ವಿಶೇಷ ಆಹ್ವಾನಿತರಾಗಿ ನೇಮಕ. : ಐದು ದಶಕಗಳ ಸೇವೆಯೇ ಹೆಚ್ ಆಂಜನೇಯರ ಆಯ್ಕೆಗೆ ಮಾನದಂಡ: ಹಳೆಬೀಡು ರಾಮ್ ಪ್ರಸಾದ್
1 min readವಿಶೇಷ ಆಹ್ವಾನಿತರಾಗಿ ನೇಮಕ
ಐದು ದಶಕಗಳ ಸೇವೆಯೇ ಹೆಚ್ ಆಂಜನೇಯರ ಆಯ್ಕೆಗೆ ಮಾನದಂಡ:
ಹಳೆಬೀಡು ರಾಮ್ ಪ್ರಸಾದ್
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಬೆಂಗಳೂರು :
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಮುಂಬರುವ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ “ರಾಜಕೀಯ ವಿದ್ಯಮಾನಗಳ ಸಮಿತಿ” ಯನ್ನು ಶನಿವಾರ ರಚಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮಿತಿಗೆ ಸಂಚಾಲಕರಾಗಿದ್ದು,
ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿಯ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ, ಶಾಸಕ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಮಾರ್ಗರೇಟ್ ಆಳ್ವ,ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ಸತೀಶ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಆರ್. ಧ್ರುವನಾರಾಯಣ, ಸಂಸದ ಡಿ.ಕೆ. ಸುರೇಶ್, ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ಶಾಸಕರಾದ ಕೆ.ಆರ್.ರಮೇಶ್ ಕೆ.ಜೆ.ಜಾರ್ಜ್, ಪಕ್ಷದ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯ ಸುನಿಲ್ ಕನಗೋಳ್, ಶಾಸಕ ಕೃಷ್ಣ ಬೈರೇಗೌಡ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಹಿರಿಯ ಶಾಸಕ ಆರ್. ವಿ.ದೇಶಪಾಂಡೆ, ಅಲ್ಲಂ ವೀರಭದ್ರಪ್ಪ,
ಎಐಸಿಸಿ ಕಾರ್ಯದರ್ಶಿಗಳಾದ. ಬೋಸರಾಜು, ಸಂದೀಪ್ ಇರುತ್ತಾರೆ.
ವಿಶೇಷ ಆಹ್ವಾನಿತರಾಗಿ ನೇಮಕ : ಆಂಜನೇಯ
ಮಾಜಿ ಸಚಿವರಾದ ಎಚ್.ಆಂಜನೇಯ,ಬಿ.ರಮಾನಾಥ ರೈ ,ವಿನಯ್ ಕುಮಾರ್ ಸೊರಕೆ, ರಾಣಿ ಸತೀಶ್, ಉಮಾಶ್ರೀ, ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಳರ್ ರವರು ಈ ಸಮಿತಿಗೆ ವಿಶೇಷ ಆಹ್ವಾನಿ ತರಾಗಿರುವರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐದು ದಶಕಗಳ ಸೇವೆಯೇ ಹೆಚ್ ಆಂಜನೇಯರ ಆಯ್ಕೆಗೆ ಮಾನದಂಡ: ಹಳೆಬೀಡು ರಾಮ್ ಪ್ರಸಾದ್ _________________
ಎಐಸಿಸಿಯು ಪುನರ್ ರಚಿತ ರಾಜಕೀಯ ವಿದ್ಯಮಾನಗಳ ಸಮಿತಿಯನ್ನು ಶನಿವಾರ ರಚಿಸಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಶೇಷ ಆಹ್ವಾನಿತರಾಗಿ ಮಾಜಿ ಸಮಾಜಕಲ್ಯಾಣ ಸಚಿವ,ಕೆಪಿಸಿಸಿ ಉಪಾಧ್ಯಕ್ಷ,ದಕ್ಷಿಣ ಭಾರತದ ಹಿರಿಯ ದಲಿತ ಮುಖಂಡ ಹೆಚ್ ಆಂಜನೇಯ ಅವರನ್ನು ನಿಯುಕ್ತಿಗೊಳಿಸಿ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಆದೇಶ ಹೊರಡಿಸಿರುವುದು ಗಮನಾರ್ಹ ವಿಚಾರವಾಗಿದೆ.
ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ , ಆಂಜನೇಯ ರವರು ಸಲ್ಲಿಸಿರುವ ಸೇವೆಯನ್ನು ಗಮನಿಸಿ ಪಕ್ಷವು ಈ ಅವಕಾಶವನ್ನು ಮಾಡಿಕೊಟ್ಟಿದೆ,ಈ ಅವಕಾಶದಿಂದಾಗಿ ಪಕ್ಷವನ್ನು ವಿಶೇಷವಾಗಿ ಮಧ್ಯಕರ್ನಾಟಕದಲ್ಲಿ ಬಲಗೊಳಿಸುವ ನಿಟ್ಟಿನಲ್ಲಿ ಇವರ ಆಯ್ಕೆಯು ಉತ್ತಮವಾಗಿದ್ದು ಪಕ್ಷದ ಬೆಳವಣಿಗೆಯ ಸಾಧ್ಯತೆಗಳೂ ನಿಚ್ಚಳವಾಗಿವೆ. ಈಗಾಗಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಕೈಗೊಂಡಿರುವ ಸಂಘಟನಾತ್ಮಕ ವಿಷಯಗಳನ್ನು ಬಲಪಡಿಸುವ ಕಾರ್ಯಕ್ಕೆ ಈಗ ಮತ್ತಸ್ಟು ವೇಗ ಸಿಗಲಿದ್ದು, ಆಂಜನೇಯ ರವರ ಸಾಮಾಜಿಕ ನ್ಯಾಯದ ಪರವಾಗಿನ ಬದ್ಧತೆ, ನೊಂದವರ ಕಣ್ಣಿರೊರೆಸುವ ತಮ್ಮ ಆಶಯಕ್ಕೆ ನೆರವಾಗುವ ವಿಶ್ವಾಸ ನಮ್ಮದಾಗಿದೆ ಎಂದು
ಹಳೇಬೀಡು ರಾಮ್ ಪ್ರಸಾದ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .