ನಿಪ್ಪಾಣಿ ಕಾಲೇಜಿಗೆ ಹಣವಿಲ್ಲ ಎಂದರೆ ಬಿಕ್ಷೆ ಬೇಡಿ ಕೊಡತ್ತಿವಿ, ತುರುವನೂರು ಕಾಲೇಜು ಸ್ಥಳಾಂತರ ಮಾಡಬೇಡಿ:,ಸ್ವಾಮೀಜಿಗಳ ಆಗ್ರಹ.
1 min readಚಿತ್ರದುರ್ಗ: ತುರುವನೂರು ಕಾಲೇಜು ಸ್ಥಳಾಂತರ ಅದೇಶವನ್ನು ವಿರೋಧಿಸಿ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ.
ತಾಲೂಕಿನ ತುರುವನೂರಿನಲ್ಲಿ ಶಾಸಕರ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕನಕ ಗುರುಪೀಠದಈಶ್ವರಾನಂದಸ್ವಾಮಿಜಿಗಳು, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಪುರಿ ಸ್ವಾಮೀಜಿಗಳು, ಕೋಳದಮಠದ ಶಾಂತ ವೀರ ಸ್ವಾಮೀಜಿ ಹಾಗೂ ಯಾದವ ಮಹಾಸಂಸ್ಥಾನದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ದಿವ್ಯಸಾನಿಧ್ಯದೊಂದಿಗೆ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಕಾಲೇಜು ಅನ್ನು ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ, ಬೆಂಗಳೂರು ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ತುರುವನೂರು ಕಾಲೇಜು ಸ್ಥಳಾಂತರ ಅದೇಶವನ್ನು ವಿರೋಧಿಸಿ ಹಮ್ಮಿಕೊಂಡಿರುವ ಬೆಂಗಳೂರು ಪಾದಯಾತ್ರೆಗೆ ಮಹಾಸ್ವಾಮಿಗಳು ಶುಭ ಹಾರೈಸಿ ಚಾಲನೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಹಾಗೂ ಕಾಲೇಜು ಸ್ಥಳಾಂತರ ಆದೇಶವನ್ನು ವಿರೋಧಿಸಿ ಚಿತ್ರದುರ್ಗ ಜಿಲ್ಲೆಯ ಮಠಾಧೀಶರ ನಿಪ್ಪಾಣಿಗೆ ಕಾಲೇಜು ಕೊಡಿ ಅದಕ್ಕೆ ಬೇಕಾಗಿರುವ ಹಣವನ್ನು ನಾವು ಸ್ವಾಮೀಜಿಗಳು ಬಿಕ್ಷೆ ಬೇಡಿ ಕೊಡುತ್ತೆವೆ ಹಾಗೂ ಪಾದಯಾತ್ರೆಯಲ್ಲಿ ಬಂಧಿಸಿದರೆ ನಾವು ನಿಮ್ಮ ಜೊತೆ ಬರುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಕನಕ ಗುರುಪೀಠದ ಈಶ್ವರಾನಂದಸ್ವಾಮಿಜಿ ತಿಳಿಸಿದ್ದಾರೆ.
ತುರುವನೂರಿನಲ್ಲಿ ಸಭೆ ನಡೆಸಿದ ಸ್ವಾಮೀಜಿಗಳು, ಶಾಸಕರು,ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಂಘಟನೆಗಳು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲುವ ಮೂಲಕ ಬೆಂಗಳೂರು ಪಾದಯಾತ್ರೆಗೆ ಹೊರಟರು.
ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರಕ್ಕೆ ಆದೇಶ ಆಗಿರುವುದನ್ನ ವಿರೋಧಿಸಿ ಕಳೆದ ಮೂರು ದಿನಗಳಿಂದ ಧರಣಿ ಸತ್ಯಾಗ್ರಹ ಮಾಡಿದ್ದರು, ಅದರೆ ಈವರೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಪಾದಯಾತ್ರೆ ಮುಂದಾಗಿದ್ದಾರೆ.
ಪಾದಯಾತ್ರೆಗೆ ಜಿಲ್ಲೆಯ ಪ್ರಗತಿಪರ ಹೋರಾಟಗಾರರು ಪೋಷಕರು, ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಪ್ರಗತಿಪರ ಚಿಂತಕರು, ಮಠಾಧೀಶರು ಸೇರಿದಂತೆ ಜಿಲ್ಲೆಯ ಹಲವು ಸಂಘಟನೆಗಳು ಭಾಗಿಯಾಗಿದ್ದಾರೆ.