
ಒಳಮೀಸಲಾತಿಗೆ ಬೇಕಿದೆ ಸುಗ್ರಿವಾಜ್ಞೆ ಮುದ್ರೆ
ಮಾಜಿ ಸಚಿವ ಆಂಜನೇಯ ಒತ್ತಾಸೆ
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಬೆಂಗಳೂರು:
ಒಳಮೀಸಲಾತಿ ವಿಷಯದಲ್ಲಿ ಗೊಂದಲ, ಆತಂಕ ನಿವಾರಣೆಗೆ ತಕ್ಷಣ
ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಒಳಮೀಸಲಾತಿ ಜಾರಿ ಸಂಬಂಧ ಮೊದಲು ಸುಗ್ರಿವಾಜ್ಞೆ
ಹೊರಡಿಸಬೇಕು. ಆಗ ಕಾನೂನು ರೂಪ ಪಡೆದುಕೊಳ್ಳಲಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅಭಿಪ್ರಾಯಪಟ್ಟರು.
ಮಾದಿಗ ಸಮುದಾಯದ ನಿಯೋಗ ಬೆಂಗಳೂರಿನಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಸಹಲೆಗಾರ ಈ.ವೆಂಕಟಯ್ಯ ಅವರೊಂದಿಗೆ ಸುಧಿರ್ಘ ಚರ್ಚೆ ವೇಳೆ ಮಾತನಾಡಿದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಸಾಧ್ಯವೇ ಇಲ್ಲವೆಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಿದ್ದಾರೆ. ಆದರೂ ಪರಿಶಿಷ್ಟರಲ್ಲಿರುವ ಅನೇಕ ಗೊಂದಲಗಳು ನಿವಾರಣೆ ಆಗಬೇಕಾಗಿದೆ. ವಿಶ್ವವಿದ್ಯಾಲಯಗಳು ಸೇರಿ ಅನೇಕ ಸಂಸ್ಥೆಗಳು ನಮಗೆ ಸುತ್ತೋಲೆ ಬಂದಿಲ್ಲ ವೆಂಬ ಹೇಳಿಕೆಗಳು ಹರಿದಾಡುತ್ತಿವೆ. ಪರಿಣಾಮ ಮಾದಿಗರು ಸೇರಿ ಪರಿಶಿಷ್ಟ ಜಾತಿಯವರಲ್ಲಿ ಆತಂಕ ಉಂಟಾಗಿದೆ ಎಂದರು.
ಇದಕ್ಕೆ ಶಾಶ್ವತ ತೆರೆ ಎಳೆದು ಒಳಮೀಸಲಾತಿ ಸೌಲಭ್ಯ ಸುಲಭವಾಗಿ ಎಸ್ಸಿಯಲ್ಲಿನ 101 ಜಾತಿಯವರಿಗೂ ಲಭಿಸಲು ಸುಗ್ರಿವಾಜ್ಞೆ ಜಾರಿ ಅಗತ್ಯವಿದೆ. ಈ ವಿಷಯವನ್ನು ಸಚಿವ ಸಂಪುಟದ
ಮುಂದೆ ಮಂಡಿಸಬೇಕೆಂದು ತಿಳಿಸಿದರು.ಈ ಸಂಬಂಧ ಶೀಘ್ರದಲ್ಲಿ ಸಮಾಜ ಕಲ್ಯಾಣ ಸಚಿವರ ಜೊತೆ ಚರ್ಚಿಸಿ ಬಳಿಕ ಸಿದ್ದರಾಮಯ್ಯ
ಅವರನ್ನು ಭೇಟಿ ಮಾಡಿ ಮನವಿ ಮಾಡುವೆ. ತಾವುಗಳು ತಕ್ಷಣ ಈ ವಿಷಯವನ್ನು ಅಗತ್ಯ ದಾಖಲೆಗೊಂದಿಗೆ ಸಚಿವ ಸಂಪುಟದ ಮುಂದೆ ತರಬೇಕೆಂದು ಹೇಳಿದರು.
ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ 5 ಲಕ್ಷ ಮಂದಿ ಆದಿಕರ್ನಾಟಕ, ಆದಿದ್ರಾವಿಡ,ಆದಿಆಂಧ್ರ ಎಂದುಗುರುತಿಸಿ ಕೊಂಡಿದ್ದು, ಈ ಸಮುದಾಯಗಳಿಗೆ ಇ ಗುಂಪು ರಚಿಸಿ ಶೇ.1ರಷ್ಟುಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ವಿವಿಧ ಕಾರಣಕ್ಕೆ ಈ ಗುಂಪನ್ನುವಿಸರ್ಜಿಸಿ, ಎ ಮತ್ತು ಬಿ ಗುಂಪಿಗೆ ಸಮಾನಂತರವಾಗಿ ಜನಸಂಖ್ಯೆಯನ್ನು ಹಂಚಿಕೆ ಮಾಡಿದೆ ಎಂದರು.
ಆದರೆ, ಇವರು ಎ ಅಥವಾ ಬಿ ಇವರೆಡರಲ್ಲಿ ಯಾವುದಾದರೂ ಒಂದು ಗುಂಪಿನಲ್ಲಿ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಲು ಕಡ್ಡಾಯವಾಗಿ ತಮ್ಮ ಮೂಲ ಜಾತಿ ಘೋಷಿಸಿಕೊಳ್ಳಬೇಕು.
ಇಲ್ಲದಿದ್ದರೆ ಮೀಸಲಾತಿಯಿಂದಲೇ ವಂಚಿತರಾಗುತ್ತಾರೆ ಎಂದು ತಿಳಿಸಿದರು.ಈ ರೀತಿ ಅನ್ಯಾಯಕ್ಕೆ ಒಳಗಾಗದ ರೀತಿ ಹಾಗೂ ಆರಂಭದಿAದಲೂ ಎಕೆ, ಎಡಿ ಎಂದು ಶಾಲಾ ದಾಖಲಾತಿಗಳಲ್ಲಿ ನಮೋದಿಸಿದವರ ಅನುಕೂಲತೆಗಾಗಿ ತಮ್ಮ ಮೂಲ ಜಾತಿ ಪ್ರಮಾಣ ಪತ್ರ ಪಡೆದು ಒಳಮೀಸಲಾತಿ ಸೌಲಭ್ಯ ಪಡೆಯಲು ಸೂಕ್ತ ಆದೇಶವನ್ನು ಇಲಾಖೆ ಹೊರಡಿಸಲಿದೆ ಎಂದುಅಧಿಕಾರಿಗಳು ತಿಳಿಸಿದರು.
ಜೊತೆಗೆ ಬಡ್ತಿಯಲ್ಲೂ ಒಳಮೀಸಲಾತಿ ನೀಡುವ ಸಂಬAಧ ಸುತ್ತೋಲೆ ಪ್ರಕಟಗೊಳ್ಳಲಿದೆ.ಒಟ್ಟಾರೆ ಎಲ್ಲ ಅಡೆತಡೆ, ಗೊಂದಲಗಳಿಗೆ ತೆರೆ ಎಳೆಯಲು ಶೀಘ್ರದಲ್ಲಿಯೇ ಇಲಾಖೆ ಕ್ರಮಕೈಗೊಳ್ಳುವ ಸಿದ್ಧತೆಯಲ್ಲಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ಸಭೆಯಲ್ಲಿ ಮುಖಂಡರಾದ ಗೋನಾಳ್ ಭೀಮಪ್ಪ, ಎಚ್.ಆರ್.ತೇಗನೂರು, ಭೀಮಾಶಂಕರ್, ದುಗ್ಗಪ್ಪ
ಇತರರರಿದ್ದರು.

ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ವೆಂಕಟಯ್ಯ ಅವರೊಂದಿಗೆ ಒಳಮೀಸಲಾತಿಯಲ್ಲಿ ಗೊಂದಲ ನಿವಾರಣೆ ಸಂಬಂಧ ಮಾಜಿ ಸಚಿವ ಹೆಚ್.ಆಂಜನೇಯ, ಗೋನಾಳ್ ಭೀಮಪ್ಪ, ದುಗ್ಗಪ್ಪ, ಭೀಮಾಶಂಖರ್, ತೇಗನೂರು ಚರ್ಚೆ ನಡೆಸಿದರು.
