ಶ್ರೀ ಎಚ್.ಡಿ.ದೇವೇಗೌಡ ಪ್ರತಿಷ್ಠಾನ ಪ್ರಶಸ್ತಿಗೆ ಡಾ.ಜಿ.ಪಿ. ರಾಘವನ್ ಸೇರಿ ಯುಗಧರ್ಮ ರಾಮಣ್ಣ, ಮಂದಕೃಷ್ಣ ಮಾದಿಗ ಆಯ್ಕೆ.
1 min read
ಶ್ರೀ ಎಚ್.ಡಿ.ದೇವೇಗೌಡ ಪ್ರತಿಷ್ಠಾನ ಪ್ರಶಸ್ತಿಗೆ ಡಾ.ರಾಘವನ್
ಸೇರಿ ಯುಗಧರ್ಮ ರಾಮಣ್ಣ,ಮಂದಕೃಷ್ಣ ಮಾದಿಗ ಆಯ್ಕೆ.
ಚಿತ್ರದುರ್ಗ ಹೊಯ್ಸಳ ಸುದ್ದಿ//
ಚಿತ್ರದುರ್ಗ:
ದಾವಣಗೆರೆ ನಗರದ ಶ್ರೀ ಎಚ್.ಡಿ.ದೇವೇಗೌಡ ಪ್ರತಿಷ್ಠಾನ ನೀಡುತ್ತಿರುವ ಎಚ್.ಡಿ.ದೇವೇಗೌಡ ಪ್ರಶಸ್ತಿಗೆ ಮೂವರು ಸಾಧಕರು ಆಯ್ಕೆ.
2021ನೇ ಸಾಲಿಗೆ ಕೋವಿಡ್ ಸಂದರ್ಭದಲ್ಲಿ ಜನ ಮೆಚ್ಚುವಂತೆ ಕೆಲಸ ಮಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ
ಡಾ.ಜಿ.ಪಿ. ರಾಘವನ್
2020ನೇ ಸಾಲಿಗೆ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಿದ್ಧನ ಮಠದ ಯುಗಧರ್ಮ ರಾಮಣ್ಣ
ಹಾಗೂ 2022ನೇ ಸಾಲಿಗೆ ಆಂಧ್ರ ಪ್ರದೇಶ ಮೂಲದ ಸಾಮಾಜಿಕ ಹೋರಾಟಗಾರ ಮಂದಕೃಷ್ಣ ಮಾದಿಗ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 7ರಂದು ಮಧ್ಯಾಹ್ನ 12ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದೇವೇಗೌಡರ ಜನ್ಮದಿನದ ನೆನಪಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರತಿ ವರ್ಷ ಗುರುತಿಸಿ ಪ್ರಶಸ್ತಿ
ನೀಡಲಾಗುತ್ತದೆ.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಬಂಡಪ್ಪ ಕಾಶಂಪುರ್ ವಹಿಸುತ್ತಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ,ಶಾಸಕ ಟಿ.ಪಿ.ಶರವಣ ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ.ಗುಡ್ಡಪ್ಪ ಇವರು ಪತ್ರಿಕೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.