ಆರೋಗ್ಯ ಸಚಿವ ಶ್ರೀರಾಮುಲು ಸಾಹೇಬರು ಬೇಗ ಗುಣಮುಖವಾಗಲಿ: ಎಲ್ ಐಸಿ ದುಗ್ಗಾವರ ರಂಗಸ್ವಾಮಿ
1 min readಚಳ್ಳಕೆರೆ- ವರದಿ ವೀರೇಶ್
ರಾಜ್ಯದಲ್ಲಿ ಕಳೆದ ಐದು ತಿಂಗಳಿಂದ ಜನರನ್ನು ಬಿಟ್ಟುಬಿಡದೆ ಕಾಡುತ್ತಿರುವ ಕೊರೋನಾ ವೈರಸ್ ನಿಯಂತ್ರದಲ್ಲಿ ರಾಜ್ಯದ ಆರೋಗ್ಯ ಸಚಿವರ ಪಾತ್ರ ಹೆಚ್ಚಿದೆ ಎಂದು ಎಲ್ ಐಸಿ ದುಗ್ಗಾವರ ರಂಗಸ್ವಾಮಿ ತಿಳಿಸಿದರು.
ಅವರು ಭಾನುವಾರ ನಗರದ ಶ್ರೀಮಾನ್ ವೃದ್ದಾಶ್ರಮದಲ್ಲಿ ಸಚಿವರ ಹುಟ್ಟುಹಬ್ಬ ಮತ್ತು ಅವರು ಕೋವಿಡ್ ಸೊಂಕಿನಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಆಶ್ರಮದ ವೃದ್ದರಿಗೆ ಹಾಲು, ಬ್ರೆಡ್, ಬಿಸ್ಕತ್ ವಿತರಿಸಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಹೆಚ್ಚು ಪರಿಶ್ರಮ ವಹಿಸಿದ್ದಾರೆ. ಅವರಿಗೆ ದೇವರು ಆರೋಗ್ಯ ಐಶ್ವರ್ಯ ನೀಡಲಿ ಎಂದರು.
ನಿವೃತ್ತ ಬೆಸ್ಕಾಂ ಅಧಿಕಾರಿ ಪಿ.ರುದ್ರಮೂರ್ತಿ ಮಾತನಾಡಿ, ಬಡವರ, ನಿರ್ಗತಿಕರ ಸಮಸ್ಯೆಗಳನ್ನು ಆಲಿಸುವ ದಯಾಮಯಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕೋವಿಡ್ ನಿಂದ ಬೇಗ ಗುಣ ಮುಖರಾಗಬೇಕು. ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೇಕರಿ ವಿಜಯ್, ಬಿ.ಚನ್ನಕೇಶವ, ಶ್ರೀನಿವಾಸ, ತಿಪ್ಪೇಸ್ವಾಮಿ ಮುಂತಾದವರು ಇದ್ದರು.