Chitradurga hoysala

Kannada news portal

ಇಂದಿನಿಂದ ಶ್ರೀರಾಯರ 351ನೇ ಆರಾಧನೆಯ ಸಪ್ತ ರಾತ್ರೋತ್ಸವಕ್ಕೆ ಚಾಲನೆ

1 min read

ಇಂದಿನಿಂದ ಶ್ರೀರಾಯರ 351ನೇ ಆರಾಧನೆಯ ಸಪ್ತ ರಾತ್ರೋತ್ಸವಕ್ಕೆ ಚಾಲನೆ

ಚಿತ್ರದುರ್ಗ ಹೊಯ್ಸಳ ಸುದ್ದಿ//

ರಾಯಚೂರು:

ಶ್ರೀರಾಘವೇಂದ್ರ ತೀರ್ಥರ 351ನೇ ಆರಾಧನಾ ಮಹೋತ್ಸವ, ಇವತ್ತು ಮಳೆಯ ಮಧ್ಯೆಯೂ ಮಂತ್ರಾಲಯದಲ್ಲಿ ಆರಂಭಗೊಂಡಿದೆ.ಮಂತ್ರಾಲಯದಲ್ಲಿ ಈ ದಿನ ಆರಂಭಗೊಳ್ಳುತ್ತಿರುವಂತ ಸಪ್ತರಾತ್ರೋತ್ಸವಕ್ಕೆ ದೇಶ, ವಿದೇಶಗಳಿಂದ ಭಕ್ತರು ಆಗಮಿಸೋ ಹಿನ್ನಲೆಯಲ್ಲಿ ಸಕಲ ಸೌಲಭ್ಯದ ವ್ಯವಸ್ಥೆ ಕೂಡ ಮಾಡಲಾಗಿದೆ.

ಆಗಸ್ಟ್ 10 ಇಂದು ಸಂಜೆ 7-೦೦ಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಧ್ವಜಾರೋಹಣ, ಗೋ, ಧಾನ್ಯ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನದ ಮೂಲಕ ಇಂದಿನಿಂದ ಶ್ರೀರಾಯರ 351ನೇ ಆರಾಧನೆಯ ಸಪ್ತ ರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.