“ನನ್ನ ಜನರಿಗೆ ನಾನೇ ರೋಲ್ ಮಾಡಲ್”
1 min read
ದುಬಾರಿಸೂಟ್
#ಸ್ಟಾರ್_ಹೋಟೆಲ್
#ಆಯ್ಕೆಯಹಿಂದಣ
#ಬಾಬಾಸಾಹೇಬರ
#ದೂರದೃಷ್ಟಿ
“ನನ್ನ ಜನರಿಗೆ ನಾನೇ ರೋಲ್ ಮಾಡಲ್”
– ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಾವಾಗ ತಮಿಳುನಾಡಿಗೆ ಭೇಟಿಕೊಟ್ಟರೂ ಏರ್ ಪೋರ್ಟ್ ಪಕ್ಕದ “ಕೊನೆಮಾರ್” ಎಂಬ 5 star ಹೋಟಲ್ ನಲ್ಲಿಯೇ ತಂಗುತ್ತಿದ್ದರು. ಒಮ್ಮೆ “ದಿ ಹಿಂದೂ” ಆಂಗ್ಲ ಪತ್ರಿಕೆಯ ಸಂಪಾದಕರು ಬಾಬಾ ಸಾಹೇಬರನ್ನು ಕುರಿತು ಒಂದು ಪ್ರಶ್ನೆ ಕೇಳುತ್ತಾರೆ.
“ನೀವು ಒಂದು ಸಾಧಾರಣ ಅಸ್ಪೃಶ್ಯ ಕುಟುಂಬದಲ್ಲಿ ಹುಟ್ಟಿದವರು. ಆದರೆ ನೀವು ಮಾತ್ರ ಯಾವ ಮಹಾರಾಜನಿಗೂ ಕಡಿಮೆಯಿಲ್ಲ, ಯಾವಾಗಲೂ ದುಬಾರಿ ಸೂಟನ್ನೇ ಹಾಕುತ್ತೀರಿ, ಇಂತಹ ಸ್ಟಾರ್ ಹೋಟಲ್ ನಲ್ಲಿಯೇ ತಂಗುತ್ತೀರಿ. ಆದರೆ ಗಾಂಧಿಯವರು ಉನ್ನತ ವೈಶ್ಯ ಕುಟುಂಬದಲ್ಲಿ ಜನಿಸಿದವರು, ಸರಳವಾದ ಉಡುಪು ಧರಿಸುತ್ತಾರೆ, ಭಂಗೀ ಕಾಲೊನಿಯಲ್ಲೇ (ಅಸ್ಪೃಶ್ಯ ಕಾಲೋನಿ) ತಂಗುತ್ತಾರೆ.
ನಿಮ್ಮಿಬ್ಬರ ಮಧ್ಯೆ ಇರುವ ಈ ವಿರೋಧಾಭಾಸವು ನನಗೆ ಅರ್ಥವಾಗುತ್ತಿಲ್ಲ ದಯವಿಟ್ಟು ತಿಳಿಸಿ” ಎನ್ನುತ್ತಾರೆ.
ಆಗ ಬಾಬಾ ಸಾಹೇಬರು ಹೇಳಿದ ಮಾತುಗಳಿವು
“ನೀವು ಹೇಳುವುದು ಸತ್ಯ, ನನ್ನ ಸಮುದಾಯ ಸಾವಿರಾರು ವರ್ಷಗಳಿಂದ ಬಡತನದಲ್ಲಿಯೇ ಇದೆ, ಉಡಲು ಸರಿಯಾದ ಬಟ್ಟೆಯಿಲ್ಲ, ಆದರೆ ನಾನು ದುಬಾರಿ ಸೂಟನ್ನೇ ಹಾಕುತ್ತೇನೆ.. ರಾಜಗೃಹದಂತ ಬಂಗಲೆ ಕಟ್ಟಿಸಿದ್ದೇನೆ, ಇದೇ ವೇಳೆಗೆ ಗಾಂಧಿ ವೈಶ್ಯ ಸಮುದಾಯದಲ್ಲಿ ಹುಟ್ಟಿದ್ದರೂ ಅರೆಬೆತ್ತಲೇ ಫಕೀರನಂತೆ ಇದ್ದಾರೆ, ಭಂಗಿ ಕಾಲೋನಿಯಲ್ಲೇ ವಸತಿ ಮಾಡುತ್ತಾರೆ. ‘ಆದರೆ ಗಾಂಧಿ ಸಮುದಾಯವು ಗಾಂಧಿಯನ್ನು ಅನುಕರಿಸುವುದಿಲ್ಲ, ತಮ್ಮ ಸಮುದಾಯ ತನ್ನಂತೆಯೇ ಫಕೀರರಾಗಬೇಕೆಂಬ ಉದ್ದೇಶ ಗಾಂಧಿಗೂ ಇಲ್ಲ..
ಆದರೆ ನನ್ನ ಸಮುದಾಯ ನನ್ನಂತೆಯೇ ಬದುಕಬೇಕೆಂಬುದು ನನ್ನ ಮಹಾತ್ವಾಕಾಂಕ್ಷೆಯಾಗಿದೆ. ನಾನು ನನ್ನ ಸಮುದಾಯದ ಕಾಲೋನಿಗೆ ಹೋಗುವುದಿಲ್ಲ ಅವರನ್ನೇ ಇಲ್ಲಿಗೆ (ಸ್ಟಾರ್ ಹೋಟಲ್) ಕರೆಸಿಕೊಳ್ಳುತ್ತೇನೆ. ನನ್ನನ್ನು ಕಾಣಲು ಜೀವನದಲ್ಲಿ ಮೊಟ್ಟಮೊದಲ ಬಾರಿ ಸ್ಟಾರ್ ಹೋಟಲ್ ಗೆ ಬರುತ್ತಾರೆ. ಇರುವ ಬಟ್ಟೆಗಳಲ್ಲಿಯೇ ಶುದ್ಧವಾದ ಬಟ್ಟೆ ಹಾಕಿಕೊಂಡು ಬರುವ ನನ್ನ ಜನಗಳು ಇಲ್ಲಿನ ಸೌಂದರ್ಯವನ್ನು ನೋಡಿ ಅನುಭವಿಸಬೇಕೆಂಬ ಸಣ್ಣ ಆಸೆ ಹುಟ್ಟುತ್ತದೆ. ಹಾಗೇ ಬಂದು ನನ್ನನ್ನು ನೋಡುತ್ತಾರೆ, ನನ್ನ ನೋಡಿದ ಮೇಲೆ ಅವರಿಗೆ ಸಣ್ಣ ಆಲೋಚನೆ ಹೊಳೆಯುತ್ತದೆ” ಇದೇ ಸಮುದಾಯದಲ್ಲಿ ಹುಟ್ಟಿದ ಬಾಬಾ ಸಾಹೇಬರು ಇಂತಹ ಸ್ಥಾನಕ್ಕೆ ಹೋಗುವುದಾದರೆ ನಾವು ಆಗಬಹುದಲ್ಲವೇ” ಎಂಬ ಆಲೋಚನೆ ಹುಟ್ಟುತ್ತದೆ.
ಆದರೆ ಗಾಂಧಿ ಇಂತಹ ಸಣ್ಣ ಆಸೆಯೂ ಹುಟ್ಟದ ಹಾಗೆ ನನ್ನ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ನನ್ನ ಸಮುದಾಯಗಳ ಕಾಲೋನಿಗೆ ಹೋಗಿ ಗಾಂಧಿಯೂ ಭಂಗಿ ಕೆಲಸ ಮಾಡುತ್ತಾರೆ, ಚಿಂದಿ ಬಟ್ಟೆಉಡುತ್ತಾರೆ. ಇದನ್ನು ನೋಡುವ ನನ್ನ ಜನಗಳು
“ಇಂತಹ ಉನ್ನತ ಕುಲದಲ್ಲಿ ಹುಟ್ಟಿದ ಗಾಂಧಿಯೇ ಭಂಗಿ ಕೆಲಸ ಮಾಡುತ್ತಿರಬೇಕಾದರೆ ನಾವ್ಯಾಕೆ ಮಾಡಬಾರದು, ಗಾಂಧಿಯೇ ಚಿಂದಿ ಬಟ್ಟೆ ಉಟ್ಟು ಓಡಾಡಬೇಕಾದರೆ ನಮಗ್ಯಾಕೆ ಬೇಕು ಒಳ್ಳೆ ಬಟ್ಟೆಗಳು”_ ಎಂದು ಭಾವಿಸುತ್ತಾರೆ. ಗಾಂಧಿ ಮಾಡುತ್ತಿರುವ ದೊಡ್ಡ ಮೋಸವಿದು. ನನ್ನ ಜನಗಳಲ್ಲಿ ಆಸೆಯನ್ನೇ ಹುಟ್ಟದ ಹಾಗೆ ಮಾಡುತ್ತಿದ್ದಾರೆ.
“ಆಸೆಗಳೇ ಇಲ್ಲದ ಸಮುದಾಯವನ್ನು ಆಯುಧಗಳು ಇಲ್ಲದೆಯೇ ಜಯಿಸಬಹುದು”,
ಗಾಂಧಿ ನನ್ನ ಸಮುದಾಯಗಳನ್ನು ಅದೇ ಹಾಳು ಕೊಂಪೆಯಲ್ಲಿ ಬಂದಿಸಿಡುವ ಹುನ್ನಾರ ಮಾಡುತ್ತಿದ್ದಾರೆ.
“ನನ್ನ ಜನ ಹೇಗಿರಬೇಕೆಂದರೆ ನನ್ನ ಹಾಗೆಯೇ ಇರಬೇಕು, ನಾನೇ ಅವರಿಗೆ ರೋಲ್ ಮಾಡಲ್”.
ಜೈ ಭೀಮ್
ಲೇಖಕರು:
ಅರುಣ್ ಜೋಳದಕೂಡ್ಲಿಗಿ,
ಜನಪದ ಕವಿ ಚರಿತೆ ಕುರಿತಂತೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಸಂಶೋಧನೆಯ ವಿದ್ಯಾರ್ಥಿ