ತಾಳಕೇರಿ ಸಕಾ೯ರಿ ಪ್ರೌಢ ಶಾಲೆಗೆ ಬಣ್ಣ ಸುಣ್ಣದ ಹೊಳಪು.
1 min readಅನು ಅಕ್ಕ ತಂಡದ ಸಮಾಜಮುಖಿ ಕಾರ್ಯಕ್ಕೆ ಸಲಾಂ | ಶಾಲೆ ದುರಸ್ತಿ,ಬಣ್ಣ ಹಚ್ಚುವುದಕ್ಕೆ ಯುವಕರು, ಶಿಕ್ಷಕರು ಸಾಥ್.
ತಾಳಕೇರಿ ಸಕಾ೯ರಿ ಪ್ರೌಢ ಶಾಲೆಗೆ ಬಣ್ಣ ಸುಣ್ಣದ ಹೊಳಪು.
ವರದಿ : ಬಾಲರಾಜ ತಾಳಕೇರಿ
ಯಲಬುರ್ಗಾ:
ಸಕಾ೯ರಿ ಶಾಲೆಗಳಿಗೆ ಮೂಲಸೌಕರ್ಯ, ಅಭಿವೃದ್ಧಿ ಪಡಿಸುವಲ್ಲಿ ಆಳುವ ಸರಕಾರಗಳು ನಿರ್ಲಕ್ಷ್ಯ, ಮತ್ತೊಂದೆಡೆ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾದ್ಯಮ ಶಾಲೆಗಳಿಗೆ ಸೇರಿಸುವ ವ್ಯಾಮೋಹ, ಇಂತಹ ಹಲವಾರು ಸಮಸ್ಯೆ ಸಿಲುಕಿ ಕನ್ನಡ ಮಾದ್ಯಮ ಸಕಾ೯ರಿ ಶಾಲೆಗಳು ನಲುಗಿ ಹೋಗಿವೆ.ಆದರೆ ಪ್ರಜ್ಞಾವಂತರು ,ಕನ್ನಡ ಮನಸ್ಸುಗಳ ಕನ್ನಡ ಮಾದ್ಯಮ ಸಕಾ೯ರಿ ಶಾಲೆಗಳನ್ನು ತಮ್ಮ ಕೈಲಾದಷ್ಟು ಅಭಿವೃದ್ಧಿಪಡಿಸಿ,ದುರಸ್ತಿಗೊಳಿಸಿ,
ಬಣ್ಣ ಸುಣ್ಣದ ಬಳಿದ ಹೊಸ ಹೊಳಪು ನೀಡುವುದರ ಮೂಲಕ ಸಕಾ೯ರಿ ಶಾಲೆಗಳಿಗೆ ಹೊಸ ಸ್ಪರ್ಶ ನೀಡುವುದು ಕಾಣಬಹುದು.
‘ಶಾಲೆ ಉಳಿಸಿ-ಬೆಳೆಸಿ ಅಭಿಯಾನ’ ಆರಂಭಿಸಿರುವ ಕೆಚ್ಚೆದೆಯ ಕನ್ನಡತಿ ಎಂದೇ ಹೆಚ್ಚು ಪರಿಚಿತವಾಗಿರುವ ಯುವತಿ ಅನು,ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸುಣ್ಣ-ಬಣ್ಣ ಬಳಿದು ಒಪ್ಪ-ಓರಣವಾಗಿಸುವ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ
ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ತಂಡದಿಂದ ಕಳೆದ ನಾಲ್ಕೈದು ದಿನಗಳಿಂದ ಶಾಲೆಯಲ್ಲಿ ಕೊಠಡಿ,ಕಿಟಕಿಗಳು, ಕೋಣೆ, ಕಾಂಪೌಂಡ್ ವಾಲ್ ಸೇರಿದಂತೆ ದುರಸ್ತಿ ಕಾರ್ಯ ಇನ್ನಿತರ ಭಾಗದಲ್ಲಿ ಸುಣ್ಣ-ಬಣ್ಣ ಬಳಿಯುತ್ತಿದ್ದಾರೆ.
ಅನು ಅಕ್ಕ ತಂಡದ ಕಾರ್ಯ ಮೆಚ್ಚಿ ತಾಳಕೇರಿ ಶಾಲೆಯ ವಿದ್ಯಾರ್ಥಿಗಳು,ಪೋಷಕರು ದೇಣಿಗೆಯಿಂದ ಶಿಕ್ಷಕರ ಬಣ್ಣದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.ಶಾಲೆಯ 10 ಕೊಠಡಿಗಳಿಗೆ,30 ಕಿಟಕಿಗಳಿಗೆ, ಹಾಗೂ 10 ಬಾಗಿಲುಗಳಿಗೆ ಅದರ ಜೊತೆಗೆ ದುಬಾರಿ ವೆಚ್ಚದ ಗೋಡೆಯ ಬರಹ ಬಣ್ಣ,ಚಿತ್ರ ಕಲೆಗಳಿಗೆ ಬಣ್ಣ,ಚಿತ್ರ ಕಲಾವಿದರ ಸಂಭಾವನೆ ಎಲ್ಲಾ ಸೇರಿ ಐವತ್ತು ಸಾವಿರಕ್ಕೂ ಹೆಚ್ಚು ಖಚು೯ಗುವ ಸಾದ್ಯತೆ ಇದೆ.
*ಅನು ತಂಡದಿಂದ ಹಲವಾರು ಶಾಲೆಗಳು ಅಭಿವೃದ್ಧಿ* : ಮೂಲತಃ ಸಿಂಧನೂರು ತಾಲೂಕಿನ ಬೇರಗಿ ಹಳ್ಳಿಯೊಂದರ ಅನು ಸಮಾನ ಮನಸ್ಕ ಯುವಕರನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಭಗೀರಥ ಯತ್ನ ನಡೆಸಿದ್ದಾರೆ. ಗಂಗಾವತಿ, ಸಿಂಧನೂರು, ಕೊಪ್ಪಳ, ಯಲಬುರ್ಗಾ, ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಗ್ರಾಮಗಳ ಶಾಲೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ.ತಂಡ ಕೇವಲ ಶಾಲೆಗಳ ಅಭಿವೃದ್ಧಿ ಮಾತ್ರವಲ್ಲ, ಆರ್ಥಿಕವಾಗಿ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದವರು ಕಣ್ಣಿಗೆ ಕಂಡರೆ ಅವರಿಗೂ ನೆರವಾಗುವ ಮೂಲಕ ಮಾನವೀಯತೆಯ ಆಸರೆ ನೀಡುತ್ತಿದ್ದಾರೆ. .
*ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆ:*
ಸರ್ಕಾರಿ ಶಾಲೆಯ ಶಿಕ್ಷಕರು ಬೆಳಗಿನ ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಿಸುತ್ತಾರೆ. ಮಿಕ್ಕಂತೆ ಮಧ್ಯಾಹ್ನ ಗ್ರಾಮದ ಯುವಕರ ಊಟ ಏರ್ಪಾಡು ಮಾಡುತ್ತಾರೆ. ತಂಡದ ಸದಸ್ಯರು ಒಂದು ಪೈಸೆ ಹಣ ಸಹ ಪಡೆಯದೇ ನಿಸ್ವಾರ್ಥ ಕೆಲಸ ಮಾಡಿ ಮುಗಿಸಿದ ಬಳಿಕ ಮತ್ತೊಂದು ಊರಿಗೆ ತೆರಳುತ್ತದೆ.
*ಶಾಲೆಗಳ ಅಭಿವೃದ್ಧಿಗೆ ಬೇಕಿದೆ ಸಹಾಯಹಸ್ತ:*
ಪ್ರಸ್ತುತ ವರ್ಷದಲ್ಲಿ ಮಕ್ಕಳ ಸಂಖ್ಯೆ 215 ಹೊಂದಿದ್ದು,ಒಟ್ಟು ಕೊಠಡಿಗಳು :10 ,ಒಟ್ಟು ಕಿಟಕಿಗಳು : 30,ಒಟ್ಟು ಬಾಗಿಲುಗಳು :10 ಇದ್ದು.
ಸದ್ಯ ಬೇಕಾಗಿರುವ ಬಣ್ಣ: ಪೇಂಟ್( ಬಣ್ಣ),ಬಿಳಿ ಪ್ರೀಮಿಯರ್:100 ಲೀ,ಗೂಗಲ್ ಬ್ಲ್ಯೂ :80 ಲೀ
ಸ್ಮೋಕ್ ಗ್ರೇ: 10 ಲೀ ,ಕಾಫೀ ಬ್ರೌನ್: 20 ಲೀ,
ಹಳದಿ ಏಸ್:20 ಲೀ,ಸಿಗ್ನಲ್ ರೆಡ್ ಆಕ್ಸೈಡ್-5 ಲೀ
,ಕೆಂಪು ಆಯಿಲ್ ಪೇಂಟ್: 10 ಲೀ,ಹಳದಿ: 10 ಲೀ,ನೀಲಿ,ಹಸಿರು ತಲಾ :5 ಲೀ ,ಬ್ರಷ್ ಗಳು: ಅವಶ್ಯಕತೆವಿದ್ದು.ಇಂತಹ ಸಮಾಜಮುಖಿ,ಸಕಾ೯ರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ದುರಸ್ತಿ ಕೆಲಸಕ್ಕೆ ಅಗತ್ಯ ವಸ್ತುಗಳನ್ನು ನೀಡುವುದರ ಮೂಲಕ ಸ್ಥಳೀಯ ಜನಪ್ರತಿನಿಧಿಗಳು,ಸರ್ಕಾರಿ ನೌಕರರು, ಹಳೇಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಯುವಕರು ಕೈಜೋಡಿಸಿಬೇಕಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯಾವುದೇ ಪ್ರತಿಫಲಾಕ್ಷೆ ಬಯಸದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ಈ ತಂಡದ ಕಾರ್ಯಕ್ಕೆ ಸಾಮಾಜಿಕ ಕಳಕಳಿ ಇರುವವರು ಕೈಜೋಡಿಸಲಿ ಎಂದು ಆಶಿಸುತ್ತೇವೆ.
“” ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಟೀಂ ಅಕ್ಕ, ಅನುಕರಣೆ ಪ್ರತಿಷ್ಠಾಪನದಿಂದ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ದುಸ್ಥಿತಿಯಲ್ಲಿರುವ ಮತ್ತು ಕಳೆಗುಂದಿರುವ ಶಾಲೆಗಳಿಗೆ ಸುಣ್ಣ ಬಣ್ಣ ಮತ್ತು ಪ್ಯಾಚ್ ವರ್ಕ್ ಮಾಡುತ್ತೇವೆ. ಈ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮಿಂದಾದ ಕೊಡುಗೆ ನೀಡುತ್ತೇವೆ’ 114 ನೇಯ ಶಾಲೆಯಾಗಿ ತಾಳಕೇರಿಯ ಸರಕಾರಿ ಪ್ರೌಢಶಾಲೆಯನ್ನು ಅಲಂಕಾರಗೊಳಿಸುತ್ತಿದ್ದೇವೆ.ಊರಿನ ಯುವಕ-ಯುವತಿಯರು,ಹಿರಿಯರು ಮತ್ತು ವಿದ್ಯಾರ್ಥಿಗಳು ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ಕೃತಜ್ಞಳಾಗಿದ್ದೇನೆ “”
—–
*ಅಕ್ಕ ಅನು*.
” ಸಮುದಾಯದ ಸಹಭಾಗಿತ್ವದಲ್ಲಿ ಏನೆಲ್ಲಾ ಮಾಡಬಹುದು ಎಂಬುದಕ್ಕೆ ತಾಳಕೇರಿ ಪ್ರೌಢಶಾಲೆಯ ಸೌಂದರ್ಯೀಕರಣ ಕಾರ್ಯ ಸಾಕ್ಷಿಯಾಗಿದೆ. ಸ್ವತಃ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪಾಲಕರು ಕೈಜೋಡಿಸಿ ಸುಣ್ಣ ಬಣ್ಣದ ವ್ಯವಸ್ಥೆ ಮಾಡಿದ್ದೇವೆ.ಮುಂದುವರೆದು ಗ್ರಾಮದ ದಾನಿಗಳಿಂದ ಇನ್ನಷ್ಟು ಬಣ್ಣದ ವ್ಯವಸ್ಥೆ ನಿರೀಕ್ಷಿಸಿದ್ದೇವೆ.”
——
ಬಾಬುಸಾಬ್ ಲೈನದಾರ್.
ಮು.ಗು.ಸ.ಪ್ರೌ.ಶಾ.ತಾಳಕೇರಿ
“ಸರಕಾರಿ ಶಾಲೆಗಳಲ್ಲಿ ಉತ್ತಮ ಬೋಧನಾ ಸಾಮರ್ಥ್ಯವಿರುವ ಶಿಕ್ಷಕ ಬಳಗವಿದೆ.ಟಿ.ಇ.ಟಿ ಮತ್ತು ಸಿ.ಇ.ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪ್ರತಿಭಾವಂತರನ್ನೇ ಸರಕಾರ ನೇಮಿಸಿಕೊಳ್ಳುತ್ತಿದೆ.ಅದಕ್ಕೆ ಪೂರಕವಾಗಿ ಒಳ್ಳೆಯ ಮೂಲಭೂತ ಸೌಕರ್ಯಗಳು, ಕಲಿಕಾ ವಾತಾವರಣ ನಿರ್ಮಾಣವಾಗಬೇಕು.ಆ ಹಿನ್ನೆಲೆಯಲ್ಲಿ ಶಾಲೆಯ ಸೌಂದರ್ಯ ಹೆಚ್ಚಿಸುವ ಕಾರ್ಯಕ್ಕೆ ಅಕ್ಕ ಅನು ತಂಡದ ಸಹಭಾಗಿತ್ವದಲ್ಲಿ ಚಾಲನೆ ನೀಡಿದ್ದೇವೆ.ಶಾಲೆಗೆ ಬರುವ ಪ್ರತಿ ಮಗುವಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ.ಈ ಮಹತ್ವದ ಕಾರ್ಯಕ್ಕೆ ಗ್ರಾಮಸ್ಥರು ನೆರವಾಗುತ್ತಿರುವುದು ಖುಷಿ ತಂದಿದೆ.”
—–
ದೇವೇಂದ್ರ ಜಿರ್ಲಿ
ವಿಜ್ಞಾನ ಶಿಕ್ಷಕರು