ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಜನರು ಅಸ್ವಸ್ಥ ಮಹಿಳೆ ಸಾವು
1 min readಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಜನರು ಅಸ್ವಸ್ಥ ಮಹಿಳೆ ಸಾವು
ಸಂಪಾದಕರು:ಸಿ.ಎನ್.ಕುಮಾರ್,
ಚಿತ್ರದುರ್ಗಹೊಯ್ಸಳ ನ್ಯೂಸ್/
ಚಿತ್ರದುರ್ಗ :
ಕಲುಷಿತ ನೀರು ಕುಡಿದು ಮೂವತ್ತಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ಕವಾಡಿಗರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅಸ್ವಸ್ಥರನ್ನು ಈಗಾಗಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆ ಮತ್ತು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಸೋಮವಾರ ರಾತ್ರಿ ಕವಾಡಿಗರಹಟ್ಟಿಯ ಎಸ್ಸಿ ಕಾಲೋನಿಗಳಿಗೆ ಶಾಂತಿ ಸಾಗರದ ನೀರನ್ನು ಪೂರೈಸಲಾಗಿತ್ತು ಈ ನೀರನ್ನು ಕುಡಿದ ಬಳಿಕ ಗ್ರಾಮಸ್ಥರಲ್ಲಿ ವಾಂತಿ,ಭೇದಿ,ಹೊಟ್ಟೆನೋವು ಕಾಣಿಸಿಕೊಂಡ ಬಳಿಕವೇ ಕುಟುಂಬದವರು ತಮ್ಮ ಮಕ್ಕಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಒಬ್ಬೊಬ್ಬರೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ, ಮಕ್ಕಳು ಸೇರಿದಂತೆ ಒಟ್ಟು ಮೂವತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು ಗ್ರಾಮದಲ್ಲಿ ಮೌನದ ವಾತಾವರಣ ನಿರ್ಮಾಣಗೊಂಡಿದೆ.
ಕಲುಷಿತ ನೀರು ಕುಡಿದು ಗಂಭೀರವಾಗಿ ಅಸ್ವಸ್ಥರಾಗಿದ ಮಂಜಮ್ಮ ಸುಮಾರು 29 ವರ್ಷದ ಮಹಿಳೆ ಕಲುಷಿತ ನೀರು ಕುಡಿದಿರುವುದರಿಂದ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ವೈದ್ಯರು ದೃಢಪಡಿಸಿದ ಹಿನ್ನೆಲೆ ಮತ್ತಷ್ಟು ಆತಂಕಕಾರಿ ಗ್ರಾಮಸ್ಥರಲ್ಲಿ ಮೂಡಿದೆ ಮೃತ ಇವತ್ತಿಗೆ ಎರಡು ವರ್ಷದ ಮಗು ಇದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಅದೇ ಗ್ರಾಮದ ಇನ್ನೋರ್ವ 18 ವರ್ಷದ ಸೃಷ್ಟಿ ಎಂಬ ಯುವತಿ ಕೂಡ ಅಸ್ವಸ್ಥಳಾಗಿದ್ದು ವೈದ್ಯರು ಯಾವುದಕ್ಕೂ ಏನನ್ನು ಹೇಳುವುದಕ್ಕಾಗುವುದಿಲ್ಲ ಎಂದು ತಿಳಿಸಿದರೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಕವಾಡಿಗರಹಟ್ಟಿಗೆ ಶಾಂತಿ ಸಾಗರ ನೀರೆ ಆಸರೆ
ನಗರಕ್ಕೆ ಹೊಂದಿಕೊಂಡುಇರುವಂತಹ ಕವಾಡಿಗರಹಟ್ಟಿಗೆ ಶಾಂತಿ ಸಾಗರದ ನೀರು ಯಥೇಚ್ಛವಾಗಿ ಪೂರೈಕೆ ಮಾಡಲಾಗುತ್ತಿತ್ತು. ಇದರ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕವೂ ಸಹ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು ಆದರೆ 15 ದಿನಗಳಿಂದ ಸರಿಯಾಗಿ ಹಟ್ಟಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿರಲಿಲ್ಲ ಈ ಒಂದು ವಿಷಯವನ್ನು ಅರಿತ ನಗರಸಭೆ ಇಲಾಖೆಯವರು ಅಧಿಕಾರಿಗಳು ನೇರ ಗ್ರಾಮಕ್ಕೆ ಪೈಪ್ ಲೈನ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.
ಯಾವುದೇ ರೀತಿ ಫಿಲ್ಟರ್ ಗಳನ್ನು ಹಾಕದೆ ಟ್ಯಾಂಕಿಗೆ ನೀರನ್ನು ತುಂಬಿಸಿ ಇದರ ಮೂಲಕವೇ ಹಟ್ಟಿಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು ಸೋಮವಾರ ಎಸ್ಸಿ ಕಾಲೋನಿಗೆ ನೀರನ್ನು ಪೂರೈಕೆ ಮಾಡಲಾಗಿತ್ತು ಈ ನೀರನ್ನು ಕುಡಿದ ಮಕ್ಕಳು ಸೇರಿದಂತೆ ಮಹಿಳೆಯರು ಸಹ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದುರ್ಗಕ್ಕೆ ಅಂಟಿಕೊಂಡು ಇರುವಂತಹ ಕವಾಡಿಗರಹಟ್ಟಿಗೆ ಯತೇಚ್ಛವಾಗಿ ಶಾಂತಿ ಸಾಗರದ ನೀರನ್ನೇ ಪೂರೈಕೆ ಮಾಡಲಾಗುತ್ತಿದ್ದು ಜನರು ಸಹ ಇದೇ ನೀರನ್ನು ಯಥೇಚ್ಛವಾಗಿ ಬಳಸುತ್ತಿದ್ದರು.ಆದರೆ ಕೆಲವು ದಿನಗಳ ಹಿಂದೆ ಕಾಲೋನಿಗಳಿಗೆ ನೀರನ್ನು ಹರಿಸಲಾಗುತ್ತಿತ್ತು ಆದರೆ ಆ ನೀರು ಸಹ ಶುಭ್ರವಾಗಿರದೆ ಕಲುಷಿತ ನೀರಾಗಿ ಮಾರ್ಪಟ್ಟಿತ್ತು ಈ ವಿಚಾರವನ್ನು ವಾಟರ್ ಮ್ಯಾನ್ ಮತ್ತು ಅಲ್ಲಿನ ವಾರ್ಡ್ ನ ಸದಸ್ಯರಿಗೆ ತಿಳಿಸಿದರು ಸಹ ಯಾವುದರ ರೀತಿ ಟ್ಯಾಂಕನ್ನ ತೊಳಿಸುವ ಕೆಲಸವನ್ನು ಮಾಡಲಿಲ್ಲ ಶಾಂತಿ ಸಾಗರದ ನೀರು, ಸಂಪೂರ್ಣವಾಗಿ ಕೆಸರು ನೀರಾಗಿ ಪೈಪ್ ನ ಮೂಲಕ ನಲ್ಲಿಗಳಿಗೆ ಬಿಡಲಾಗುತ್ತಿತ್ತು. ಅಧಿಕಾರಿಗಳ ಗಮನಕ್ಕೂ ತಂದರೂ ಸಹ ಪ್ರಯೋಜನವಾಗುತ್ತಿರಲಿಲ್ಲ ಆದರೆ ಅದೇ ಕೆಲಸ ನೀರು ಕುಡಿದು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಹಲವರು ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನುತ್ತಿದ್ದಾರೆ ಗ್ರಾಮಸ್ಥ ಯಲ್ಲಪ್ಪನವರು ಅಧಿಕಾರಿಗಳು ಇದರ ಸೂಕ್ತ ತನಿಖೆಯನ್ನು ನಡೆಸಿ ಪರಿಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕಾಗಿದೆ ಎಂದಿದ್ದಾರೆ.
ಆಸ್ಪತ್ರೆಗಳಿಗೆ ಅಸ್ವಸ್ಥರು ದಾಖಲಾಗುತ್ತಿದ್ದಂತೆಯೇ ಕವಾಡಿಗಾರಹಟ್ಟಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ರವರು ಭೇಟಿ ನೀಡಿ ಪರಿಶೀಲಿಸಿ ಸರಿಯಾದ ತನಿಕೆಯನ್ನು ನಡೆಸಲಾಗುವುದು ಎಂದು ಗ್ರಾಮಸ್ಥರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಜಿಲ್ಲಾಸ್ಪತ್ರೆಗೆ ತೆರಳಿ ಕಲಿಸಿದ ನೀರು ಕುಡಿದು ಅಸ್ವಸ್ಥರಾಗಿರುವಂತಹ ಮಕ್ಕಳ ಆರೋಗ್ಯವನ್ನು ವಿಚಾರಿಸಿ ಹೆಚ್ಚಿನ ಚಿಕಿತ್ಸೆ ನೀಡಬೇಕೆಂದು ವೈದ್ಯರುಗಳಿಗೆ ಸೂಚನೆ ನೀಡಿದ್ದಾರೆ.
ದಿವ್ಯಪ್ರಭು ಜಿಲ್ಲಾಧಿಕಾರಿ…..
ಜಿಲ್ಲೆಯಲ್ಲಿ ಇಂತಹ ಘಟನೆ ಆಗ್ಬಾರ್ದಾಗಿತ್ತು ಆದರೆ ಆಗಿ ಹೋಗಿಬಿಟ್ಟಿದೆ. ಶಾಂತಿ ಸಾಗರದ ನೀರನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳಿಸಲಾಗಿದೆ ರಿಪೋರ್ಟ್ ಬಂದ ಬಳಿಕವೇ ಇದರ ಬಗ್ಗೆ ಸೂಕ್ತ ತನಿಖೆಯನ್ನು