May 19, 2024

Chitradurga hoysala

Kannada news portal

ಶ್ರೀರಾಮುಲು ಗುಣಮುಖವಾಗಲಿ ಎಂದು ಅಭಿಮಾನಿಗಳಿಂದ ದುರ್ಗಾಂಭಿಕಾ ಮಹಾಸನ್ನಿಧಿಯಲ್ಲಿ ವಿಶೇಷ ಪೂಜೆ

1 min read

ಹೊಸದುರ್ಗ : ಆರೋಗ್ಯ ಸಚಿವ ಬಿ.ಶ್ರೀರಾಮುಲುರವರಿಗೆ ಕೋವಿಡ್ ಪಾಸಿಟಿವ್ ಹಿನ್ನಲೆಯಲ್ಲಿ ಶ್ರೀರಾಮುಲುರವರು ಬೇಗ ಗುಣಮುಖರಾಗಿ ಬರಲಿ ಎಂದು ಹೊಸದುರ್ಗ ಶ್ರೀರಾಮುಲು ಅಭಿಮಾನಿಗಳ ಬಳಗದ ವತಿಯಿಂದ ನಗರದ ದುರ್ಗಾಂಬಿಕಾ ಮಹಾಸನ್ನಿದಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಮಾತನಾಡಿದ ಪುರಸಭಾ ಸದಸ್ಯ ದಾಳಿಂಬೆ ಗಿರೀಶ್ ಆರೋಗ್ಯ ಸಚಿವರಿಗೆ ಕೋವಿಡ್ ಸೋಂಕು ತಗುಲಿದ ನಂತರ ಸಾಮಾನ್ಯರಂತೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಸೋಂಕು ತಗುಲಿವರುವ ರಾಜಕೀಯದಲ್ಲಿರುವ ಬೇರೆ ಯಾರು ಕೂಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಲ್ಲಾ. ಆದರೆ ಶ್ರೀರಾಮುಲು ಅವರು ದಾಖಲಾಗಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ವಾಲ್ಮೀಕಿ ಸಮಾಜ ತಾಲ್ಲೂಕು ಅಧ್ಯಕ್ಷ ತುಂಬಿನಕೆರೆ ಬಸವರಾಜ್ ಮಾತನಾಡಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಶ್ರೀರಾಮುಲು ದಾಖಲಾಗಿದ್ದು ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳೂ ಶ್ರಮಿಸಿದ್ದಾರೆ. ರಾಜ್ಯಕ್ಕೆ ಕೊರೊನ ಕಾಣಿಸಿಕೊಂಡ ಸಮಯದಿಂದಲೂ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ. ತಾಯಿ ದುರ್ಗಾಂಬಿಕಾ ಆಶೀರ್ವಾದ ಅವರ ಮೇಲಿದ್ದು ಶೀಘ್ರ ಗುಣಮುಖರಾಗಿ ಬರುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ನಿರಂಜನ್ ಕಲ್ಮಠ್ ಮಾತನಾಡಿ ಸರ್ಕಾರದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುವ ಅವರು ಜನರ ಸೇವೆ ಮಾಡಲು ಆದಷ್ಟೂ ಬೇಗ ಗುಣಮುಖರಾಗಿ ಬರುತ್ತಾರೆ. ಸಂಕಷ್ಟ ಸಮಯದಲ್ಲಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭ ಹಾರೈಸಿದರು.

ಈ ವೇಳೆ ಭಾವಸಾರ ಕ್ಷತ್ರಿಯ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ್ ಗುಜ್ಜರ್, ಪುರಸಭಾ ಸದಸ್ಯ ರಾಮಚಂದ್ರಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಅನುಸೂಯಮ್ಮ ಜಗನ್ನಾಥ್, ಮುಖಂಡರಾದ ಮಾನಸ ಬಸವರಾಜ್ ತುಂಬಿನಕೆರೆ, ಗೌಡ್ರ ತಿಪ್ಪೇಶ್, ಮಳಲಿ ರವಿಕುಮಾರ್,ಟೈಲರ್ ಮಹೇಶ್,ನಾಗತಿಹಳ್ಳಿ ಜಗನ್ನಾಥ್, ಚಂದ್ರಪ್ಪ, ಜಗದೀಶ್ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *