April 16, 2024

Chitradurga hoysala

Kannada news portal

ನಾಳೆ ಬೆಳ್ಳಿಗೆ 10ರಿಂದ ಮತದಾನಕ್ಕೆ ಕ್ಷಣಗಣನೆ ಆರಂಭ : ಚುನಾವಣಾಧಿಕಾರಿ ಬಿ.ಧನಂಜಯ

1 min read


ನಾಳೆ ಫೆ.27ರಂದು ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಮತದಾನ, ಮತದಾನಕ್ಕೆ ಕ್ಷಣಗಣನೆ ಆರಂಭ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ:ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕಕ್ಕೆ ಚುನಾವಣೆ

ಚಿತ್ರದುರ್ಗಹೊಯ್ಸಳ ನ್ಯೂಸ್/

ಚಿತ್ರದುರ್ಗ, ಫೆಬ್ರವರಿ26:

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-25ನೇ ಸಾಲಿನ ರಾಜ್ಯ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯು 2022ರ ಫೆಬ್ರವರಿ 27ರಂದು ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.00 ರವರೆಗೆ ನಡೆಯಲಿದ್ದು, ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಬಿ.ಧನಂಜಯ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾಭವನ ಚಿತ್ರದುರ್ಗ ಇಲ್ಲಿ ಮತದಾನ ನಡೆಯಲಿದೆ.
ರಾಜ್ಯ ಘಟಕದ ಉಪಾಧ್ಯಕ್ಷರ ಮೂರು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕ್ರಮವಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಂಗ್ಲೆ ಮಲ್ಲಿಕಾರ್ಜುನ, ಭವಾನಿಸಿಂಗ್ ಠಾಕೂರ, ಪುಂಡಲೀಕ. ಭೀ.ಬಾಳೂಜಿ ಇವರು ಕಣದಲ್ಲಿದ್ದು, ಒಬ್ಬ ಮತದಾರ ಮೂರು ಮತಗಳನ್ನು ಚಲಾಯಿಸಬೇಕು.
ಜಿಲ್ಲಾ ಘಟಕ ಚುನಾವಣೆ: ಅಧ್ಯಕ್ಷರ 1 ಹುದ್ದೆಗೆ ಕ್ರಮವಾಗಿ ದಿನೇಶ್ ಗೌಡಗೆರೆ, ನರೇನಹಳ್ಳಿ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ 1 ಹುದ್ದೆಗೆ ಸಿ.ಹೆಂಜಾರಪ್ಪ, ಎಸ್.ಸಿದ್ದರಾಜು, ಖಜಾಂಚಿ 1 ಹುದ್ದೆಗೆ ಕುಮಾರಸ್ವಾಮಿ.ಡಿ, ಮೇಘಗಂಗಾಧರನಾಯ್ಕ ಹಾಗೂ ರಾಜ್ಯ ಕಾರ್ಯಕಾರಿವಸಮಿತಿ ಸದಸ್ಯರ 1 ಹುದ್ದೆಗೆ ಹೆಚ್.ಲಕ್ಷ್ಮಣ್, ಟಿ.ತಿಪ್ಪೇಸ್ವಾಮಿ, ಎಂ.ಯೋಗೀಶ ಇವರು ಚುನಾವಣಾ ಕಣದಲ್ಲಿರುತ್ತಾರೆ. ಒಟ್ಟು ನಾಲ್ಕು ಹುದ್ದೆಗಳಿಗೆ ಮತದಾನ ನಡೆಯುತ್ತಿದ್ದು, ಪ್ರತಿಯೊಬ್ಬ ಮತದಾರರು ನಾಲ್ಕು ಮತ ಚಲಾಯಿಸಬೇಕು. ಮತದಾನ ಮಾಡುವಾಗ ತಾವು ಆಯ್ಕೆ ಮಾಡಬಯಸುವ ಅಭ್ಯರ್ಥಿ ಹೆಸರಿನ ಮುಂದಿರುವ ಕೋಷ್ಠಕದೊಳಗೆ x ಗುರುತು ಒತ್ತುವ ಮೂಲಕ ಮತದಾನ ಮಾಡಬೇಕು.
ಮತದಾನ ಕೊಠಡಿ ಮತ್ತು ಮತ ಎಣಿಕೆ ಕೊಠಡಿಯೊಳಗೆ ಮೊಬೈಲ್ ತರುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚುನಾವಣಾಧಿಕಾರಿಗಳ ಹೊರತುಪಡಿಸಿ ಯಾರೊಬ್ಬರು ಮೊಬೈಲ್ ತರುವುದು, ಚಿತ್ರೀಕರಣ ಮಾಡುವಂತಿಲ್ಲ. ಮತದಾನ ಕೇಂದ್ರದಲ್ಲಿ ಅಭ್ಯರ್ಥಿಗಳ ಪರವಾದ ಓರ್ವ ಏಜೆಂಟ್‍ಗೆ ಅವಕಾಶ ಇದೆ. ಮತ ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಅವರಿಂದ ನಿಯೋಜಿತವಾದ ಏಜೆಂಟ್ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸದಸ್ಯತ್ವದ ಗುರುತಿನ ಚೀಟಿ ಇಲ್ಲದಿದ್ದವರು ಇತರೆ ಯಾವುದೇ ತತ್ಸಮಾನವಾದ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿಯನ್ನು ಹಾಜರು ಪಡಿಸಿ ಮತದಾನ ಮಾಡಬಹುದು. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಿಷೇಧವಿರುತ್ತದೆ. ಮತ ಎಣಿಕೆಯು ಫೆ.27ರಂದು ಮಧ್ಯಾಹ್ನ 3.00 ಗಂಟೆಯ ನಂತರ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *