Chitradurga hoysala

Kannada news portal

ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಕಾರ್ಯವೈಖರಿ ನಾಡು ಗಮನಿಸಿದೆ : ಮಾದಾರ ಶ್ರೀ ಇಮ್ಮಡಿ ಶ್ರೀಗಳು ಅಪರೂಪದ ಸಂತ : ಶಾಂತವೀರ ಸ್ವಾಮೀಜಿ

1 min read

ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಹಿಂದುಳಿದ ದಲಿತ ಮಠಾಧೀಶರ ಮೂಲಕ ನಡೆಸುವ ಕಾರ್ಯವೈಖರಿ ನಾಡು ಗಮನಿಸಿದೆ:ಮಾದಾರ ಶ್ರೀ

ಮಮತೆಯಿಂದ ಮನಗೆದ್ದಿರುವ ಅಪರೂಪದ ಸಂತ ಇಮ್ಮಡಿ ಶ್ರೀಗಳು:ಶಾಂತವೀರ ಸ್ವಾಮೀಜಿ

ಚಿತ್ರದುರ್ಗ ಹೊಯ್ಸಳ:

ಚಿತ್ರದುರ್ಗ:

ನಿರ್ಮಲ ಮನಸ್ಸಿನ ನಿರಾಭಾರಿ ಸಂತ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಎಂದು ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ಭೋವಿ ಗುರುಪೀಠದಲ್ಲಿ ಸೋಮವಾರ ನಡೆದ ಭೋವಿ ಜನೋತ್ಸವದಲ್ಲಿ ಮಾತನಾಡಿದ ಅವರು ಭೋವಿ ಸಮಾಜ ಸುಸಂಸ್ಕೃತ ಸಮಾಜ ಹಿನ್ನೆಲೆಗೆ ಗುರುಗಳ ಶ್ರಮ, ತಪಸ್ಸು, ಸಂಘಟನೆ, ಕೌಶಲ್ಯ, ಸಮಾಜದ ಮೇಲೆ ಇರುವ ಪ್ರೀತಿ ಎಂದು ಹೇಳಿದರು.

ನಾಡಿನ ಎಲ್ಲಾ ಸಂತರಿಗೆ ಆತ್ಮೀಯತೆ ಮತ್ತು ಮಮತೆಯಿಂದ ಮನಗೆದ್ದಿರುವ ಅಪರೂಪದ ಸಂತ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಡವ ವಿದ್ಯಾರ್ಥಿಗಳನ್ನು ದತ್ತು ಪಡೆದು ಸಾವಿರಾರು ವಿದ್ಯಾರ್ಥಿಗಳನ್ನು ವಿದ್ಯೆಗೆ ಹಚ್ಚಿದ ಶ್ರೀಗಳು ಪ್ರಚಾರಕ್ಕೆ ಎಂದು ಬಾರಲಿಲ್ಲ, ಕೆಲಸ ಮಾಡುವ ನಿಷ್ಕಲ್ಮಶ ಮನಸ್ಸಿನ ಶ್ರೀಗಳು. ಪ್ರಬುಧ್ಧ ಚಿಂತನೆ, ಪ್ರಬುದ್ಧ ನಡವಳಿಕೆ ಮೂಲಕ ಪ್ರಭಾವಿಗಳ ಮನಗೆದ್ದ ದೀರ ಸನ್ಯಾಸಿ, ಚಿಕ್ಕ ವಯಸ್ಸಿನಲ್ಲಿ ಚೊಕ್ಕವಾಗಿ ಸಮಾಜ ಕಟ್ಟಿದ ಪರಂಪರೆ ಇಲ್ಲದ ಸಮಾಜಕ್ಕೆ ಪರಿಶ್ರಮದ ಮೂಲಕ ಪ್ರಭಾವಿ ಸಮಾಜವನ್ನಾಗಿ ರೂಪಿಸಿದವರು ಎಂದು ತಿಳಿಸಿದರು.

ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ ಗುರುಕುಲ, ಮಠ ಪೀಠಗಳ ಪರಂಪರೆ ಕೆಲವು ಸಮಾಜಗಳಿಗೆ ಸೀಮಿತವಾಗಿತ್ತು, ಪಾರಂಪರಿಕವಾಗಿ ಅವರೇ ನಡೆಸಿಕೊಂಡು ಬಂದಿದ್ದರು, ಆದರೆ ಹಿಂದುಳಿದ ದಲಿತ ಶೋಷಿತರಿಗೆ ೨೧ನೇ ಶತಮಾನದಲ್ಲಿ ಮಠಾಧೀಶರಾಗಿ ಸಮಾಜವನ್ನು ಕಟ್ಟಿಕೊಳ್ಳುವ ಅವಕಾಶ ದೊರೆಯಿತು. ಸಾಮಾಜಿಕವಾಗಿ ಹಿಂದುಳಿದ ಸಮಾಜವನ್ನು ಸಂಘಟನೆ, ಶಿಕ್ಷಣ, ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಪಡೆಯುವ ಸಮಾಜವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಕೆಲಸ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮತ್ತು ಹಿಂದುಳಿದ ದಲಿತ ಮಠಾಧೀಶರ ಮೂಲಕ ನಡೆಯುತ್ತಿರುವುದು ನಾಡು ಗಮನಿಸಿದೆ ಎಂದು ಹೇಳಿದರು.

