Chitradurga hoysala

Kannada news portal

ಉಮೇಶ್ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ : ಕೇಂದ್ರ ಸಚಿವರಿಂದ ಅಭಿನಂದನೆ

1 min read

ಉಮೇಶ್ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ : ಕೇಂದ್ರ ಸಚಿವರಿಂದ ಅಭಿನಂದನೆ ________________

ಚಿತ್ರದುರ್ಗ ಹೊಯ್ಸಳ ಸದ್ದಿ:

ಚಿತ್ರದುರ್ಗ :

ನಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ,ತೊಡರನಾಳು ಗ್ರಾಮದ ವಾಸಿ ಟಿಪಿ ಉಮೇಶ್ ರವರನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅಭಿನಂದಿಸಿದ್ದಾರೆ.

ಯಾವ ಖಾಸಗಿ ಶಿಕ್ಷಣ ಸಂಸ್ಥೆಗೂ ಕಡಿಮೆ ಇಲ್ಲದಂತೆ ತಮ್ಮ ಬೋಧನ ಕೌಶಲ್ಯದಿಂದಾಗಿ ಗ್ರಾಮದಲ್ಲಿ ಬೇರೂರಿದ್ದ ಮೂಡ ನಂಬಿಕೆಗಳ ಮೊಲೋತ್ಪಾಟನೆ, ಪೋಷಕರಲ್ಲಿ ಶಿಕ್ಷಣದ ಜಾಗೃತಿ, ವೈಜ್ಞಾನಿಕ ದೃಷ್ಟಿ ಕೋನದಲ್ಲಿ ವಿಷಯ ವಿಶ್ಲೇಷಣೆ, ಡಿಜಿಟಲ್ ಮಾಧ್ಯಮದ ಮೂಲಕ ಶಿಕ್ಷಣದ ವ್ಯಾಪಕತೆಯ ಕ್ರಮಗಳು , ಸರ್ವರ ಮನ್ನಣೆಗಳಿಸುವಂತೆ ಮಾಡುವ ಮೂಲಕ ಶಾಲಾ ದಾಖಲಾತಿಯಲ್ಲಿ ಪ್ರಗತಿ ಕಾಣುವಂತೆ ಮಾಡಿ ಡಾ. ಅಂಬೇಡ್ಕರ್ ರವರ ಪರಿಕಲ್ಪನೆಯಂತೆ ” ಶಿಕ್ಷಣವೇ ಎಲ್ಲಾ ಸಮಸ್ಯೆಗೆ ಪರಿಹಾರ” ಎಂಬುದನ್ನು ಸಾಕಾರಗೊಳಿಸಿದ ನಿಮ್ಮ ಪ್ರಯತ್ನವನ್ನು ಕೇಂದ್ರ ಸರ್ಕಾರ ಗುರುತಿಸಿ “ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು “ಟಿಪಿ ಉಮೇಶ್ ರವರಿಗೆ ಘೋಷಿಸಿದ್ದು, ಕೇಂದ್ರ ಸಚಿವನಾದ ನನಗೆ ಮತ್ತು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.ಈ ಸಮಾಜ ಮುಖಿ ನಿಮ್ಮ ಕಾರ್ಯವು ನಮ್ಮ ಶಿಕ್ಷಕ ವರ್ಗಕ್ಕೆ ಪ್ರೇರಣೆ ನೀಡುವಂತಾಗಲಿ ಎಂದು ಆಶಿಸಿ , ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published.