ಹೊಸದುರ್ಗ : ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರು ಕಳ್ಳರನ್ನ ಪಟ್ಟಣ ಕಾಣೆಯ ಪೊಲೀಸರು ಬಂಧಿಸಿ ₹ 7 ಲಕ್ಷ ಮೌಲ್ಯದ 11 ವಾಹನಗಳನ್ನ ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ನಗರದ ಕಾವಾಡಿಗರ ಹಟ್ಟಿಯ ದಾದಾಪೀರ್ ಅಲಿಯಾಸ್ ದಾದು (28) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಬಂ ಕಡೆಯಿಂದ ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ 4 ಮೋಟರ್ ಸೈಕಲ್ ಕಳೆಯುವ ಪ್ರಕರಣ, ಚಿತ್ರದುರ್ಗ ಟೌನ್ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ಚಳ್ಳಕೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ 1, ಭರಮಸಾಗರ 1, ಹಿರಿಯೂರು 1, ದಾವಣಗೆರೆ ಕೆಟಿಜೆ ನಗರ ಠಾಣೆಯ 1 ಪ್ರಕರಣಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ರಂಜಿತ್ ಕುಮಾರ್ ಭಂಡಾರು, ಎಎಸ್‌ಪಿ ಉಮೇಶ್ ಈಶ್ವರ್ ನಾಯಕ್, ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿದ್ದು, ಡಿವೈಎಸ್ಪಿ ಟಿ.ಎಂ ಶಿವಕುಮಾರ್, ಪಿ ಐ ಕೆ ಟಿ ರಮೇಶ್ , ಪಿಎಸ್ಐ ಮಹೇಶ್ ಕುಮಾರ್, ಸಿಬ್ಬಂದಿ ಉಮೇಶ್ ಕುಮಾರ್, ಗಂಗಾಧರ, ರಾಜಣ್ಣ, ಚಿದಾನಂದ,ಮಧು, ಜಗದೀಶ್, ಸತೀಶ್, ಪ್ರಕಾಶ್, ತನಿಕಾ ತಂಡದವರು ಭಾಗಿಯಾಗಿದ್ದರು
