May 19, 2024

Chitradurga hoysala

Kannada news portal

ವಾಣಿ ಸಕ್ಕರೆ ಕಾಲೇಜು ಬಯಲು ರಂಗಮಂದಿರಕ್ಕೆ ಶಾಸಕರ ಅನುದಾನದಲ್ಲಿ 10 ಲಕ್ಷ: ಶಾಸಕಿ ಪೂರ್ಣಿಮಾ

1 min read

ಹಿರಿಯೂರು : ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನ್ಯ ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಬಯಲು ರಂಗಮಂದಿರ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ರೂ.10.00 ಲಕ್ಷ ಅನುದಾನವನ್ನು ಶಾಸಕರು ಮಂಜೂರು ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಶ್ರೀ ಕಬಡ್ಡಿ ಶ್ರೀನಿವಾಸ, ಟಿ.ಚಂದ್ರಶೇಖರ್, ಬಿಕೆ ಕರಿಯಪ್ಪ, ಶೋಭಾ, ವಕೀಲರಾದ ಸೈಯದ್ ನವಾಜ್, ಸಿಪಿಐ ರಾಘವೇಂದ್ರ, ಜಿಲ್ಲಾ ವನ್ಯ ಜೀವಿ ಪರಿಪಾಲಕ ರಘುರಾಮ್, ಸರವಣ, ಪ್ರಾಂಶುಪಾಲ ಡಿ.ಧರಣೇಂದ್ರಯ್ಯ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *