ಭೂಮಿಕಾ ಎಲೆಕ್ಟ್ರಿಕಲ್ಸ್ ನ ಮಾಲಿಕರು, ವಿದ್ಯುತ್ ಗುತ್ತಿಗೆದಾರರಾದ ಮಹಂತೇಶ್ ಇವರ ತಾಯಿ ಶ್ರೀಮತಿ ಚೌಡಮ್ಮ ನಿಧನ
ಚಿತ್ರದುರ್ಗ ಹೊಯ್ಸಳ ನ್ಯೂಸ್ /
ದಾವಣಗೆರೆ:
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ದಿವಂಗತ ಸಣ್ಣ ಚೌಡಪ್ಪ ನವರ ಧರ್ಮಪತ್ನಿ ಶ್ರೀಮತಿ ಚೌಡಮ್ಮ ಸುಮಾರು( 96 ವರ್ಷ) ದಿನಾಂಕ: 7- 10-2025 ರ ಮಂಗಳವಾರ ಸಂಜೆ ಸುಮಾರು ನಾಲ್ಕು ಗಂಟೆಗೆ ನಿಧನ ಹೊಂದಿದರೆಂದು ತಿಳಿಸಲು ವಿಷಾದಿಸುತ್ತೇವೆ.
ಮೃತ ಚೌಡಮ್ಮ ಇವರು ಭೂಮಿಕಾ ಎಲೆಕ್ಟ್ರಿಕಲ್ಸ್ ನ ಮಾಲಿಕರು, ವಿದ್ಯುತ್ ಗುತ್ತಿಗೆದಾರರಾದ ಮಹಂತೇಶ್ ಇವರನ್ನು ಸೇರಿದಂತೆ ಒಂಬತ್ತು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳು, ಅಳಿಯಂದರು, ಸೊಸೆಯದಿರು ಮತ್ತು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಅಂತ್ಯಕ್ರಿಯೆ ಬುದುವಾರ ಮಧ್ಯಾಹ್ನ 12 ಗಂಟೆಗೆ ಕಕ್ಕರಗೊಳ್ಳ ಗ್ರಾಮದ ಸಮೀಪ ಇರುವ ಕೋಡಿಹಳ್ಳಿ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಮಹಂತೇಶ್ ತಿಳಿಸಿರುತ್ತಾರೆ.
