ಶ್ರೀರಾಮುಲು ಗುಣಮುಖವಾಗಲಿ ಎಂದು ವಿಶೇಷ ಪೂಜೆ ಪ್ರಾರ್ಥನೆ
1 min readಮೊಳಕಾಲ್ಮುರು: ಮೊಳಕಾಲ್ಮೂರು ಬಿಜೆಪಿ ವತಿಯಿಂದ ಜನಪ್ರಿಯ ಶಾಸಕರು ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ಬಿ ಶ್ರೀರಾಮುಲು ಅವರಿಗೆ ಕರೋನಾ ದೃಢಪಟ್ಟ ಹಿನ್ನೆಲೆ ಶೀಘ್ರವಾಗಿ ಗುಣಮುಖವಾಗಲಿ ಎಂದು ಈ ದಿನ ಮೊಳಕಾಲ್ಮುರಿನ ಮಾರ್ಕಂಡೇಯ ಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷರು ಡಾ॥ ಪಿ ಎಮ್ ಮಂಜುನಾಥ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿಜಯ್ ಬಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭು ನೇರ್ಲಹಳ್ಳಿ , ಬಿಜೆಪಿ ಮುಖಂಡರಾದ ಪರಮೇಶ್ವರಪ್ಪ, ಶ್ರೀರಾಮ್ ರೆಡ್ಡಿ, ಸಿದ್ಧಾರ್ಥ, ಮಂಜುನಾಥ್, ಶಾಂತರಾಮ್, ರಘು, ಲಕ್ಷ್ಮಣ್, ಮುಂತಾದವರು ಇದ್ದರು.
