ಚರಂಡಿ ನೀರು ತುಳಿದುಕೊಂಡು ಮಕ್ಕಳು ಶಾಲೆಗೆ ತೆರಳುತ್ತಿದ್ದರು ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ
ಸಾಂಕ್ರಮಿಕ ರೋಗದ ಭೀತಿಯಲ್ಲಿ ಕಾಟಂದೇವರ ಕೋಟೆ ಗ್ರಾಮಸ್ಥರು
ಚರಂಡಿ ಸ್ವಚ್ಛತೆ ಮಾಡಿಸುವಂತೆ ಸಾರ್ವಜನಿಕರ ಮನವಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಡಾಪೆ ಉತ್ತರ
ಸಂಪಾದಕರು : ಸಿ.ಎನ್. ಕುಮಾರ್
ವರದಿ: ದ್ಯಾಮಕುಮಾರ್. ಟಿ ಗೋಪನಹಳ್ಳಿ
ಚಿತ್ರದುರ್ಗ ಹೊಯ್ಸಳ ನ್ಯೂಸ್ /
ಚಳ್ಳಕೆರೆ:
ಸರ್ಕಾರ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಕಷ್ಟು ಅನುದಾನ ನೀಡಿದರು ಸಹ ಕೆಲ ಅಧಿಕಾರಿಗಳು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿಸದೆ ಇರುವುದಕ್ಕೆ ಸಾಂಕ್ರಮಿಕ ರೋಗದ ಭೀತಿಯಲ್ಲಿ ಕಾಟಂದೇವರ ಕೋಟೆ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇದಕ್ಕೆ ಬೇಸೆತ ಸಾರ್ವಜನಿಕರು ಚರಂಡಿ ಸ್ವಚ್ಛತೆ ಮಾಡಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದರೆ ಉಡಾಪೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲ್ಲೂಕಿನ ರೇಣುಕಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಕಾಟಂದೇವರ ಕೋಟೆ(ಕೆ.ಡಿ.ಕೋಟೆ) ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೆ ಮೂರು ನಾಲ್ಕು ತಿಂಗಳಿಂದ ಚರಂಡಿಗೆ ಹರಿಯಬೇಕಾದ ನೀರು ರಸ್ತೆಯಲೇ ನಿಂತಿರುವುದರಿಂದ ರಸ್ತೆ ತುಂಬಾ ನೀರುನಿಂತು ಕೆರೆಯಂತಾಗಿದೆ ಇದರಿಂದ ಇಲ್ಲಿನ ನಿವಾಸಿಗಳು ಚರಂಡಿ ದುರ್ವಾಸನೆಗೆ ವಾಸಿಸುವುದು ಕಷ್ಟಕರವಾಗಿದೆ. ಈ ರಸ್ತೆಯು ಚೌಳುರು ವೀರಮ್ಮನ ಮನೆಯಿಂದ ಮುಖ್ಯ ರಸ್ತೆಗೆ ಒಂದಿಕೊಡಿರುವುದರಿಂದ ಇಲ್ಲಿ ಸಂಚಾರಮಾಡುವವರು. ಗೃಹ ಬಳಕೆಯ ಕಲುಷಿತಗೊಂಡ ನೀರನ್ನು ತುಳಿದುಕೊಂಡು ಓಗುವ ಪರಿಸ್ಥಿತಿ ನಿರ್ಮಾಣವಾಗಿದ್ದು. ಜೊತೆಗೆ ಸೊಳ್ಳೆಗಳ ಸಂತತಿ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ನಿವಾಸಿಗಳು ದಿನನಿತ್ಯ ಜ್ವರ ಕೆಮ್ಮು ನೆಗಾಡಿಗೆ ಆಸ್ಪತ್ರೆಗೆ ಅಲೆದಾಡುತ್ತಿದ್ದು ನಮಗೆ ಚಿಕಿತ್ಸೆ ಪಡೆಯಲು ಸಹ ಹಣವಿಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ರಸ್ತೆ ಮೇಲೆ ನಿಂತಿರುವ ಚರಂಡಿ ನೀರಿಗೆ ಮುಕ್ತಿ???:ಗ್ರಾಮದ ಮುಖ್ಯ ರಸ್ತೆಯ ಚರಂಡಿ ತುಂಬಾ ಕಲುಷಿತ ತ್ಯಾಜ್ಯ ವಸ್ತುಗಳಿಂದ ತುಂಬಿ ಸ್ವಚ್ಛತೆ ಇಲ್ಲದೆ ಇರುವುದರಿಂದ ಚರಂಡಿ ನೀರು ರಸ್ತೆಯಲ್ಲಿ ನಿಂತು ರಸ್ತೆ ತುಂಬಾ ಗಿಡಗಂಟಿ ಹುಲ್ಲು ಬೆಳೆದು ಮೊಣಕಾಲು ಉದ್ದ ಚರಂಡಿ ನೀರು ನಿಂತು ದುರ್ವಾಸನೆ ಬರುತ್ತಿದೆ ಎಂದು ದೂರು ನೀಡಿದರು ಯಾವುದೇ ಪ್ರಯೋಜನೆ ಅಗಿಲ್ಲ, ಮೂರು ನಾಲ್ಕು ತಿಂಗಳಿಂದ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಜೀವನ ಮಾಡುತ್ತಿದ್ದಾರೆ.ಇದರಿಂದ ರಸ್ತೆ ಮೇಲೆ ನಿಂತಿರುವ ಚರಂಡಿ ನೀರಿಗೆ ಮುಕ್ತಿ ಯಾವಾಗ ಎಂದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಚರಂಡಿ ನೀರು ತುಳಿದುಕೊಂಡು ಶಾಲೆಗೆ ತೆರಳುವ ಮಕ್ಕಳು: ದಿನ ನಿತ್ಯ ಅಂಗನವಾಡಿ ಶಾಲಾ ಕಾಲೇಜಿಗೆ ಹೋಗುವ ಚಿಕ್ಕ ಮಕ್ಕಳಿಂದ ಹಿಡಿದುಕೊಂಡು ದೊಡ್ಡವರು ಶಿಕ್ಷಣ ಪಡೆಯಲು 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಗುತ್ತಾರೆ ಜೊತೆಗೆ ವಯಸ್ಸಾದ ವೃದ್ಧರು ಗರ್ಭಿಣಿಯರು ಸಾರ್ವಜನಿಕರು ತಮ್ಮ ಕೆಲಸಗಳಿಗೆ ಇದೆ ಮಾರ್ಗದಲ್ಲಿ ಹೋಗುತ್ತಾರೆ. ಚಿಕ್ಕ ಮಕ್ಕಳು ಇದೆ ನೀರಿನಲ್ಲಿ ಆಟವಾಡುತ್ತಾರೆ. ನಂತರ ಮನೆಗೆ ಬಂದು ಪೋಷಕರಿಗೆ ಕೈ ಕಾಲುಗಳು ತಿಟ್ಟೆ ಆಗುತ್ತಿದ್ದೆ ಏನುತ್ತಾರೆ ಇದರಿಂದ ಸಾಂಕ್ರಮಿಕ ರೋಗದ ಹರಡುತ್ತಿವೆ. ಚರಂಡಿ ನೀರು ಚರಂಡಿಗೆ ಹರಿಯುವ ರೀತಿ ಸ್ವಚ್ಛತೆ ಮಾಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆ ಸಮೀಪವೆ ಸ್ವಚ್ಛತೆ ಮರೀಚಿಕೆ: ಜನ ಪ್ರತಿನಿಧಿಗಳು ಒಬ್ಬರ ಮನೆಯ ಸಮೀಪವೇ ಚರಂಡಿ ಬ್ಲಾಕ್ ಹಾಗಿ ರಸ್ತೆ ಮೇಲೆ ನಿಂತಿರುವುದನ್ನು ಪ್ರತಿ ದಿನ ನೋಡಿಕೊಂಡು ಹೋಗುತ್ತಾರೆ ವಿನಃ ಯಾವುದೇ ರೀತಿಯ ಸ್ವಚ್ಛತೆ ಮಾಡಿಸಲು ಮುಂದಾಗುತ್ತಿಲ್ಲ. ಗ್ರಾಮಸ್ಥರು ಒಂದಲ್ಲ ಒಂದು ರೋಗಕ್ಕೆ ತುತ್ತಾಗುತ್ತಿದ್ದಾರೆ ಇದಕ್ಕೆ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.
ಈಗಲಾದರು ಸಂಬಂಧ ಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳಿಗೆ ಇತ್ತ ಕಡೆ ಗಮನ ಹರಿಸಿ ಚರಂಡಿ ಸ್ವಚ್ಛತೆ ಮಾಡಿಸಿ ರಸ್ತೆಯಲ್ಲಿ ಚರಂಡಿ ನೀರು ನಿಲ್ಲದಂತೆ ಕ್ರಮ ಕೈಗೊಳುತ್ತಾರಾ ಎಂದು ಕಾದು ನೋಡಬೇಕಿದೆ.
ಕೋಟ್ 01:
ಮೂರು ನಾಲ್ಕು ತಿಂಗಳಿಂದ ಚರಂಡಿ ದುರ್ವಾಸನೆಗೆ ಬೆಸೆತು ಮನೆಯಲ್ಲಿ ವಾಸಿಸಲು ಸಹ ಕಷ್ಟ ಒಂದು ಕಡೆಯಾದರೆ ಸಂಜೆ ಹಾಯಿತು ಎಂದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಸೊಳ್ಳೆಗಳ ಕಡಿತದಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದರು ಸಹ ನಾನಾ ರೀತಿಯ ರೋಗಗಳು ಹರಡುತ್ತಿವೆ. ನಮ್ಮ ಕಷ್ಟಕ್ಕೆ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರ ನೀಡುವ ಮೂಲಭೂತ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ ಎಂದರು
ಗ್ರಾಮದ ಸ್ಥಳೀಯ ನಿವಾಸಿ ರಂಗಮ್ಮ
