ಜನ್ಮ ದಿನಕೆ ಕೆಕ್ ಬದಲಿಗೆ ಸಸಿ ನೆಡುವ ಕಾರ್ಯಕ್ರಮ: ಗೋಪಿನಾಥ್
1 min readಜನ್ಮ ದಿನಕೆ ಕೆಕ್ ಬದಲಿಗೆ ಸಸಿ ನೆಡುವ ಕಾರ್ಯಕ್ರಮ: ಗೋಪಿನಾಥ್
ವರದಿ:ರುದ್ರ ಮೂರ್ತಿ
CHITRADURGAHOYSALA NEWS/
ಚಿತ್ರದುರ್ಗ:
ಪರಿಸರ ಸಂರಕ್ಷಣೆ ಜಾಗೃತಿ ಗಾಗಿ ಆ ಬಗ್ಗೆ ನಾವು ಎಷ್ಟು ಕೆಲಸ ಮಾಡಿದರೂ ಸಮತೋಲನ ಸ್ಥಿತಿಗೆ ತಲುಪುವುದು ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಎಲ್ಲರೂ ಇದು ಅಭಿಯಾನದದಂತೆ ನಿರ್ವಹಿಸಬೇಕಾಗಿದೆ.
ಪರಿಸರವಾದ ಪರವಾದ ಯಾವುದೇ ಕೆಲಸ ಮಾಡುವುದು ಒಳಿತು ಅಂತಾ ತಿಳಿದ ಎಸ್. ಜೆ. ಎಮ್. ಪಾಲಿಟೆಕ್ನಿಕ್ ನ ಸಿಬ್ಬಂದಿ ಈ. ಗೋಪಿನಾಥ್ ಅವರು ತಮ್ಮ ಜನ್ಮದಿನವನ್ನು ಶುಕ್ರವಾರ ಕಾಲೇಜಿನ ಆವರಣದಲ್ಲಿ ಸಂಪಿಗೆ ಸಸಿ ನೆಡುವ ಮೂಲಕ ಆಚರಿಸಿ ಸಂಭ್ರಮಿಸಿದರು.
ಇದು ಸಣ್ಣ ಕೆಲಸವಾದರೂ ಸಂದೇಶ ದೊಡ್ಡದಿದೆ,ಎಂಬ ಸಹೋದ್ಯೋಗಿಗಳ ಕೆಲ ಸಿಬ್ಬಂದಿಗೂ ಈ ಕಾರ್ಯ ಅನುಕರಣೀಯ ಎನಿಸಿ, ನಾವು ನಮ್ಮ ಜನ್ಮದಿನದಂದು ಸಸಿ ನೆಡುವ ಮೂಲಕ ಆಚರಿಸೋಣ ಎಂದು ತೀರ್ಮಾನಿಸಿದ್ದು ಸಹ ಒಳ್ಳೆಯ ನಡೆ. ಇಂತಹ ಮಾದರಿ ಕೆಲಸಕ್ಕೆ ನಮ್ಮ ಕಾಲೇಜಿನ ಸಹಕಾರ ಎಂದಿಗೂ ಇರುತ್ತದೆ ಎಂದು ಪ್ರಾಚಾರ್ಯರಾದ ಎಸ್. ವಿ. ರವಿಶಂಕರ್ ಪ್ರೋತ್ಸಾಹದಾಯಕ ನುಡಿಗಳನ್ನಾಡಿ ಶುಭಾಶಯ ಹೇಳಿದರು.
ಹುಟ್ಟುಹಬ್ಬದ ನೆಪದಲ್ಲಿ ಇಂತಹ ಮಾರ್ಗ ಅನುಸರಿಸಿದರೆ, ಮನೆಗೊಂದು ಮರ ಊರಿಗೊಂದು ವನ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.