June 27, 2022

Chitradurga hoysala

Kannada news portal

ಬಿ.ಟಿ.ಜಾಹ್ನವಿ ಅವರಿಗೆ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ

1 min read

 

 

ಬಿ.ಟಿ.ಜಾಹ್ನವಿ ಅವರಿಗೆ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ದಲಿತ ಸಮುದಾಯದ ತೀವ್ರ ಸಂವೇದನಾಶೀಲ ಕಥೆಗಾರ್ತಿಯಾದ ಬಿ.ಟಿ.ಜಾಹ್ನವಿ ಅವರು 2022 ನೇ ಸಾಲಿನ ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದ್ದು ದಾವಣಗೆರೆಯಲ್ಲಿ ಮೇ 27, 28 ರಂದು ನಡೆವ ಮೇ ಸಾಹಿತ್ಯ ಮೇಳದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಬಿ.ಟಿ.ಜಾಹ್ನವಿ ಅವರು ಖ್ಯಾತ ನೇತ್ರತಜ್ಞರೂ ಲೋಕ ಸೇವಾ ಆಯೋಗದ ಸದಸ್ಯರು ಮತ್ತು ಶಾಸಕರೂ ಆಗಿದ್ದಂತಹ ದಿವಂಗತ ಬಿ.ಎಂ.ತಿಪ್ಪೇಸ್ವಾಮಿ ಹಾಗೂ ಸಿ.ಕೆ.ಯಲ್ಲಮ್ಮ ಇವರ ಮಗಳಾಗಿ ೧೯೬೩ರ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಜನಸಿದವರು.

ದಾವಣಗೆರೆಯ ಸೇಂಟ್ ಪಾಲ್ಸ್ ಶಾಲೆಯಲ್ಲಿ ಮತ್ತು ಎ.ವಿ.ಕಮಲಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್‌ನಲ್ಲಿ ಎಂ.ಎ. ಪದವಿಧರೆಯಾದ ಇವರಿಗೆ
ಬರೆಯುವುದರ ಜೊತೆಗೆ ಅಭಿನಯ ಮತ್ತು ಹಾಡುವುದು ಇವರ ಹವ್ಯಾಸವಾಗಿದೆ.

೧೯೮೭ ರಲ್ಲಿ ಅವರ ಮೊದಲ ಕಥೆ ವ್ಯಭಿಚಾರ ಆಗಿನ ಸುದ್ದಿ ಸಂಗಾತಿ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ ಕಳೆದುಕೊಂಡವಳು ಮತ್ತು ತಾಯ್ತನ ಎಂಬ ಕಥೆಗಳು ಪ್ರಕಟವಾದವು. ಲಂಕೇಶ್ ಪತ್ರಿಕೆಯಲ್ಲಿ ಇವರ ವಿಮುಖ, ಕಳ್ಳುಬಳ್ಳಿ, ದೂಪ್ದಳ್ಳಿ ಸೆಕ್ಸಿ ದುರುಗ, ಮುಂತಾದ ಹತ್ತು ಕತೆಗಳು ಪ್ರಕಟವಾದವು.

Leave a Reply

Your email address will not be published. Required fields are marked *