನವನಲ್ಲಿ ಅಡಗಿರುವ ಕತ್ತಲೆಯನ್ನು ಶಿವರಾತ್ರಿ ಆಚರಣೆಯನ್ನು ಮಾಡುವುದರ ಮೂಲಕ ಕಳೆದುಕೊಳ್ಳಬೇಕಿದೆ.ಶಿವರಾತ್ರಿ ಕತ್ತಲೆಯ ಆಂಧಕಾರವನ್ನು ಹೋಗಲಾಡಿಸುವ ಕಾರ್ಯವನ್ನು ಮಾಡುತ್ತದೆ. ಅಜ್ಞಾನಿಗೆ ಜ್ಞಾನದ ಸಂರ್ಪಕ ಬೇಕಿದೆ ಅದನ್ನು ಈ ರೀತಿಯಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಪಡೆಯಬೇಕಿದೆ ಎಂದರು. ಮಾನವನ ದೇಹಕ್ಕೆ ಶೇ. 40 ರಷ್ಟು ಆಹಾರ ಆನ್ನದಿಂದ ಬಂದರೆ ಉಳಿದೆ ಶೇ.60 ರಷ್ಟು ಆಹಾರ ಗಾಳಿಯಿಂದ ಸಿಗುತ್ತದೆ. ಮನಸ್ಸು ಸಂಸ್ಕಾರದಿಂದ ಸಾಗಬೇಕಿದೆ ಇದರಿಂದ ಇಂದ್ರಿಯಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತವೆ. ಮನಸ್ಸು ಎಂಬ ಬ್ಯಾಟರಿಗೆ ಚಾರ್ಚ ಮಾಡಬೇಕಾದರೆ ಈ ರಿತಿಯಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಚಾರ್ಚ ಮಾಡಬಹುದಾಗಿದೆ. ಹಿಂದಿನ ದಿನಮಾನದಲ್ಲಿ ಹಿರಿಯರು ನಮ್ಮ ನುಡಿಗಳಿಂದ ಕಿರಿಯರಿಗೆ ಮಾರ್ಗದರ್ಶನ ಮಡುತ್ತಿದ್ದರು. ಮನಸ್ಸ್‍ನ್ನು ಸಂಸ್ಕಾರ ಮತ್ತು ಸತ್ಸಂಗವನ್ನು ಒಳಪಡಿಸಬೇಕಿದೆ ಎಂದು ಶ್ರೀಗಳು ತಿಳಿಸಿದರು.

ಡಾಬಸ್ ಪೇಟೆಯ ಮನಕಲ್ಲು ಮಲ್ಲೇಶ್ವರ ಮಠದ ಶ್ರೀ ರಮಾನಂದಸ್ವಾಮಿಗಳು ಮಾತನಾಡಿ, ಆಶ್ರಮದಿಂದ ಅನ್ನ ಮತ್ತು ಶಿಕ್ಷಣದ ದಾಸೋಹ ನಡೆಯುತ್ತಿದೆ. ಅನ್ನ ಕ್ಷಣಿಕವಾದ ತೃಪ್ತಿಯನ್ನು ನೀಡುತ್ತದೆ ಆದರೆ ಶಿಕ್ಷಣ ಕಟ್ಟಿಟ್ಟ ಬುತ್ತಿಯಂತೆ ನಮ್ಮ ಜೊತೆಯಲ್ಲಿಯೇ ಇರುತ್ತದೆ.ವಿದ್ಯೆ ಸದಾ ಮಾನವನನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತದೆ ಜೊತೆಗೆ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಸಹಾ ಮಾಡುತ್ತದೆ. ಇಂದಿನ ದಿನಮಾನದಲ್ಲಿ ಅವಿಭಕ್ತ ಕುಟುಂಬಗಳು ಕಾಣೆಯಾಗುತ್ತಿದೆ. ಶಿವರಾತ್ರಿಯಂದು ಶಿವನಾಮ ಮಂತ್ರವನ್ನು ಸದಾ ಜಪಿಸುತ್ತಿರುಬೇಕಿದೆ. ಮಂತ್ರಕ್ಕೆ ಅಗಾಧವಾದ ಶಕ್ತಿ ಇದೆ. ನಾವುಗಳು ನೀಡುವ ಕೂಡಿಗೆಗಳು ಮಾತ್ರ ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸಾದ್ಯವಿದೆ.ಸಮಾಜದಲ್ಲಿ ಮಾನವ ಸಮಸ್ಯೆಗಳಿಗೆ ನೊಂದು ಬೆಂದಾಗ ಮಾತ್ರ ಪರಿಪೂರ್ಣವಾದ ವ್ಯಕ್ತಿಯಾಗಲು ಸಾಧ್ಯವಿದೆ ಎಂದರು.

ಮಾಜಿ ಸಚಿವರಾದ ಹೆಚ್.ಅಂಜನೇಯ ಮಾತನಾಡಿ, ಕಭೀರಾನಂದಾಶ್ರಮ ಯಾವುದೆ ಧರ್ಮ, ಜಾತಿ ವರ್ಗಕ್ಕೆ ಸೀಮಿತವಾಗಿರದೇ ಎಲ್ಲರನ್ನು ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಆಶ್ರಮವಾಗಿದೆ. ಇಲ್ಲಿನ ಶ್ರೀಗಳಲ್ಲಿ ತಾಯತ್ತನ ಇದೆ. ಎಲ್ಲರನ್ನು ಪ್ರೀತಿಯಿಂದ ನೋಡುವ ಗುಣವನ್ನು ಹೊಂದಿದ್ದಾರೆ. ನಗರದ ಹೂರಗಡೆ ಇರುವ ಗೋಶಾಲೆಯ ಆವರಣದಲ್ಲಿ ವಸತಿ ಶಾಲೆಯನ್ನು ಪ್ರಾರಂಭ ಮಾಡುವಂತೆ ಶ್ರೀಗಳಲ್ಲಿ ಮನವಿ ಮಾಡಿದರು.

ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಶ್ರೀ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಅವಧೂತರು, ಶ್ರೀ ಶಿವಲಿಂಗಾನಂದ ಶ್ರೀಗಳು, ಮಾದರಾ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಆರ್.ಬೀಮಸೇನ್ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎ.ಮುರಳಿ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಟಿ.ಸುರೇಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ನಂದಿನಾಗರಾಜ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಕೆ.ಜಿ.ಮೂಡಲಗಿರಿಯಪ್ಪ, ನಗರಸಭಾ ಸದಸ್ಯರಾದ ಶ್ರೀಮತಿ ರೇಖಾ ಮಂಜುನಾಥ್, ನಗರಾಭೀವೃದ್ದಿ ಸದಸ್ಯರಾದ ಶ್ರೀಮತಿ ರೇಖಾ, ವಿ.ಆರ್ ನಾಗರಾಜ್, ಡಿ.ರಾಜು, ಭಾಗವಹಿಸಿದ್ದರು.

ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠದ ಪಿಯು ಕಾಲೇಜು ಮತ್ತು ಪ್ರಶಿಕ್ಷಣ ಮಹಾ ವಿದ್ಯಾಲಯ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಶ್ರೀ ವಾರಿ ಭಜನಾ ಮಂಡಳಿಯ ಶ್ರೀಮತಿ ಸತ್ಯಪ್ರಭಾ ಮತ್ತು ತಂಡದಿಂದ ಭಜನೆ ನಡೆಯಿತು.

ಇದೇ ಸಂದರ್ಭದಲ್ಲಿ ಕುಮಾರ ಎ.ಆರ್.ವಿದ್ವತ್ ಆರಾಧ್ಯರನ್ನು ಸನ್ಮಾನಿಸಲಾಯಿತು. ಸುಬ್ರಾಯ ಭಟ್ ವೇಧ ಘೋಷವನ್ನು ಮಾಡಿದರೆ ಶಿಕ್ಷಕಿ ಜ್ಯೊತಿ ಪ್ರಾರ್ಥಿಸಿದರು, ಪ್ರಶಾಂತ್ ವಿ.ಎಲ್.ಸ್ವಾಗತಿಸಿದರು. ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Leave a Reply

Your email address will not be published. Required fields are marked *