ದೇವಸ್ಥಾನಗಳನ್ನು ಸ್ಚಚ್ಛತೆ ಮಾಡಿದರೆ ಆತ್ಮತೃಪ್ತಿಗೆ ದಾರಿ ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ
ವರದಿ: ಕಾವೇರಿ,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಸದುರ್ಗ :
ತಾಲ್ಲೂಕಿನ ಕೆಲ್ಲೋಡು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸ್ವಚ್ಛತೆ ಕಿಟ್
ವಿತರಣೆಯನ್ನು ಮಾಡಿದರು.
ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ ಮಾತ್ನಡಿ
ತಾಲ್ಲೂಕಿನಾದ್ಯಂತ 75 ದೇವಸ್ಥಾನಗಳಿಗೆ ಉಚಿತವಾಗಿ ಸ್ವಚ್ಛತಾ ಕಿಟ್ ವಿತರಣೆ ಮಾಡುತ್ತಿದ್ದು ಅದರಲ್ಲಿ ಕಸದ ಪೊರಕೆ,ಕಸದ ಬುಟ್ಟಿ,ನೆಲೆ ಒರೆಸುವ ಮಾಫ್,ಪೆನಾಯಿಲ್,ಕಸದ ಮರ,ನೆಲ ಒರೆಸುವ ಸ್ವಚ್ಛತಾ ಬಟ್ಟೆ ಒಳಗೊಂಡಿದ್ದು ದೇವಾಸ್ಥಾನದ ಸುತ್ತ ಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಪ್ರಾರ್ಥನೆ,ಜ್ಞಾನ,ಆತ್ಮತೃಪ್ತಿಯಿಂದ ದೇವರನ್ನು ಸುಲಭವಾಗಿ ಮತ್ತು ಭಕ್ತಿಯಿಂದ ಸ್ಮರಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಮಂಡಳಿಯ ಚಿಕ್ಕಣ್ಣ,ಮಂಜಪ್ಪ,ಅಂಜಿನಪ್ಪ,ಸುರೇಶ್,ಹಾಗೂ ಒಕ್ಕೂಟದ ಅಧ್ಯಕ್ಷರು ರೂಪಾ ಸದಸ್ಯರಾದ ಅನಿತಾ ಮತ್ತು ಸೇವಾಪ್ರತಿನಿಧಿ ಕಮಲಮ್ಮ ಹಾಜರಿದ್ದರು.
