March 29, 2024

Chitradurga hoysala

Kannada news portal

ಯಲಬುರ್ಗಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಬಾಳಪ್ಪ ಎಸ್,ವೀರಾಪೂರ.

1 min read

ಯಲಬುರ್ಗಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಬಾಳಪ್ಪ ಎಸ್,ವೀರಾಪೂರ.

ಯಲಬುರ್ಗಾ :

ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಯಾವುದೇ ಅಭಿವೃದ್ಧಿಯಾಗಿಲ್ಲ ಆದ್ದರಿಂದ ನಾನೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸ್ವತಂತ್ರ್ಯಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಕರ್ನಾಟಕ ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಾಳಪ್ಪ ಎಸ್ ವೀರಾಪೂರ
ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸ್ವತಂತ್ರ ಸಿಕ್ಕು 70 ವರ್ಷಗಳು ಗತಿಸಿದರು ಇದುವರಿಗೆ ತಾಲೂಕ ಅಭಿವೃದ್ಧಿಯಾಗಲಿಲ್ಲ ಅಭಿವೃದ್ಧಿಯ ಬಗ್ಗೆ ಅನೇಕ ಬಾರಿ ಹೋರಾಟವನ್ನು ಮಾಡಿರುವೆ.
ಹಾಲಿ ಮತ್ತು ಮಾಜಿ ಸಚಿವರು ಬರಿ ಸಿಸಿ ರಸ್ತೆ ಮಾಡಿರುವುದನ್ನು ಬಿಟ್ಟರೆ ಬೇರೆ ಏನು ಮಾಡಲಿಲ್ಲ ಯಲಬುರ್ಗಾ ಪಟ್ಟಣಕ್ಕೆ ಇದುವರಗೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಮಾಡಲಿಲ್ಲ ,ಸರಕಾರಿ ಆಸ್ಪತ್ರೆಗಳಿವೆ ಆದರೆ ವೈದ್ಯರಿಲ್ಲ ,ಶಾಲೆಗಳಿವೆ ಶಿಕ್ಷಕರಿಲ್ಲ ಜನತೆಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿಲ್ಲ, ಹಾಲಿ ಮತ್ತು ಮಾಜಿ ಶಾಸಕರು ಬರಿ ಅಭಿವೃದ್ಧಿ ಮಾಡಿದ್ದೆವೆ ಎಂದು ಬಾಯಿಯಿಂದ ಹೇಳುತ್ತಾರೆ ವಿನಃ ಹೇಳಿಕೊಳ್ಳುವಂತ ಅಭಿವೃದ್ಧಿ ಏನು ಮಾಡಲಿಲ್ಲ ಇದಕ್ಕೆ ನಮ್ಮನ್ನಾಳುವ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯಲಬುರ್ಗಾ ಅಭಿವೃದ್ಧಿಯಿಂದ ಹಿಂದುಳಿದಿದೆ ,ತೊಂಡಿಹಾಳ, ಬಂಡಿಹಾಳ ರಸ್ತೆ ಸಂಪರ್ಕಕ್ಕೆ ಸೇತುವೆ ನಿರ್ಮಿಸಲು ನಮ್ಮ ಸಂಘಟನೆಯಿಂದ ಅನೇಕ ಹೋರಾಟ ಮಾಡಿದ್ದೆವೆ ನಮ್ಮ ಹೋರಾಟದ ಫಲವಾಗಿ ಇಂದು ಸೇತುವೆ ಕಾಮಗಾರಿ ಪ್ರಾರಂಭ ವಾಗಿದೆ ಯಲಬುರ್ಗಾ ಪಟ್ಟಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಹೋರಾಟ ಮಾಡೀರುವೆ ಕ್ಷೇತ್ರದ ಇನ್ನು ಅನೇಕ ಸಮಸ್ಯಗಳಿವೆ ಈ ಸಮಸ್ಯಗಳ ಇತ್ಯರ್ಥವಾಗಲು ನಾನು ಸದ್ಯ ನಡೆಯಲಿರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಮತದಾರರು ಹಣ ಹೆಂಡಕ್ಕೆ ಮಾರು ಹೋಗದೆ ನಮ್ಮಂತ ಹೋರಾಟಗಾರರಿಗೆ ಬೆಂಬಲಿಸಬೇಕೆಂದು ಹೇಳಿದರು

ಸುದ್ದಿಗೋಷ್ಠಿಯಲ್ಲಿ ವಕೀಲರುಗಳಾದ ಪ್ರಕಾಶ ಎಲ್.ಹಾದಿಮನಿ .ಅಮರೇಶ್ ಎಸ್ .ಹೆಚ್. ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *