Chitradurga hoysala

Kannada news portal

ಖ್ಯಾತ ಸಾಹಿತಿ ಬಿ ಎಲ್ ವೇಣು ಮನೆಗೆ ಮಾಜಿ ಸಚಿವ ಹೆಚ್ ಆಂಜನೇಯ ಬೇಟಿ

1 min read

ಖ್ಯಾತ ಸಾಹಿತಿ ಬಿ ಎಲ್ ವೇಣು ಮನೆಗೆ ಮಾಜಿ ಸಚಿವ ಹೆಚ್ ಆಂಜನೇಯ ಬೇಟಿ

ಖ್ಯಾತ ಸಾಹಿತಿ ಬಿ ಎಲ್ ವೇಣು ಮನೆಗೆ ಮಾಜಿ ಸಚಿವ ಹೆಚ್. ಆಂಜನೇಯ ಬೇಟಿ

ಚಿತ್ರದುರ್ಗಹೊಯ್ಸಳ ನ್ಯೂಸ್/

ಚಿತ್ರದುರ್ಗ :

ಕನ್ನಡ ನಾಡಿನ ಖ್ಯಾತ ಸಾಹಿತಿ ಬಿ.ಎಲ್.ವೇಣು ಅವರು ದುರ್ಗದ ನೆಲದ ಆಸ್ತಿ. ಇವರಿಗೆ ನಿರಂತರ ಬೆದರಿಕೆ ಪತ್ರ ಬರುತ್ತಿರುವುದು ಅವರ ಕುಟುಂಬ ಸದಸ್ಯರಲ್ಲಿ ಸಹಜವಾಗಿ ಆತಂಕ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ವೇಣು ಹಾಗೂ ಕುಟುಂಬ ಸದಸ್ಯರಿಗೆ ಆತ್ಮಸ್ಥೈರ್ಯದ ಮಾತು ಹೇಳುವುದು ನಮ್ಮೆಲ್ಲರ ಕರ್ತವ್ಯ ಆಗಿದೆ. ಈ ಹಿನ್ನೆಲೆಯಲ್ಲಿ ಕೆಳಗೋಟೆ ಭುವನೇಶ್ವರಿ ವೃತ್ತದ ಬಳಿಯಿರುವ ಬಿ ಎಲ್ ವೇಣು ಅವರ ನಿವಾಸಕ್ಕೆ ಜು.25 ರಂದು ಸೋಮವಾರ ಬೆಳಗ್ಗೆ 10.00 ಗಂಟೆಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರೊಂದಿಗೆ ಭೇಟಿ ನೀಡುತ್ತಿದ್ದೆನೆ . ಮಾಧ್ಯಮ ಮಿತ್ರರು,ಹಿತೈಷಿಗಳು ಈ ಸಂದರ್ಭದಲ್ಲಿ ಆಗಮಿಸಲು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.