March 28, 2024

Chitradurga hoysala

Kannada news portal

ತಂದೆ-ತಾಯಿ, ಹಾಗೂ ಕಷ್ಟದಲ್ಲಿ ಸಹಾಯ ಮಾಡಿದ ಸ್ನೇಹಿತರನ್ನು ಎಂದೂ ಮರೆಯಬಾರದು: ಡಿಡಿಪಿಐ

1 min read


ತಂದೆ-ತಾಯಿ, ಹಾಗೂ ಕಷ್ಟದಲ್ಲಿ ಸಹಾಯ ಮಾಡಿದ ಸ್ನೇಹಿತರನ್ನು ಎಂದೂ ಮರೆಯಬಾರದು: ಡಿಡಿಪಿಐ ರಮೇಶ್

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:
ನಗರದ ಐ.ಎಂ.ಎ ಸಭಾಂಗಣದಲ್ಲಿ ಕಂಪಳ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಸನ್ಮಾನ ಹಾಗೂ ಗೆಳೆಯರ ಸಮ್ಮಿಲನ ಕಾರ್ಯಕ್ರಮವನ್ನು ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಎಸ್.ಎಂ.ರಮೇಶ್ ಉದ್ಘಾಟಿಸಿ ನಂತರ ಮಾತನಾಡಿದರು , ಕಂಪಳ ಗೆಳೆಯರ ಬಳಗದಿಂದ ಏರ್ಪಡಿಸುವ ಕಾರ್ಯಕ್ರಮಗಳಿಂದಾಗಿ ದೂರದಲ್ಲಿರುವ ಸ್ನೇಹಿತರು ಒಂದಡೆ ಸೇರಿಕೊಂಡು ತಮ್ಮ ಹಿಂದಿನ ಜೀವನದಲ್ಲಿ ನಡೆದುಹೋದ ಸಂಗತಿಗಳನ್ನು ನೆನಪಿಸಿಕೊಳ್ಳುವುದಕ್ಕೆ ಒಂದು ಉತ್ತಮ ವೇದಿಕೆಯಾಗಿದೆ ಎಂದರು, ಕಂಪಳ ಗೆಳೆಯರ ಬಳಗದಲ್ಲಿ ಬಾಗವಹಿಸಿ 30 ವರ್ಷಗಳ ಹಿಂದಿನ ನೆನಪುಗಳನ್ನು ಜ್ಞಾಪಿಸಿಕೊಂಡರು. ದೇಹಕ್ಕೆ ಮುಪ್ಪಾಗಬಹುದು ಆದರೆ ಮನಸ್ಸಿಗಲ್ಲ ಎಂದರು. ಸ್ನೇಹಿತರ ಸಹಕಾರ ಮತ್ತು ಪ್ರೋತ್ಸಾಹದಿಂದ ನಾನು ಉನ್ನತ ಹುದ್ದೆಯನ್ನು ಅಲಂಕರಿಸಿ ಪವಿತ್ರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ನಮ್ಮನ್ನು ಬೆಳೆಸಿ, ವಿದ್ಯಾಭ್ಯಾಸ ಮಾಡಿಸಿದ ತಂದೆ-ತಾಯಿಯರನ್ನು ಹಾಗೂ ಕಷ್ಟಕಾಲದಲ್ಲಿ ಸಹಾಯ ಮಾಡಿದ ಸ್ನೇಹಿತರನ್ನು ಎಂದು ಮರೆಯಬಾರದೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಜಿಲ್ಲಾ ತರಬೇತಿ ಸಂಸ್ಥೆ, ನಿವೃತ್ತ ಪ್ರಾಂಶುಪಾಲ, ಮಲ್ಲೇಶಪ್ಪ, ಚಿತ್ರದುರ್ಗ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ. ಉಪನಿರ್ದೇಶಕ (ಅಭಿವೃದ್ಧಿ) ಎಸ್.