ಮಾದಿಗ ಸಮುದಾಯ ಭವನ ನಿರ್ಮಾಣಕ್ಕೆ ₹1ಕೋಟಿ ರೂ ಅನುದಾನ ನೀಡುವುದಾಗಿ ಭರವಸೆ
– ಶಾಸಕ ಬಿ.ಜಿ. ಗೋವಿಂದಪ್ಪ
ಚಿತ್ರದುರ್ಗ ಹೊಯ್ಸಳ ಸುದ್ದಿ
ಹೊಸದುರ್ಗ:
ಸತತ 35 ವರ್ಷಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಮುಂದಿನ ನಿಮ್ಗಳ ಪೀಳಿಗೆ ಸರ್ಕಾರ ಕೊಟ್ಟ ಸೌಲಭ್ಯವನ್ನು ಪಡೆದು ಸಮಾಜದಲ್ಲಿ ಸಬಲರಾಗಿ ಮುಂದೆ ಬನ್ನಿ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಲ್ಲಿ ತಾಲ್ಲೂಕು ಮಾದಿಗ ನೌಕರರ ಸಂಘದ ವತಿಯಿಂದ 13 ನೇ ವರ್ಷದ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರು ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿ ನೇಮಕ ಮಾಡಿ ಜಾತಿ ಗಣತಿ ಮಾಡಿಸಿ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಮಾದಿಗ ಸಮಾಜಕ್ಕೆ % 6, ಹೊಲೆಯ ಸಮಾಜಕ್ಕೆ % 6, ಇತರೆ ಸಮಾಜಕ್ಕೆ %5, ಅಲೆಮಾರಿ ಸಮಾಜಕ್ಕೆ% 1 ರಷ್ಟು ಮೀಸಲಾತಿ ಹಂಚಿಕೆ ಮಾಡಿ ಜಾರಿಗೊಳಿಸಿದ್ದು ಸಮಾಜ ಇನ್ನು ಮುಂದೆ ಇದರ ಸೌಲಭ್ಯ ಪಡೆದು ಸಬಲರಾಗಲಿ ಎಂದು ಹೇಳಿದರು.
ಸಮುದಾಯದ ಭವನಕ್ಕೆ ಒಂದು ಕೋಟಿ ರೂ ಅನುದಾನ ನೀಡಲಾಗುವುದು ಮತ್ತು ನಗರದ ಟಿಬಿ ಸರ್ಕಲ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಪ್ರತಿ ವರ್ಷ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ₹ 1 ಲಕ್ಷ ದೇನೆಗೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಫಿಲೋರ್ಶಿಪ್ ವಿಜೇತ ಕೈನಡು ಚಂದ್ರಪ್ಪ ಮಾತನಾಡಿ ಸಮಾಜದಲ್ಲಿನ ಬಹಳಷ್ಟು ಮೌಲ್ಯ ಕಂದಾಚಾರಗಳಿಂದ ಹೊರಬಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿ ಶಿಕ್ಷಣವಂತರಾಗಬೇಕೆಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಆರ್ ರಾಜಪ್ಪ ಮಾತನಾಡಿ ನಮ್ಮ ಮಾದಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯು ಕಳೆದ 30 ವರ್ಷಗಳ ಮೀಸಲಾತಿಯ ಹೋರಾಟಕ್ಕೆ ಹಸ್ತು ಎಂದಿದೆ.ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಸದೃಢರಾಗಲು ಬಲ ನೀಡಿದೆ. ಈ ಮೀಸಲಾತಿಯು ನಮ್ಮ ಸಮಾಜದ ಏಳಿಗೆಗೆ ಅಗತ್ಯವಾಗಿದೆ.
ಮಕ್ಕಳು ಉತ್ತಮ ಪಾಠ ಪ್ರವಚನಗಳನ್ನು ಕೇಳಿ ತಮ್ಮ ತಂದೆ ತಾಯಿ ಗುರು ಹಿರಿಯರಿಗೆ ಗೌರವ ತಂದು ಕೊಡಿ. ಕಷ್ಟಪಟ್ಟು ತಂದೆ ತಾಯಿ ಶಾಲೆಗೆ ಕಳುಹಿಸುತ್ತಾರೆ ಅಡ್ಡ ದಾರಿಯನ್ನ ತುಳಿಯದೆ ಸನ್ಮಾರ್ಗದಲ್ಲಿ ನಡೆದು ಸಮಾಜಕ್ಕೆ ಕೀರ್ತಿ ತಂದು ಕುಡಿಯು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು
ಈ ವೇಳೆ ಮಾದಿಗ ಸಮಾಜದ ಅಧ್ಯಕ್ಷ ಟಿಎನ್ ತಿಪ್ಪಯ್ಯ. ತಾಲೂಕು ಪಂಚಾಯತ್ ಮಾಜಿ ಸದಸ್ಯ ದೇವಗೆರೆ ಮಲ್ಲಿಕಾರ್ಜುನ್. ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಡಿ ಉಮೇಶ್. ಕಚನಾಧಿಕಾರಿ ವೀರಭದ್ರಪ್ಪ. ಸಮಾಜದ ಕಾರ್ಯದರ್ಶಿ ಮಳಲಿ ಶೇಖರಪ್ಪ. ಮಾಜಿ ಸಂಚಾಲಕ ಆರ್ ಸುರೇಶ್. ಹೆಗ್ಗೆರೆ ಶಂಕ್ರಪ್ಪ. ಹೆಗ್ಗೆರೆ ರಂಗಪ್ಪ. ಪುರಸಭೆ ಸದಸ್ಯ ದೊಡ್ಡಯ್ಯ. ಲಕ್ಕಿ ಹಳ್ಳಿ ಮುದ್ದಣ್ಣ ನೌಕರರ ಸಂಘದ ಸರ್ವರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
