Breaking news ಹಿರಿಯೂರು ಬಳಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಹುರಿದ ಬಸ್
1 min readಹಿರಿಯೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಾ.ಹೆ4 ರ KR ಹಳ್ಳಿ ಚಲಿಸುತ್ತಿದ್ದ ಖಾಸಗಿ ಬಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿದ ಘಟನೆ ನಡೆದಿದ್ದು ಉರಿದ ಬಸ್ , ಬಸ್ಸಿನಲ್ಲಿದ್ದ ಓರ್ವ ಮಗು ಸೇರಿ ಐದು ಜನ ಪ್ರಯಾಣಿಕರು ಸಜೀವ ಧಹನ ಶಂಕೆ ವ್ಯಕ್ತವಾಗಿದೆ.
ಬಿಜಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಎಂದು ತಿಳಿದಿದ್ದು , ಬಸ್ ನಲ್ಲಿ 35 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡತ್ತಿದ್ದರು ಎಂಬುದು ತಿಳಿದಿದ್ದು ಈ ಬಸ್
KA 51- AD 7449 ಕುಕ್ಕೆ ಶ್ರೀ ಟ್ರಾವಲ್ಸ್ ನ ಬಸ್ ಎಂದು ಗುರುತಿಸಲಾಗಿದೆ.30 ಜನರಿಗೆ ಗಂಬೀರ ಗಾಯ, ಮೃತರ ಗುರುತು ಪತ್ತೆಯಾಗಿಲ್ಲ.ಗಂಭೀರ ಗಾಯಾಳುಗಳನ್ನ ಹಿರಿಯೂರು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ, ಸುಟ್ಟು ಕರಕಲಾಗಿರುವ ಖಾಸಗಿ ಬಸ್ , ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.