ದಾವಣಗೆರೆಯ ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ ಬುದ್ಧಿವಂತರು, ಹಣವಂತರ ಮಧ್ಯೆ ಮಾನವೀಯತೆ ಹಾಗೂ ಹೃದಯವಂತಿಕೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳಲ್ಲಿ ನೋಡಲು ಸಾಧ್ಯ. ಸಂಕಷ್ಟದಲ್ಲಿ ಇರುವವರಿಗೆ ದೌಡಾಯಿಸಿಕೊಂಡು ಹೋಗಿ ಸಹಾಯ ಮಾಡುವ ವ್ಯಕ್ತಿತ್ವ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಬಗೆಹರಿಸುವ ಚಾಕಚಕ್ಯತೆವುಳ್ಳ ಶ್ರೀಗಳಾಗಿದ್ದಾರೆ ಎಂದು ತಿಳಿಸಿದರು.

ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ ಅಲ್ಪಾವಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಮಠದ ಕಡೆ ತಿರುಗಿ ನೋಡುವ ವ್ಯಕ್ತಿತ್ವ ಹೊಂದಿದವರು ಇಮ್ಮಡಿ ಶ್ರೀಗಳು. ಅವರಿಗೆ ಶ್ರೀಮಂತರ ಮೇಲಿರುವ ಪ್ರೀತಿಗಿಂತ ಬಡವರ ಮೇಲೆ ಕಾಳಜಿ ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ವ ಅವರದು ಎಂದು ಹೇಳಿದರು.

ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ವಿದ್ಯಾವಂತರು, ಜ್ಞಾನವಂತ, ಪ್ರಜ್ಞಾವಂತರ ಸಂಘಟನೆಯಾದರೆ ಹೋರಾಟ ದಿಟ್ಟ ಪಥದಲ್ಲಿ ಸಾಗಲು ಸಾಧ್ಯ, ಇತ್ತೀಚಿನ ದಿನಗಳಲ್ಲಿ ಶಿಕ್ಷಣವಂತರಲ್ಲಿ ಸಂಘಟನೆ ಹೆಚ್ಚಾಗುವ ವಿರಳತೆ ಕಾಣುತ್ತಿದೆ. ಸಂಘಟನೆ ಮುಖ್ಯವಾಗಿ ಸಮಾಜದ ಅಭಿವೃದ್ಧಿ ದೃಷ್ಠಿಯಲ್ಲಿ ನೋಡಿ ಆ ರಥವನ್ನು ಎಳೆಯಬೇಕು, ವಿದ್ಯಾವಂತರು ಸಮಾನತೆ ದೃಷ್ಠಿಕೋನ ಇಟ್ಟುಕೊಂಡು ಸಮಾಜವನ್ನು ಸಮರ್ಥ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

ರವಿ ಮಾಕಳಿ ಮಾತನಾಡಿ ರಾಷ್ಟ್ರದಲ್ಲಿ ಭೋವಿ ಸಮಾಜವನ್ನು ಗುರುತಿಸುವ ರೀತಿ ಗುರುಗಳು ಸೇವೆ ಮಾಡಿದ್ದಾರೆ. ಲಕ್ಷಾಂತರ ಕಾರ್ಯಕರ್ತರನ್ನ ಸೃಷ್ಠಿಸಿ ಭಾರತಾದ್ಯಂತರ ವಡ್ಡರನ್ನು ಒಗ್ಗೂಡಿಸಲು ಅವರ ಶ್ರಮ ಅವಿಸ್ಮರಣೀಯ ಎಂದು ಹೇಳಿದರು.

ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಅಡಪದ ಗುರುಪೀಠದ ಅನ್ನದಾನಿ ಅಪ್ಪಣ್ಣ ಸ್ವಾಮೀಜಿ, ಬಸವ ಮರುಳಸಿದ್ಧ ಸ್ವಾಮೀಜಿ, ರಾಮನಂದಾಸ್ವಾಮೀಜಿ, ಶಾಂತಲಿಂಗಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಮಾತನಾಡಿದರು.

ರಾಷ್ಟೀಯ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಜಿಲ್ಲಾ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಲಕ್ಷ್ಮಣ, ನಗರಸಭೆ ಸದಸ್ಯ ತಿಮ್ಮಣ್ಣ, ಮುಖಂಡರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಆಂಜನೇಯ, ದಾವಣಗೆರೆಯ ವೈ.ರಾಮಪ್ಪ, ಹಾವೇರಿಯ ರವಿ ಪೂಜಾರ, ಹೈಕೋರ್ಟ್ನ ವಕೀಲರಾದ ಶಂಕ್ರಪ್ಪ, ಸಿ.ಓ.ಗೌನಹಳ್ಳಿ ಗೋವಿಂದಪ್ಪ, ಶಿವರುದ್ರಯ್ಯಸ್ವಾಮಿ ಮತ್ತು ದೇಶದ ವಿವಿಧ ರಾಜ್ಯಗಳಿಂದ ಮುಖಂಡರು ಭಾಗವಹಿಸಿದ್ದರು. ೪೫೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Leave a Reply

Your email address will not be published.