April 20, 2024

Chitradurga hoysala

Kannada news portal

ವಿದ್ಯಾರ್ಥಿನಿಯರು ಭಯಪಡದೇ ಸಮಸ್ಯೆ ಬಗ್ಗೆ ಮಾಹಿತಿ ನೀಡಿ: ಪಿ ಎಸ್ ಐ ತಿಮ್ಮಣ್ಣ.

1 min read


ವಿದ್ಯಾರ್ಥಿನಿಯರು ಭಯಪಡದೇ ಸಮಸ್ಯೆ ಬಗ್ಗೆ ಮಾಹಿತಿ ನೀಡಿ:
ಪಿಎಸ್ಐ ತಿಮ್ಮಣ್ಣ

ವರದಿ:ಕಾವೇರಿ ಮಂಜಮ್ಮ ನವರ್

ಚಿತ್ರದುರ್ಗ ಹೊಯ್ಸಳ ಸುದ್ದಿ/

ಹೊಸದುರ್ಗ: ವಿದ್ಯಾರ್ಥಿನಿಯರು ಮತ್ತು ಹೆಣ್ಣು ಮಕ್ಕಳಿಗೆ ರೋಡ್ ರೋಮಿಯೋಗಳಿಂದ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ಮಹಿಳಾ ಸುರಕ್ಷತಾ ದೃಷ್ಟಿಯಿಂದ ಪಟ್ಟಣದ ಕಾಲೇಜುಗಳು,ಹಾಸ್ಟೆಲ್ ಗಳಿಗೆ ತೆರಳಿ ಸೂಕ್ತ ರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಯಾರಿಂದಲಾದರೂ ಸಮಸ್ಯೆಯಾದರೆ,ಮುಕ್ತವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ ಹೇಳಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು,ಒಂದು ವಾರಗಳಿಂದ ಒಬ್ಬರು ಸಬ್ ಇನ್ಸ್ಪೆಕ್ಟರ್ ಒಳಗೊಂಡ ಪೊಲೀಸ್ ಸಿಬ್ಬಂದಿಗಳ ತಂಡ ಪ್ರತಿನಿತ್ಯವೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಪದವಿ ಪೂರ್ವ ಕಾಲೇಜು,ಪಾಲಿಟೆಕ್ನಿಕ್ ಕಾಲೇಜು, ನಿಜಲಿಂಗಪ್ಪ ಕಾಲೇಜು ಇನ್ನಿತರ ಶಾಲಾ ಕಾಲೇಜುಗಳ ಸಮೀಪ ತರಗತಿಗಳು ಪ್ರಾರಂಭವಾಗುವುದಕ್ಕೂ ಮೊದಲು,ನಂತರ ಬಿಡುವ ಸಮಯದಲ್ಲಿ ತೆರಳಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

ಕಾಲೇಜುಗಳು,ಹಾಸ್ಟೆಲ್ ಗಳ ಆವರಣದ ಸಮೀಪದಲ್ಲಿ ವಿದ್ಯಾರ್ಥಿನಿಯರಿಗೆ ಕಿಡಿಗೇಡಿಗಳು ಕೀಟಲೆ ಮಾಡುವುದು, ಚುಡಾಯಿಸುವುದು,ಮತ್ತು ಅನುಮಾನಾಸ್ಪದವಾಗಿ ಓಡಾಟ ನಡೆಸಿದರೆ,ಅಂತವರ ಮೇಲೆ ನಿಗಾ ಇರಿಸಿ,ತಪ್ಪಿತಸ್ಥರು ಕಂಡುಬಂದಲ್ಲಿ ಕೇಸ್ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು. ಈಗಾಗಲೇ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ,ಅಂತವರಿಗೆ ತುರ್ತು ಸಹಾಯವಾಣಿ 112 ಕರೆ ಮಾಡಿ ಸಮಸ್ಯೆಯನ್ನು ಮುಕ್ತವಾಗಿ ತಿಳಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ.ಕೀಚಕರು, ರೋಡ್ ರೋಮಿಗಳಿಂದ ಸಮಸ್ಯೆಯಾಗುತ್ತಿದ್ದರೆ, ಮುಕ್ತವಾಗಿ ಅಂತವರ ಬಗ್ಗೆ ಮಾಹಿತಿ ನೀಡಿ ಎಂದು ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *