April 24, 2024

Chitradurga hoysala

Kannada news portal

ಆಗಸ್ಟ್ 5 ಮತ್ತು 12 ರಂದು ವರಮಹಾಲಕ್ಷ್ಮಿ ಹಬ್ಬ ಆಚರಣೆಯಾಗಲಿದೆ.

1 min read

ಹಿಂದುಗಳಿಗೆ ಸಂಬಂಧಿಸಿ ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿ ಪೂಜೆ ವ್ರತ ಮಹತ್ವದ ಮಂಗಳಕರ ಆಚರಣೆ.
ಪಂಚಾಂಗ ವ್ಯತ್ಯಾಸದ ಕಾರಣ ಈ ವರ್ಷ ಆಗಸ್ಟ್ 5 ಮತ್ತು 12 ರಂದು ವರಮಹಾಲಕ್ಷ್ಮಿ ಹಬ್ಬ ಆಚರಣೆಯಾಗಲಿದೆ.

ಕರ್ನಾಟಕದಲ್ಲಿ ಬಹುತೇಕ ಆಗಸ್ಟ್ 5ರಂದು ವರಮಹಾಲಕ್ಷ್ಮಿ ಪೂಜೆವ್ರತಾಚರಣೆ ಜರುಗಲಿದೆ.

ಶ್ರಾವಣ ಮಾಸ ಎಂಬುದು ಸಾಲು ಸಾಲು ಹಬ್ಬಗಳು. ಅವುಗಳನ್ನು ಆಚರಿಸುವ ಸಂಭ್ರಮ, ಸಡಗರ ನಾಡಿನೆಲ್ಲೆಡೆ ಪಸರಿಸಿರುತ್ತದೆ. ಅದರಲ್ಲೂ ವರಮಹಾಲಕ್ಷ್ಮಿ ಮಹಿಳೆಯರ ಹಬ್ಬ. ಸಂಭ್ರಮ, ಸಡಗರ ತುಸು ಹೆಚ್ಚೇ ಇರುತ್ತದೆ. ಹಾಗಾದರೆ ಈ ವರ್ಷ ಹಬ್ಬದ ದಿನಾಂಕ, ಮುಹೂರ್ತ ಇಲ್ಲಿದೆ.

ಇರಲಿ, ದಿನಾಂಕ ಮತ್ತು ಮುಹೂರ್ತಕ್ಕೆ ಮೊದಲು ಹಬ್ಬದ ಆಚರಣೆ ಎಲ್ಲೆಲ್ಲಿ ಹೇಗೆ ಎಂಬುದನ್ನು ತಿಳಿಯೋಣ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಎಲ್ಲೆಡೆ ಶ್ರಾವಣ ಮಾಸದಲ್ಲಿ ಲಕ್ಷ್ಮಿ ಹಬ್ಬ ಆಚರಿಸುತ್ತಾರೆ. ವ್ಯತ್ಯಾಸ ಇಷ್ಟೆ. ಉತ್ತರಭಾರತದವರು ವರಮಹಾಲಕ್ಷ್ಮಿ ಪೂಜೆಯನ್ನು ಉತ್ಸವದ ರೂಪದಲ್ಲಿ ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಹಬ್ಬ ಮತ್ತು ವ್ರತದ ಆಚರಣೆಯ ಮೂಲಕ ವರಮಹಾಲಕ್ಷ್ಮಿಯನ್ನು ಒಲಿಸಲು ಪ್ರಯತ್ನಿಸುತ್ತಾರೆ.

ಯಾಕೆ ವರಮಹಾಲಕ್ಷ್ಮಿ ವ್ರತ ಪೂಜೆಗೆ ಇಷ್ಟು ಮಹತ್ವ? ದೇವಿಯ ಈ ವ್ರತ ಹಾಗೂ ಹಬ್ಬವನ್ನು ಆಚರಿಸಿದರೆ ದಾರಿದ್ರವೆಲ್ಲ ನಾಶವಾಗಿ ಮನೆಯಲ್ಲಿ ಐಶ್ವರ್ಯ ನೆಲೆಸುವುದೆಂಬ ನಂಬಿಕೆಯಲ್ಲಿ ಈ ವ್ರತಾಚರಣೆ, ಪೂಜೆಗಳನ್ನು ಮಾಡಲಾಗುತ್ತದೆ.

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಭಾಗಗಳಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆಗೆ ಹೆಚ್ಚು ಒತ್ತು. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಆದ್ಯತೆ. ಈಗಾಗಲೇ ಈ ಹಬ್ಬದ ಆಚರಣೆಗೆ ಪೂರ್ವ ತಯಾರಿ ಶುರುವಾಗಿದೆ.

ಅಂದ ಮೇಲೆ ಹಬ್ಬದ ದಿನವೂ ಆಗಸ್ಟ್ 5ರ ಶುಕ್ರವಾರ. ಕೆಲವರು ಆಗಸ್ಟ್ 12ರಂದು ಶುಕ್ರವಾರವೂ ಆಚರಿಸುತ್ತಾರೆ.
ಈ ದಿನ ಕೆಲವರು ಮೋಕ್ಷ ಲಕ್ಷ್ಮಿಪೂಜೆಯನ್ನು ಮಾಡುತ್ತಾರೆ. ಕರ್ನಾಟಕದಲ್ಲಿ ಬಹುತೇಕ ಆಗಸ್ಟ್ 5ರಂದು ವರಮಹಾಲಕ್ಷ್ಮಿ. ಈ ಬಾರಿ ವರಮಹಾಲಕ್ಷ್ಮಿ ವ್ರತ 2022 ನ್ನು ಆಚರಿಸುವುದಕ್ಕೆ ನಾಲ್ಕು ಮುಹೂರ್ತಗಳಿವೆ.

ವರಮಹಾಲಕ್ಷ್ಮಿ ವ್ರತ/ಪೂಜೆ 2022 ಪೂಜೆ ಮುಹೂರ್ತ:

1. ಆಗಸ್ಟ್ 5ರಂದು ಬೆಳಗ್ಗೆ ವರಮಹಾಲಕ್ಷ್ಮಿ ವ್ರತದ
ಮುಹೂರ್ತ ಉದಯಕಾಲದ ಪೂಜೆ ಸಮಯ –
ಬೆಳಗ್ಗೆ 6:00 ರಿಂದ ಬೆಳಗ್ಗೆ 8.20 ರ ತನಕ

2. ವರಲಕ್ಷ್ಮಿ ವ್ರತ ಮುಹೂರ್ತ ಮಧ್ಯಾಹ್ನ

ಪೂರ್ವಾಹ್ನ 9.20 ರಿಂದ ಪೂರ್ವಾಹ್ನ 11.05 ರವರೆಗೆ
ಪೂರ್ವಾಹ್ನ 11.54 ರಿಂದ ಮಧ್ಯಾಹ್ನ 12.35 ರವರೆಗೆ.

3. ಸಂಜೆ ವರಮಹಾಲಕ್ಷ್ಮಿ ವ್ರತ ಮುಹೂರ್ತ ಪ್ರದೋಷ
ಕಾಲದ ಪೂಜೆ ಸಮಯ – ಮುಸ್ಸಂಜೆ 6.40 ರಿಂದ
ರಾತ್ರಿ 7.40 ರ ತನಕ

4. ಶುಭ ಮುಹೂರ್ತ – ಅಭಿಜಿತ್ ಮುಹೂರ್ತ :
ಪೂರ್ವಾಹ್ನ 11:50 ರಿಂದ ಮಧ್ಯಾಹ್ನ 12:42 ರ ವರೆಗೆ

ಅಮೃತ ಕಾಲ:
ಪೂರ್ವಾಹ್ನ 09:53 ರಿಂದ ಪೂರ್ವಾಹ್ನ 11:29.

ಈ ದಿನದಂದು ವರ-ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟಲಕ್ಷ್ಮಿ ಅಥವಾ ಶ್ರೀ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿ ಮತ್ತು ಪುಷ್ಟಿ ಎಂಬ ಎಂಟು ದೇವತೆಗಳನ್ನು ಪೂಜಿಸುವುದಕ್ಕೆ ಸಮಾನವೆನ್ನುವ ನಂಬಿಕೆಯಿದೆ. ವರಲಕ್ಷ್ಮಿ ವ್ರತವನ್ನು ಪುರುಷರು ಮತ್ತು ಮಹಿಳೆಯರು ಕೂಡ ಆಚರಿಸಬಹುದು ಎಂಬ ಅಂಶದ ಪ್ರಸ್ತಾಪವಿದೆ. ಆದಾಗ್ಯೂ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ, ವರಲಕ್ಷ್ಮಿ ವ್ರತವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ಮಾತ್ರ ಆಚರಿಸುತ್ತಾರೆ. ವರಲಕ್ಷ್ಮಿ ವ್ರತವನ್ನು ಮಕ್ಕಳು, ಸಂಗಾತಿ, ಐಷಾರಾಮಿ ಮತ್ತು ಎಲ್ಲಾ ರೀತಿಯ ಐಹಿಕ ಸಂತೋಷಗಳನ್ನು ಈಡೇರಿಸುವಂತೆ ಕೋರಿ ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ.

About The Author

Leave a Reply

Your email address will not be published. Required fields are marked *