June 27, 2022

Chitradurga hoysala

Kannada news portal

ಅಮಿತ್ ಮಾದಾರಗೆ ಶುಭಾಶಯ ಕೋರಿದ ಶ್ರೀಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ

1 min read

ಅಮಿತ್ ಮಾದಾರಗೆ ಶುಭಾಶಯ ಕೋರಿದ ಶ್ರೀಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ರಾಜ್ಯಕ್ಕೆ ಟಾಪರ್ ಆಗಿ ಘೋಷಣೆ ಆಗಿರುವ ವಿಜಯಪುರ ಜಿಲ್ಲೆಯ ಜುಮನಾಳ ಸರ್ಕಾರಿ ಪ್ರೌಢಶಾಲೆಯ ಅಮಿತ್ ಮಾದಾರ ಅವರನ್ನು ಮಾದರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ. ವಿಧ್ಯಾರ್ಥಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಶುಭಾಶಯ ಕೋರಿದರು.ಅಲ್ಲದೆ ಅಮಿತ್ ನ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅನುಕೂಲಗಳನ್ನು ಶ್ರೀಮಠದಿಂದ ವತಿಯಿಂದ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಅಮಿತ್ ಮಾದರ್ ನ ತಂದೆ ಆನಂದ ನಿಧನರಾಗಿದ್ದು, ತಾಯಿ ಮಾದೇವಿ ಕೂಲಿ ಕೆಲಸ ಮಾಡುತ್ತಾ ಕಡು ಬಡತನದಲ್ಲೇ ಮಗನನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ಅಮಿತ್ ಯೋಗ, ವಾಲಿಬಾಲ್, ಕ್ರಿಕೆಟ್ ಕ್ರಿಡೆಯಲ್ಲಿ ಮುಂಚೂಣಿಯಲ್ಲಿದ್ದು, ಭವಿಷ್ಯದ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವು ಅಗತ್ಯವಿದೆ ಎಂದು ತಾಯಿ ಮಾದೇವಿ ತಿಳಿಸಿದ್ದಾರೆ.

ಮಾದೇವಿ ಅವರಿಗೆ ಮೂವರು ಗಂಡು ಮಕ್ಕಳು. ಮೊದಲನೇ ಪುತ್ರ ಅಮೋಘಸಿದ್ದ ಬಿ.ಇಡಿ, ಎರಡನೇ ಪುತ್ರ ಅಭಿಲಾಷ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಮಕ್ಕಳನ್ನು ಮಾದೇವಿ ಕೂಲಿ ಮಾಡಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *