Recent Posts

October 17, 2021

Chitradurga hoysala

Kannada news portal

ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತ ಮತದಾರರ ಋಣ ತೀರಿಸುತ್ತಿದ್ದಾರೆ: ಶಾಸಕ.ಟಿ.ರಘಮೂರ್ತಿ

1 min read

ವರದಿ : ವೀರೇಶ್

ಚಳ್ಳಕೆರೆ-ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ
ಮೂಲಕ ಮತದಾರರ ಋಣ ತೀರಿಸಿದ್ದಾರೆಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಕರ್ನಾಟಕ ಸಹಕಾರ ಖಾದಿ ಉಣ್ಣೆ ಕೈಮಗ್ಗ ಮಹಾಮಂಡಳಿ ಮತ್ತು ಕುರುಬ ಸಮಾಜದ ಬಂಧುಗಳು ಹಮ್ಮಿಕೊಂಡದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಅವರು, ನೂತನವಾಗಿ ಆಯ್ಕೆಯಾದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ರವರು ಜಿಲ್ಲೆಯಾದ್ಯಂತ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅವರ ಎಲ್ಲಾ ಕಾರ್ಯಕ್ಕೂ ನಾನು ಸೇರಿದಂತೆ ಪಕ್ಷದ ಎಲ್ಲಾ ಹಂತದ ಮುಖಂಡರು ಸಹಕರಿಸುವುದಾಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾಸುರೇಶಬಾಬು ಮಾತನಾಡಿ, ಕಳೆದ ಎರಡು ತಿಂಗಳಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಜನರ ಸೇವೆ ಮಾಡಲು ಪಕ್ಷದ ಹಿರಿಯರು ನೀಡಿದ ಅಧಿಕಾರವನ್ನು ನಾನು ಉತ್ತಮವಾಗಿ ಬಳಸಿಕೊಳುತ್ತೇನೆ. ಶಾಸಕರು ಕಳೆದ ನಾಲ್ಕು‌ ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆಗೆ ನಾನು ಕೈಜೋಡಿಸಿ ತುರುವನೂರು ಕಾಲೇಜು ಉಳಿಸುವೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಾಘವೇಂದ್ರ, ರಮೇಶಗೌಡ, ಚಿಕ್ಕಮಧುರೆ ಮಲ್ಲಿಕಾರ್ಜುನ್, ಗೊರ್ಲತ್ತು ಜಯರಾಮ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಮುಖಂಡರಾದ ಕಂದಿಕೆರೆ ಸುರೇಶ್ ಬಾಬು ಮಲ್ಲೇಶಪ್ಪ, ಕಾಮಸುಮುದ್ರ ಜಗನ್ನಾಥ್ ಇದ್ದರು.

Leave a Reply

Your email address will not be published. Required fields are marked *

You may have missed