ಶ್ರೀ ತರಳಬಾಳು ಜಗದ್ಗುರು ಲಿಂ. ಶ್ರೀ.ಶ್ರೀ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಭಾಗಿ
1 min read![](https://www.chitradurgahoysala.com/wp-content/uploads/2023/09/Screenshot_2023_0924_234557.jpg)
ಶ್ರೀ ತರಳಬಾಳು ಜಗದ್ಗುರು ಲಿಂ. ಶ್ರೀ.ಶ್ರೀ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಭಾಗಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಸಿರಿಗೆರೆ:
ಪರಮಪೂಜ್ಯ, ಶ್ರೀ.ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 31ನೆಯ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಸೆಪ್ಟಂಬರ್ 24 ರ ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ರವರು ಭಾಗವಹಿಸಿ ಮಾತನಾಡಿ, ಲಿಂಗೈಕ್ಯ ಹಿರಿಯ ಶ್ರೀ.ಶ್ರೀ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳು ಆಧುನಿಕ ಬಸವಣ್ಣ, ನಡೆದಾಡುವ ದೇವರು, ನಾಡಿನ ಜನರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶೈಕ್ಷಣಿಕ ಪ್ರಗತಿ ಸಾಧಿಸಲು ನೆರವಾದರು. ಬ್ರಿಟೀಷರ ದಬ್ಬಾಳಿಕೆಯಲ್ಲಿ ಮಠಾಧೀಶರಾಗಿ ಬಂದು ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಜಗತ್ತಿನಲ್ಲಿ ಕಳೆದ ಎರಡು ವರ್ಷಗಳಿಂದ ಹೆಮ್ಮಾರಿ ಕೊರೋನಾದಿಂದ ಸಾಕಷ್ಟು ಸಾವು ನೋವು ಸಂಭವಿಸಿದ ದುಃಖದ ಮಧ್ಯದಲ್ಲಿ ಈಗಿನ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಎಲ್ಲಾ ಕಾರ್ಯಕ್ರಮವನ್ನು ರದ್ದು ಮಾಡಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತಲ್ಲಿನರಾದರು. ಜೊತೆಗೆ ನಾಡುನುಡಿಯ ಚಿಂತನೆಯನ್ನು ಇಟ್ಟುಕೊಂಡು ಭರಮಸಾಗರದ ಸುತ್ತಮುತ್ತಲಿನ 44 ಕೆರೆಗಳಿಗೆ ಏತನೀರಾವರಿ ಯೋಜನೆಯೂ ಅಪ್ಪರ್ ಭದ್ರದಿಂದ ಯಾವ ರೀತಿ ನೀರು ತುಂಬಿಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡಿದ್ದರ ಫಲವಾಗಿ ಇದೀಗ 44 ಕೆರೆಗಳಿಗೆ ಸುಮಾರು 56 ಕಿಮೀ ನಿಂದ 5 ಅಡಿ ವ್ಯಾಸವುಳ್ಳ ದೊಡ್ಡ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದು ಅಂತಿಮ ಹಂತಕ್ಕೆ ಬಂದು ತಲುಪಿದೆ.ಇದಕ್ಕೆ ಸ್ವಾಮೀಜಿಗಳ ತಮ್ಮ ಅನುಭವದ ತಂತ್ರಜ್ಞಾನವನ್ನು ಇಂಜಿನಿಯರ್‌ಗಳಿಗೆ ಧಾರೆ ಎರೆದಿದ್ದಾರೆ. ಇಂತಹ ಶೈಕ್ಷಣಿಕ ಪ್ರಗತಿ ಹಾಗೂ ರೈತರ ಏಳಿಗೆಗೆ ಸದಾ ಶ್ರಮಿಸುತ್ತಿರುವ ಸ್ವಾಮೀಜಿಗಳ ಕಾರ್ಯ ಸ್ಮರಣೀಯವಾದದು ಎಂದರು.
ಕೊರೋನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್, ಚಿಕಿತ್ಸೆ ಇಲ್ಲದ ಸಮಯದಲ್ಲಿ ತಕ್ಷಣವೇ ಸಂಬಂಧಿಸಿದವರಿಗೆ ಕರೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಿ ಅವರಿಗೆ ನೆರವಾಗಿ ಸಹಸ್ರಾರು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರುಗಳಾದ ಈಶ್ವರ್ ಖಂಡ್ರೆ,ಡಿ.ಸುಧಾಕರ್, ಶಾಸಕರುಗಳಾದ ಬಣಕಾರ, ಬಿ.ವೈ.ವಿಜಯೇಂದ್ರ, ಶಾಂತನ ಗೌಡ್ರು, ಎಂ.ಚಂದ್ರಪ್ಪ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.