March 29, 2024

Chitradurga hoysala

Kannada news portal

ಇಂದಿನ ಪ್ರತಿಭಟನೆಗೆ ಬನ್ನಿ : ಮಾಜಿ ಸಚಿವ ಎಚ್.ಆಂಜನೇಯ

1 min read


ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಖಂಡಿಸಿ ಇಂದು ಚಿತ್ರದುರ್ಗದಲ್ಲಿ ಪ್ರತಿಭಟನೆ

ಚಿತ್ರದುರ್ಗ:

ಮಳೆಹಾನಿ ಪ್ರದೇಶದ ಜನರ ಸಂಕಷ್ಟ ಆಲಿಸಲು ಹೊರಟಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿಗರು ಮೊಟ್ಟೆ ಎಸೆದು ವಿಕೃತ ಮೆರೆದಿರುವುದನ್ನು ಖಂಡಿಸಿ *ಇಂದು ಆಗಸ್ಟ್ 19ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ* ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪ್ರಜಾಪ್ರಭುತ್ವ ಕಗ್ಗೊಲೆಗೆ ಮುಂದಾಗಿರುವ, ಪ್ರತಿ ವಿಷಯದಲ್ಲು ವಿಕೃತ ಮೆರೆಯುತ್ತಿರುವ, ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ಪಕ್ಷದವರು, ಈಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಜನರ ಸಂಕಷ್ಟಕ್ಜೆ ಸ್ಪಂದಿಸುವುದಕ್ಕೂ ಅಡ್ಡಿಪಡಿಸಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದು ಪ್ರಜಾಪ್ರಭತ್ವಕ್ಕೆ ಅಪಚಾರ ಎಸಗಿದ್ದಾರೆ. ಈ ಘಟನೆ ಅಭಿಮಾನಿಗಳ ಮನಸ್ಸಿಗೆ ಘಾಸಿ ಉಂಟು ಮಾಡಿದೆ.

ಭಾಜಪ ಮುಖಂಡರ ಈ ಕೆಟ್ಟ ವರ್ತನೆ ಖಂಡಿಸಿ, ಇಂದು ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್, ಎಸ್.ತಿಪ್ಪೇಸ್ವಾಮಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜಪೀರ್, ಮುಖಂಡರಾದ ಡಾ.ಹನುಮಲಿ ಷಣ್ಮುಖಪ್ಪ, ರಘು ಆಚಾರ್, ಡಾ.ಯೋಗೀಶ್ ಬಾಬು, ಬಿ.ಸೋಮಶೇಖರ್ ಸೇರಿದಂತೆ ಪಕ್ಷದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ನೀಡಲು ಮನವಿ ಮಾಡಿಕೊಳ್ಳುತ್ತೆನೆ ಎಂದು
ಎಚ್.ಅಂಜನೇಯ ಮಾಜಿ ಸಚಿವರು ಕೆಪಿಸಿಸಿ ಉಪಾಧ್ಯಕ್ಷರು ಪ್ರಕಟಣೆ ಮೂಲಕ ಕೋರಿದ್ದರೆ.

About The Author

Leave a Reply

Your email address will not be published. Required fields are marked *