ಕೆ.ಬಿ.ಪ್ರಸಾದ್ ಹಾಗೂ ಬಳಗದ ಹಿರಿಯ ಸದಸ್ಯ ಎಸ್.ಲಕ್ಷ್ಮಣ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಭೂ ದಾಖಲೆಗಳ ಇಲಾಖೆ ಬೆಂಗಳೂರು ನಿವೃತ್ತ ಜಂಟಿ ನಿರ್ದೇಶಕ ವಿ.ಅಜ್ಜಪ್ಪ ಮಾತನಾಡಿ ನಾವುಗಳು ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಬಡ ಕುಟುಂಬಗಳಿಂದ ಬಂದವರಾಗಿದ್ದು, ಹಸಿವು ನಮ್ಮನ್ನು ಕಷ್ಟಪಟ್ಟು ವ್ಯಾಸಂಗ ಮಾಡುವಂತೆ ಮಾಡಿ ಉನ್ನತ ಸ್ಥಾನಕ್ಕೆ ಹೋಗುವುದಕ್ಕೆ ಸಹಾಯಮಾಡಿತು, ನಾನು ರೈತಾಪಿ ಮಗನಾಗಿದ್ದರಿಂದ ರೈತರ ಋಣ ತೀರಿಸಲು ಭೂ ದಾಖಲೆಗಳ ಇಲಾಖೆ ದೊರೆಯುವಂತಾಯಿತು ಎಂದರು. ನನ್ನ ಸೇವಾವಧಿಯಲ್ಲಿ ರೈತರ ಹಲವಾರು ಸಮಸ್ಯೆಗಳಾದ ಭೂಮಿಯ ಸರ್ವೇ, ಪೋಡಿ, ಹದ್ದುಬಸ್ತು, ಪಹಣಿ, ವ್ಯಾಜ್ಯ ಮುಂತಾದ ಕಾರ್ಯಗಳನ್ನು ದಕ್ಷತೆಯಿಂದ ಮಾಡಿರುತ್ತೇನೆಂದರು. ನಾನು ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ನಾನು ಹಣ ವಂಚನೆ ಮಾಡದೆ ಭೂ ಮಾತೆಯ ಸೇವೆಯ ನೆಪದಲ್ಲಿ ಸಾಮಾನ್ಯ ರೈತರಿಗೆ ನ್ಯಾಯ ದೊರಕಿಸಿಕೊಟ್ಟ ಆತ್ಮತೃಪ್ತಿ ನನಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ನಿವೃತ್ತ ಜಂಟಿ ನಿರ್ದೇಶಕ ವಿ.ಅಜ್ಜಪ್ಪ, ಶಿವಮೊಗ್ಗ ಉಪನಿರ್ದೇಶಕರಾದ ಎನ್.ಎಂ.ರಮೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಗೇಹಳ್ಳಿ ತುರುವೆಕೆರೆ ತಾಲ್ಲೂಕು ನಿವೃತ್ತ ಪ್ರಾಂಶುಪಾಲ ಎಂ.ಆರ್.ರಾಮರೆಡ್ಡಿ, ಸರ್ಕಾರಿ ಪ.ಪೂ.ಕಾ.ಕರಿಮುದ್ದನಹಳ್ಳಿ ಹುಣಸೂರು ತಾಲ್ಲೂಕು ನಿವೃತ್ತ ಆಂಗ್ಲ ಉಪನ್ಯಾಸಕ ಎಸ್.ರಾಮಣ್ಣ,ತುಮಕೂರು ಕಾಳಿದಾಸ ಪ.ಪೂ.