ಕವಾಡಿಗರಹಟ್ಟಿ ಸಂತ್ರಸ್ತ ದಲಿತ ಕಾಲೋನಿಗೆ ಆಹಾರಧಾನ್ಯ ಕಿಟ್ ವಿತರಣೆ
1 min readಕವಾಡಿಗರಹಟ್ಟಿ ಸಂತ್ರಸ್ತ ದಲಿತ ಕಾಲೋನಿಗೆ ಆಹಾರಧಾನ್ಯ ಕಿಟ್ ವಿತರಣೆ
ಚಿತ್ರದುರ್ಗ ಸಮೀಪದ ಕವಾಡಿಗರಹಟ್ಟಿಯಲ್ಲಿ ಕಳೆದ ನಾಲ್ಕು ದಿನಗಳಹಿಂದೆ ಕಲುಷಿತ ನೀರು ಕುಡಿದು ಒರ್ವ ಮಹಿಳೆ ಸೇರಿ
ಮೂವರು ಮೃತಪಟ್ಟಿದ್ದು, ಸುಮಾರು ಎಂಬತ್ತಕ್ಕೂ ಹೆಚ್ಚು ಜನ ಅಸ್ವಸ್ಥತೆಯಿಂದ ಚಿಕಿತ್ಸೆಗಾಗಿ ಅಸ್ಪತ್ರೆ ಸೇರಿಕೊಂಡು ಇಡೀ ಊರಿನ ದಲಿತ ಕಾಲೋನಿಯಲ್ಸಿ ಸ್ಮಶಾನ
ಮೌನದ ವಾತವರಣ ನಿರ್ಮಾಣವಾಗಿತ್ತು.
ಜಿಲ್ಲಾಡಳಿ,ಆರೋಗ್ಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆಗಳು ಮತ್ತು ಪೌರಾಡಳಿತ ಇಲಾಖೆಯ ಅಧಿಕಾರಿಗಳು ಜನರ ಆರೋಗ್ಯವನ್ನು ನಿಯಂತ್ರಣಕ್ಕೆ
ತರಲು ಶ್ರಮಿಸಿದ್ದು ಇಲ್ಲಿ ಮುಖ್ಯವೂ ಆಗಿದೆ.
ಈ ಮಧ್ಯೆ ದಲಿತ ಕಾಲೋನಿ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗುರುವಾರ ಕವಾಡಿಗರಹಟ್ಟಿ ದಲಿತ ಕಾಲೋನಿ ಜನರ ಸಂಕಷ್ಟಕ್ಕೆ
ಸ್ಪಂದಿಸಿ ರೇಷನ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ರೇಷನ್ ಕಿಟ್ ವಿತರಣೆ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಕಾರ್ತಿಕ್ ,ತಹಶಿಲ್ದಾರ ನಾಗವೇಣಿ,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ ಹೆಬ್ಬಳ್ಳಿ,ಸಹಾಯಕ ನಿದೇ್ಶಕರಾದ ಕೃಷ್ಣಮೂರ್ತಿ,ನಾಗೇಂದ್ರಪ್ಪ ,ದಲಿತ ಮುಖಂಡ ಸಿಹೆಚ್ ಮಂಜುನಾಥ್ ,ತೊಡರನಾಳ್ ವಿಜಯಕುಮಾರ್ ,ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ನರೇನಹಳ್ಳಿ ಅರುಣ್ ಕುಮಾರ್ ,ರಾಜಪ್ಪ ಅವರು ರೇಷನ್ ಕಿಟ್ ಗಳನ್ನು ಕವಾಡಿಗರ ಹಟ್ಟಿ ದಲಿತ ಕಾಲೋನಿ ಸಂತ್ರಸ್ತರಿಗೆ ವಿತರಣೆ ಮಾಡಿದರು