Chitradurga hoysala

Kannada news portal

ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಬಡ ಜೀವ _________________ (ಕೂಲಿ ಕಾರ್ಮಿಕ ತೊಡರನಾಳು ಮಹಾಂತೇಶನ ನೆರವಿಗಾಗಿ ಮನವಿ)

1 min read


ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಬಡ ಜೀವ _________________ (ಕೂಲಿ ಕಾರ್ಮಿಕ ತೊಡರನಾಳು ಮಹಾಂತೇಶನ ನೆರವಿಗಾಗಿ ಮನವಿ)

ಚಿತ್ರದುರ್ಗ ಹೊಯ್ಸಳ ಸುದ್ದಿ//
ಹೊಳಲ್ಕೆರೆ :

ತಾಲ್ಲೂಕಿನ ತೊಡರನಾಳು ಗ್ರಾಮದ ಬಡ ಕೂಲಿ ಕಾರ್ಮಿಕ ಎನ್ ಪಿ ಮಹಾಂತೇಶ್ ಕಳೆದ ಆರೇಳು ತಿಂಗಳುಗಳಿಂದ ಎರಡೂ ಕಿಡ್ನಿ, ವೈಫಲ್ಯದಿಂದ ನರಳುತ್ತಿದ್ದಾರೆ.

ಪ್ರತಿ ಎರಡ್ಮೂರು ದಿನಗಳಿಗೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿದೆ. ಸಾಲ ಮಾಡಿದ ಹಣವೆಲ್ಲವೂ ಖರ್ಚಾಗಿದೆ. ಆಸ್ಪತ್ರೆ ಹಾಗೂ ಡಯಾಲಿಸಿಸ್‌ಗೆ ಹಣದ ಖರ್ಚು ಬೆಳೆಯುತ್ತಲೇ ಇದೆ ಎಂದು ತಂದೆ ಪ್ರಸಾದಪ್ಪ ಹೇಳಿದರು.
ಪ್ರಸ್ತುತ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರವ ಮಹಾಂತೇಶ್, ಪ್ರತಿ ಬಾರಿಯ ಡಯಾಲಿಸಿಸ್ ಅನ್ನು ಸ್ಥಳೀಯ ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ. ೩೫ ರ ಅಸುಪಾಸಿನ ಮಹಾಂತೇಶ್ ಗೆ ಮೂರು ಚಿಕ್ಕ ಮಕ್ಕಳಿದ್ದಾರೆ. ಅವನು ಇನ್ನೂ ಬಾಳಿ ಬದುಕಬೇಕಿದೆ, ಅದ್ದರಿಂದ ಅವನಿಗೆ ಒಂದು ಕಿಡ್ನಿಯನ್ನು ಕೊಡಲು ಅವರ ತಂದೆ ಸಿದ್ದರಿದ್ದಾರೆ. ಆದರೆ ಅವರ ಕುಟುಂಬದವು ಕೂಲಿ ಮಾಡಿ ಜೀವನ ಸಾಗಿಸುವುದರಿಂದ ಕಿಡ್ನಿ ಟ್ರಾನ್ಸ್ ಪಲೆಂಟ್ ಗೆ ಏಳೆಂಟು ಲಕ್ಷಗಳು ಖರ್ಚಾಗಲಿದೆ ಎಂದು ವೈದ್ಯರು ಹೇಳಿರುವ ಹಣ ಹೊಂದಿಸಲಾಗದೆ
ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎನ್ನತ್ತಾರೆ ಸೋದರ ಸಂಭಂದಿ ಅಮೃತೇಶ್. ಏನಾದರೂ ಮಾಡಿ ಊರಿನ ಮಗನನ್ನು ಉಳಿಸಿಕೊಳ್ಳಬೇಕು ಎಂದು ಊರಿನ ಸ್ನೇಹಿತರು , ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಕಟಿಸಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಸಹಾಯ ಮಾಡಲು ಇಚ್ಛಿಸುವವರು ಮಹಾಂತೇಶ ಎನ್ ಪಿ ತಂದೆ ಪ್ರಸಾದಪ್ಪ, ವಯಸ್ಸು – 33, ಕೆಲಸ – ಕೂಲಿ , ತೊಡರನಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

ಅಕೌಂಟ್ ಡೀಟೇಲ್ಸ್.
ಬ್ಯಾಂಕ್ ಹೆಸರು : HDFC Bank
Branch : Chitradurga
Name : Mahantesh N
A/c NO : 50100116715494
IFSC code – HDFC0002566.
&
ಪೋನ್ ಪೇ ಹಾಗೂ ಗೂಗಲ್ ಪೇ ನಂಬರ್ – 8722014170. ಮೊಬೈಲ್‌ ನಂಬರ್ – 9741134265 .

Leave a Reply

Your email address will not be published.