ಕಾಲೇಜು ನಿವೃತ್ತ ಪ್ರಾಂಶುಪಾಲ ಹೆಚ್.ಚನ್ನಬಸಪ್ಪ, ದಿ| ಕೆ.ಟಿ.ಮಹಾಂತೇಶ್ ರವರ ಧರ್ಮಪತ್ನಿ ಶ್ರೀಮತಿ ಸ್ವರ್ಣಗೌರಿ ಮತ್ತು ದಿ|| ತಿಪ್ಪೇಸ್ವಾಮಿ ಎನ್.ಉಪ್ಪಾರಹಟ್ಟಿ ಇವರ ಧರ್ಮಪತ್ನಿ ಉಮಾದೇವಿ ಇವರುಗಳನ್ನು ಕಂಪಳ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆಡಳಿತ) ಎಂ.ರೇವಣಸಿದ್ದಪ್ಪ ಮಾತನಾಡಿ ಕಂಪಳ ಗೆಳೆಯರ ಬಳಗದಿಂದ ಹಲವಾರು ಸ್ನೇಹಿತರನ್ನು ನೆನಪಿಸಿಕೊಳ್ಳುವ ಮತ್ತು ಗುರುತಿಸಿಕೊಳ್ಳುವ ಕೆಲಸವಾಗಿದೆ ಎಂದರು ಇದೊಂದು ಜಾತ್ಯಾತೀತ ಗೆಳೆಯರ ಬಳಗವಾಗಿದೆ. ಯಾವ ಜಾತಿ ಧರ್ಮಗಳ ಅಂಗೀಲ್ಲದೆ ಸ್ನೇಹ ವಲಯದಲ್ಲಿನ ಕಷ್ಟಗಳ ನಿವಾರಣೆ ಮಾಡಿಕೊಂಡು ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತ ಉನ್ನತ ಮಟ್ಟಕ್ಕೆ ತನ್ನ ಸದಸ್ಯರನ್ನ ಕೊಂಡ್ಯೋದಿದೆ ಈ ಕಂಪಳ ಗೆಳೆಯರ ಬಳಗ ಎಂದರು. ಮುಂದಿನ ದಿನಗಳಲ್ಲಿ ಈ ಬಳಗವನ್ನು ಅಭಿವೃದ್ಧಿ ಪಡಿಸಿ ಉತ್ತಮ ಕಾರ್ಯಗಳನ್ನು ರೂಪಿಸೋಣ ಎಂದರು.
ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕ ಆರ್.ನಾಗರಾಜ್, ಬಿ.ಇಡಿ ಕಾಲೇಜು ಪ್ರಾಧ್ಯಾಪಕ ಎಂ.ಆರ್.ಮಂಜುನಾಥ್, ನಿವೃತ್ತ ಬಿ.ಇ.ಒ ಪಿ.ರಾಮಯ್ಯ, ಪ್ರಾಧ್ಯಾಪಕರಾದ ಡಾ|| ಅಂಜಿನಪ್ಪ, ಡಾ.ಮಂಜಣ್ಣ, ಡಾ.ತಿಮ್ಮಣ್ಣ, ಪ್ರೋ.ರವಿ, ಪ್ರೊ.ಭಾಷಾ, ಎ.ಎಸ್.ಐ ಅಲ್ಕುರಯ್ಯ (ಆನಂದ್), ಬೆಂಗಳೂರು ಗೃಹ ರಕ್ಷಕದಳ ಅಧಿಕಾರಿ ಆರ್.ಪಿ.ಜಯಣ್ಣ, ಕೆ.ಎಸ್.ಎಫ್.ಸಿ ಡೆಪ್ಯೂಟಿ ಮ್ಯಾನೇಜರ್ ಚಿದಾನಂದ, ಉಪನ್ಯಾಸಕರಾದ ಜೈಶ್ರೀನಿವಾಸ್, ತಿಟಪೂರು ಬಸವರಾಜ್, ದೊಡ್ಡಯ್ಯ, ಡಾ.ಕೃಷ್ಣಪ್ಪ, ಹೆಚ್.ಶ್ರೀನಿವಾಸ್, ಹಿಂದಿ ಶಿಕ್ಷಕ ನಾಗರಾಜ್ (ಸದ್ದಂ) ಹಾಗೂ ಇತರರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *