Chitradurga hoysala

Kannada news portal

ಎಸ್ ಜೆ ಎಂ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಟಿ.ಮೋಹನ್ ಸ್ವಾಮಿ ನಿಧನ.

1 min read

 

ಎಸ್ ಜೆ ಎಂ ಪಾಲಿಟೆಕ್ನಿಕ್  ಸಿಬ್ಬಂದಿ ಟಿ.ಮೋಹನ್ ಸ್ವಾಮಿ ನಿಧನ.

ಚಿತ್ರದುರ್ಗ:

ಚಿತ್ರದುರ್ಗದ  ಎಸ್ ಜೆ ಎಂ ಪಾಲಿಟೆಕ್ನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮತ್ತು ಚಂದ್ರವಳ್ಳಿ ಕೆರೆ ನಿರ್ವಹಣೆಯ ವ್ಯವಸ್ಥಾಪಕ ಟಿ.ಮೋಹನ್ ಸ್ವಾಮಿ ಸುಮಾರು 50 ವರ್ಷ ಇವರು ಜೂನ್-16 ಗುರುವಾರ ತಡ ರಾತ್ರಿ ದಿಢೀರ್ ಸಾವು ಕಂಡಿದ್ದು,ಹೃದಯಘಾತ ಆಗಿರಬಹುದು ಎಂದು ಶಂಕಿಸಲಾಗಿದೆ.

ಮಾಜಿ ಶಾಸಕರು ಹಾಗೂ ಮುರುಘಾಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್, ಮಾಜಿ ಜಿಪಂ ಅಧ್ಯಕ್ಷೆ ಸೌಭಾಗ್ಯಮ್ಮ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಿ.ಕಾಂತರಾಜ್ ಸೇರಿದಂತೆ ಮತ್ತಿತರ ಗಣ್ಯರು ಗುರುವಾರ ರಾತ್ರಿಯೇ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಅಪಾರ ಧೈವ ಭಕ್ತರಾಗಿದ್ದರು. ಅಲ್ಲದೆ ಸ್ವಾಮಿ ಅಯ್ಯಪ್ಪ ಕುರಿತ ಭಕ್ತಿಗೀತೆಗಳು, ನವದುರ್ಗೆಯರು ಕುರಿತು ಭಕ್ತಿಗೀತೆಗಳನ್ನು ಆಡಿದ್ದಾರೆ. ಅಪಾರ ಸ್ನೇಹ ವಲಯ ಹೊಂದಿದ್ದರು.

ಮೃತರಿಗೆ ಇಬ್ಬರು ಮಕ್ಕಳು, ಪತ್ನಿ ಇದ್ದಾರೆ.

ಇಂದು ಶುಕ್ರವಾರ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಸಿ.ಎನ್.ಮೋಹನ್ , ರುದ್ರಮುನಿ ಸ್ವಾಮಿ ಕಾಲೇಜು ಸಿಬ್ಬಂದಿ ಸಂತಾಪ:

ಚಿತ್ರದುರ್ಗದ  ಎಸ್ ಜೆ ಎಂ ಪಾಲಿಟೆಕ್ನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಮೋಹನ್  ಅಕಾಲಿಕ ಮತ್ತು ಆಕಸ್ಮಿಕವಾಗಿ ನಿಧನ ಹೊಂದಿದರುವುದು ಅತ್ಯಂತ ದುಃಖದ ಸಂಗತಿ. ದುಃಖ ಸಹಿಸುವ ಶಕ್ತಿ ಬಸವಾದಿ ಶಿವಶರಣರು ಮತ್ತು ಮುರಘೇಶರು ಅವರ ಕುಟುಂಬದ ಎಲ್ಲರಿಗೂ ನೀಡಲಿ ಎಂದು  ಸಿ.ಎನ್.ಮೋಹನ್ , ರುದ್ರಮುನಿ ಸ್ವಾಮಿ ಸೇರಿದಂತೆ ಕಾಲೇಜಿನ ಸಮಸ್ತ ಸಿಬ್ಬಂದಿ    ಸಂತಾಪ ಸೂಚಿಸಿದ್ದಾರೆ.

 

Leave a Reply

Your email address will not be published.