April 15, 2024

Chitradurga hoysala

Kannada news portal

ಪೋಕ್ಸೋ ಕಾಯ್ದೆ ಕುರಿತು ಹೊಸದುರ್ಗದಲ್ಲಿ ಜಾಗೃತಿ ಕಾರ್ಯಕ್ರಮ – ನ್ಯಾಯಾಧೀಶೆ ಶಶಿಕಲಾ.

1 min read

ಪೋಕ್ಸೋ ಕಾಯ್ದೆ ಕುರಿತು ಹೊಸದುರ್ಗದಲ್ಲಿ ಜಾಗೃತಿ ಕಾರ್ಯಕ್ರಮ –    ನ್ಯಾಯಾಧೀಶೆ  ಶಶಿಕಲಾ.

ವರದಿ : ಕಾವೇರಿ ಮಂಜಮ್ಮನವರ್

ಚಿತ್ರದುರ್ಗ ಹೊಯ್ಸಳ ಸುದ್ದಿ:

ಹೊಸದುರ್ಗ :
ಶಿಕ್ಷಕರು ಮನಸ್ಸು ಮಾಡಿದ್ರೆ ಪೋಕ್ಸೋ ಅಂತ ಪ್ರಕರಣಗಳನ್ನು ತಡೆಯಬಹುದು ಆದರೆ ಇಂದು ಯಾರು ಮಾಡುತ್ತಿಲ್ಲ ಎಂದು.ಜೆ.ಎಂ.ಎಫ್ ಸಿ.ಶಶಿಕಲಾ ಅವರು ಶಿಕ್ಷಕರಿಗೆ ಪ್ರಶ್ನಿಸಿದರು.

ಪಟ್ಟಣದ ತೋಟದ ಗಂಗಾಂಬಿಕ ಬಾಲಿಕಾ ಪ್ರೌಢಶಾಲೆ ತಾಲೂಕು ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಪೋಕ್ಸೋ ಕಾಯ್ದೆ 2012 ಜಾಗೃತಿ ಕುರಿತು ಅಯ್ಯೋ ದೇವರೇ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿದರು.

ಪ್ರಜ್ಞಾವಂತ ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರೆಯುತ್ತಿದ್ದು.ಇದನ್ನ ತಡೆಗಟ್ಟುವ ಸಲುವಾಗಿ ಸರ್ಕಾರ 2012ರಲ್ಲಿ ಫೋಕ್ಸು ಕಾಯ್ದೆಯನ್ನು ಜಾರಿಗೊಳಿಸಿದೆ.ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಪ್ಪಿಸಬೇಕಾದರೆ ಗ್ರಾಮೀಣ ಭಾಗದ ಎಲ್ಲ ಜನರಿಗೆ ಕಾಯ್ದೆಯ ಕಾನೂನುಗಳ ಬಗ್ಗೆ ಅರಿವು ಅತ್ಯಗತ್ಯ.ಬಾಲ್ಯದಲ್ಲಿಯೇ ಮಕ್ಕಳಿಗೆ ಬೇಕಾದ ಆರೋಗ್ಯ. ಶಿಕ್ಷಣರಕ್ಷಣೆ.ನೀಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.ಮಕ್ಕಳಿಗೆ ರಕ್ಷಣೆ ಕೊಡಬೇಕಾದ ಕರ್ತವ್ಯ ಪೋಷಕರಿಗಿಂತ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಬರಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಪೋಕ್ಸೋ ಕಾಯ್ದೆಯ ಬಗ್ಗೆ ಶಿಕ್ಷಕರಿಗಿದ್ದ ಅನುಮಾನಗಳನ್ನ ನ್ಯಾಯಾಧೀಶರ ಬಳಿ ಚರ್ಚಿಸಿ ಪರಿಹಾರ ಕಂಡುಕೊಂಡರು. ಈ ಸಂದರ್ಭದಲ್ಲಿ ಬಿ.ಇ.ಓ.ಸೈಯದ್ ಮೋಸಿನ್. ಬಿ.ಆರ್.ಸಿ ಶ್ರೀನಿವಾಸ್.ವಕೀಲರ ಸಂಘದ ಕಾರ್ಯದರ್ಶಿ ಬಸವಲಿಂಗಪ್ಪ. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ.ಬಾಗೂರು ಮುಖ್ಯ ಶಿಕ್ಷಕ ಶೇಖರಪ್ಪ ಸೇರಿದಂತೆ ತಾಲೂಕಿನ ಶಿಕ್ಷಕರು ಮುಖ್ಯ ಉಪಾಧ್ಯಯರು ಹಾಜರಿದ್ದರು.

ವರದಿ:ಕಾವೇರಿ ಮಂಜಮ್ಮನವರ್

About The Author

Leave a Reply

Your email address will not be published. Required fields are marked *