April 20, 2024

Chitradurga hoysala

Kannada news portal

ಹೊಂಗಿರಣ-2023 ಸ್ವಾಗತ ಸಮಾರಂಭ : ಪ್ರಪಂಚದ ಮೋಹಕ್ಕೆ ಒಳಗಾಗದೆ ನಿರಂತರ ಪರಿಶ್ರಮ,ಪ್ರಾಮಾಣಿಕ ಪ್ರಯತ್ನ ಅಗತ್ಯ

1 min read

ಹೊಂಗಿರಣ-2023 ಸ್ವಾಗತ ಸಮಾರಂಭ

ಪ್ರಪಂಚದ ಮೋಹಕ್ಕೆ ಒಳಗಾಗದೆ ನಿರಂತರ ಪರಿಶ್ರಮ,ಪ್ರಾಮಾಣಿಕ ಪ್ರಯತ್ನ ಅಗತ್ಯ

CHITRADURGA HOYSSLA NEWS/

ಚಿತ್ರದುರ್ಗ:

ಚಿತ್ರದುರ್ಗ ನಗರದ ಎಸ್ ಎಲ್ ವಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹೊಂಗಿರಣ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 97 ರಷ್ಟು ಅಂಕಗಳನ್ನು ಪಡೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದ ಐಶ್ವರ್ಯ. ಕೆ, ದ್ವಿತೀಯ ಸ್ಥಾನ ಪಡೆದ ಭರತ್ ಸಾಗರ್( ಶೇಕಡ.93.33), ತೃತೀಯ ಸ್ಥಾನ ಪಡೆದ ಆದಿತ್ಯ ಡಿ( 90.83% ) ವಾಣಿಜ್ಯ ವಿಭಾಗದಲ್ಲಿ ಶೇಕಡ 94.67ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ ಹೇಮಶ್ರೀ.ಎಂ, ದ್ವಿತೀಯ ಸ್ಥಾನ ಪಡೆದ ಮೊಹಮ್ಮದ್ ಸುಹೇಲ್(92.50%), ತೃತೀಯ ಸ್ಥಾನ ಪಡೆದ ಆಯಷ ಖಾನ್(92.33%) ಅವರನ್ನು ಸನ್ಮಾನಿಸಿ ಮಾತನಾಡಿದ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿಗಳಾದ ರಘು ಚಂದನ್ ಅವರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ತಮ್ಮ ಪೋಷಕರಿಗೆ ಕೊಡಬಹುದಾದ ದೊಡ್ಡ ಉಡುಗೊರೆ ಎಂದರೆ ನಿಮ್ಮ ಉತ್ತಮ ಫಲಿತಾಂಶ.

ಮ್ಯಾರಥಾನ್ ಓಟದಂತೆ ಸಾಗುತ್ತಿರುವ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನೀವು ಜಯಶಾಲಿಗಳಾಗಬೇಕಾದರೆ ಬಾಹ್ಯ ಪ್ರಪಂಚದ ಮೋಹಕ್ಕೆ ಒಳಗಾಗದೆ ನಿರಂತರ ಪರಿಶ್ರಮ,ಪ್ರಾಮಾಣಿಕ ಪ್ರಯತ್ನ ಅಗತ್ಯ, ಆಗ ಮಾತ್ರ ನೀವು ಕಂಡಂತಹ ಕನಸುಗಳು ನನಸಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಲ್ ವಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಕೊಟ್ರೇಶ್ ಬಿ.ಎ., ಅವರು ವಹಿಸಿದ್ದರು. ಶ್ರೀ ಯುತ.ಆರ್ ಎಸ್ ರಾಜು.ಸಹಾಯಕ ಪ್ರಾಧ್ಯಾಪಕರು. ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ, ತಿಪ್ಪೇಸ್ವಾಮಿ ಆರ್‌.ಸಿ.,ಮುಖ್ಯೋಪಾಧ್ಯಾಯರು. ಇಂಡಿಯನ್ ಇಂಟರ್ನ್ಯಾಷನಲ್ ಸ್ಟೇಟ್ ಸ್ಕೂಲ್. ಕೇಶವಮೂರ್ತಿ ಯು,ಉಪ ಪ್ರಾಂಶುಪಾಲರು. ಎಸ್ ಎಲ್ ವಿ ಪಿಯು ಕಾಲೇಜು.ಉಪನ್ಯಾಸಕರಾದ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕುಮಾರಿ.ವೈಷ್ಣವಿ ಪ್ರಾರ್ಥಿಸಿದರು. ಕುಮಾರಿ.ಅಂಕಿತ ಸ್ವಾಗತ ಭಾಷಣ ಮಾಡಿದರು, ಕುಮಾರಿ ಸ್ನೇಹ ವಂದನಾಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಹರ್ಷ ಯು, ಶಶಿಧರ್ ಕೆ. ನರಸಿಂಹಮೂರ್ತಿ, ಮನು, ಬಸವರಾಜ್,
ವಿಂದ್ಯಾ ಸಿ ಸಜ್ಜನ್, ಉಮೇಶ್,ಸಂತೋಷ್, , ಸುಪ್ರಿತ, ಸಯೀದಭಾನು, ಸೌಮ್ಯ ರಾಣಿ. ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *