ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸವನ್ನು ಮಾಡದೆ ಕಲೆಕ್ಷನ್ ದಂದೆಯಲ್ಲಿ ತೊಡಗಿದೆ: ಬಿ.ಎಚ್.ವೀರಭದ್ರಪ್ಪ ಆರೋಪ
1 min read
ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸವನ್ನು ಮಾಡದೆ ಕಲೆಕ್ಷನ್ ದಂದೆಯಲ್ಲಿ ತೊಡಗಿದೆ: ಬಿ.ಎಚ್.ವೀರಭದ್ರಪ್ಪ ಆರೋಪ
ಪ.ಜಾತಿ ಪ.ಪಂಗಡ – ಹಿಂದುಳಿದ ಜನಾಂಗಕ್ಕೆ 1225 ಕೋಟಿ ಸಾಲ ಮನ್ನ ಮಾಡಿದ ಸರಾದರ ಸಿದ್ದರಾಮಯ್ಯ : ಚಿದಾನಂದಪ್ಪ ಅಭಿಮತ
ಚಿತ್ರದುರ್ಗ ಹೊಯ್ಸಳ ಸುದ್ದಿ//
ದಾವಣಗೆರೆ:
ಮಾಜಿ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ
ನಾಯಕರು ಸಾಮಾನ್ಯ ಜನರ ಮೂಲಭೂತ ಸೌಕರ್ಯಗಳ
ಭಾಗ್ಯಗಳ ಸರದಾರ ಸಿದ್ದರಾಮಯ್ಯನವರ ೭೫ನೇ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ಗಾಂಧಿ ನಗರದ ಡಾ॥.ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನೇರವೆರಿತು.
ಪ್ರಾಸ್ತಾವಿಕವಾಗಿ ಚಿದಾನಂದಪ್ಪ ರವರು ಮಾತನಾಡಿ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಪ.ಜಾತಿ ಪ.ಪಂಗಡದ ಮತ್ತು ಹಿಂದುಳಿದ ಜನಾಂಗಕ್ಕೆ 1225 ಕೋಟಿ ಸಾಲ ಮನ್ನ ಮಾಡಿದರು ಮತ್ತು 36 ಸಾವಿರ ಕೊಳವೆ ಬಾವಿ ಕೊರೆಸಿದರು ಅದರಲ್ಲಿ 34 ಸಾವಿರ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಿಸುವುದರ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಯಾವ ಮುಖ್ಯಮಂತ್ರಿ ಯು ಮಾಡದ ಮೂಲ ಸೌಲಭ್ಯವನ್ನು ನೀಡುವುದರ ಜೊತೆಗೆ 760 ಭವನಗಳು 8 20 ವಸತಿ ಶಾಲೆಗಳು ಹಲವಾರು ಇತರೆ ಯೋಜನೆಯನ್ನು ಅವರ ಅವಧಿಯಲ್ಲಿ ಮಾಡಿದ್ದಾರೆ,ಎಂದು ಚಿದಾನಂದ ರವರು ಅಂಕಿ ಅಂಶಗಳನ್ನು ಸಭೆಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷ ಬಿ.ಹಚ್ ವೀರಭದ್ರಪ್ಪ ಮಾತಾನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಕೇವಲ ಕಲೆಕ್ಷನ್ ದಂದೆಯಲ್ಲಿ ತೊಡಗಿದೆ ಎಂದು ಆರೋಪ ಮಾಡಿದರು, ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ 75 ಸ್ವಾತಂತ್ರ್ಯೋತ್ಸವ ಮತ್ತು ಆಗಸ್ಟ್ ಮೂರರಂದು ನಡೆಯಲಿರುವ ಸಿದ್ದರಾಮಯ್ಯ 75ನೇ ಅಮೃತ ಮಹೋತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಾವಣಗೆರೆ ಜಿಲ್ಲಾ ಅಹಿಂದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಮಹಾನಗರ ಪಾಲಿಕೆ ಮಾಜಿಸದಸ್ಯರು ಎಲ್.ಎಂ.ಹನುಮಂತಪ್ಪ ನವರು ಭಾಗವಹಿಸಿ ಮಾತನಾಡಿ ಬಿಜೆಪಿಯವರಿಗೆ ಕಾಂಗ್ರೆಸ್ಸಿನು ದೂಷಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಕಾಂಗ್ರೆಸ್ ಪಕ್ಷ ಅಧಿಕಾರ ಅವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಏಳಿಗೆಗೆ ಕ್ಷಮಿಸಿದೆ ಎಂದರು.
ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾದವರು ಭಾಗವಹಿಸಬೇಕು ಮತ್ತು ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳನ್ನು ಚಿಂದಾನಂದ ಅಣ್ಣನವರು ಹೇಳಿದ ಹಾಗೆ ಸಾರ್ವಜನಿಕರಿಗೆ ತಿಳಿಸಿ ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಬರುವಂತೆ ಪ್ರೋತ್ಸಾಹಿಸಬೇಕು ಎಂದು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ.ಜಿಲ್ಲಾ ಉಪಾಧ್ಯಕ್ಷ ಸಾಗರ.ಎಲ್.ಹೆಚ್ ಸಭೆಯಲ್ಲಿದ್ದ ಕಾರ್ಯಕರ್ತರನ್ನು ಕೋರಿದರು.
ಸಮಾರಂಭದಲ್ಲಿ ಮಾದಿಗ ಸಮಾಜದ ಮುಖಂಡರು ಗಳಾದ ಬಿ. ಎಂ. ರಾಮಸ್ವಾಮಿ, ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ,ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಬಿ.ಎಂ.ಈಶ್ವರ್. ಕಾರ್ಯದರ್ಶಿಗಳು.
ಯುವ ಮುಖಂಡರು ಕುಮಾರ್ ಜೆ ಡಿ,ಚಿದಾನಂದ್ ಸಮಾಜದ ಮುಖಂಡರು,ಬಿ.ಆರ್ ಶಿವಮೂರ್ತಿ, ರಾಕೇಶ್ ಜಿ.ಚಿರಂಜೀವಿ ಆರ್, ಎಸ್ ಎಂ ಹರೀಶ್ ಎಚ್,ಮಲ್ಲಿಕಾರ್ಜುನ್,
ಇನ್ನೂ ಅನೇಕ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.