April 23, 2024

Chitradurga hoysala

Kannada news portal

ಹಾವೇರಿ ರೈಲು ನಿಲ್ದಾಣದಲ್ಲಿ ———————————– ದೇಶ ವಿಭಜನೆಯ ದುರಂತ ————————————- ಕ್ಷಣಗಳ ಚಿತ್ರ ಪ್ರದರ್ಶನ.

1 min read



ಹಾವೇರಿ ರೈಲು ನಿಲ್ದಾಣದಲ್ಲಿ

ದೇಶ ವಿಭಜನೆಯ ದುರಂತ

ಕ್ಷಣಗಳ ಚಿತ್ರ ಪ್ರದರ್ಶನ.
———————————–_

ಚಿತ್ರದುರ್ಗ ಹೊಯ್ಸಳ ಸುದ್ದಿ//

ಹಾವೇರಿ ಆ 14:

ದೇಶ ಇಬ್ಬಾಗವಾದ ದುರಂತ ಕಥೆಯ ಕ್ಷಣಗಳನ್ನು ಚಿತ್ರದ ಮೂಲಕ ಬಿಂಬಿಸುವ ಎರಡು ದಿನಗಳ ಅಪರೂಪದ ಚಿತ್ರಪ್ರದರ್ಶನವೊಂದು ಹಾವೇರಿ ಶ್ರೀಮೈಲಾರ ಮಹದೇವ ರೈಲು ನಿಲ್ದಾಣದಲ್ಲಿ ಇಂದಿನಿಂದ ಆರಂಭಗೊಂಡಿದೆ.

ಇಂದು ಮುಂಜಾನೆ ಮಾಜೀ ಸೈನಿಕ ನಿಂಗನಗೌಡ ಸೋಮನಗೌಡ ಗುರುನಗೌಡ್ರ ಅವರು ಪ್ರದರ್ಶನವನ್ನು ಉದ್ಘಾಟಿಸಿದರಲ್ಲದೆ , ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರೊಡನೆ ಕರ್ನಾಟಕದಿಂದ ಭಾಗಿಯಾಗಿದ್ದ ಏಕೈಕ ಸತ್ಯಾಗ್ರಹಿ , ಇಲ್ಲಿಗೆ ಸಮೀಪದ ಮೂಟೆಬೆನ್ನೂರಿನ ಅಪ್ರತಿಮ ಯುವ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವರು ಹೊಸರಿತ್ತಿಯಲ್ಲಿ ಆಂಗ್ಲರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದ್ದು , ಅವರ ಗೌರವಾರ್ಥ ಹಾವೇರಿ ನಿಲ್ದಾಣಕ್ಕೆ ಮಹದೇವರ ಹೆಸರನ್ನಿಡಲಾಗಿದೆ.

ಚಿತ್ರ ಪ್ರದರ್ಶನ ಇಂದು ಮತ್ತು ನಾಳೆ ಎರಡು ದಿನಗಳು ನಡೆಯಲಿದ್ದು , ಇಂದಿನ ಸಮಾರಂಭದಲ್ಲಿ ನಿಲ್ದಾಣ ವ್ಯವಸ್ಥಾಪಕ ಬಿ.ಕೆ.ಸಿಂಗ್ ಹಾಗೂ ಮುಖ್ಯ ವಾಣಿಜ್ಯ ಇನ್ಸ್ಪೆಕ್ಟರ್ ಸೋಮಶೇಖರ್ ಹಾಜರಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ವೀಕ್ಷಿಸುವ ಮೂಲಕ ಸದುಪಯೋಗ ಪಡೆಯಬೇಕೆಂದು ಮುಖ್ಯ ವಾಣಿಜ್ಯ ಮೇಲ್ವೀಚಾರಕ ಎ.ಕೆ. ಶಂಕರಾನಂದ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿಯೂ ಪ್ರದರ್ಶನ

– ಇದೇ ರೀತಿಯ ಚಿತ್ರ ಪ್ರದರ್ಶನ ದಾವಣಗೆರೆ ರೈಲು ನಿಲ್ದಾಣದಲ್ಲಿಯೂ ವ್ಯವಸ್ಥೆಗೊಳಿಸಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕೆಂದು ಮುಖ್ಯ ವಾಣಿಜ್ಯ ಮೇಲ್ವಿಚಾರಕ ರಾಕೇಶ್ ಬಾಬರ್ ಹಾಗೂ ಮುಖ್ಯ ವಾಣಿಜ್ಯ ಇನ್ಸ್ಪೆಕ್ಟರ್ ಗಣೇಶ್ ರಾವ್ ಕೋರಿದ್ದಾರೆ.

About The Author

Leave a Reply

Your email address will not be published. Required fields are marked *