Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Monday, July 6
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ,ಸಿದ್ದರಾಮಯ್ಯರಿಂದ ಸಾಮಾಜಿಕ ಅನ್ಯಾಯ:ಬಸವರಾಜ ಬೊಮ್ಮಾಯಿ
Uncategorized

ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ,ಸಿದ್ದರಾಮಯ್ಯರಿಂದ ಸಾಮಾಜಿಕ ಅನ್ಯಾಯ:ಬಸವರಾಜ ಬೊಮ್ಮಾಯಿ

KumarBy KumarSeptember 7, 2025Updated:September 7, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ,ಸಿದ್ದರಾಮಯ್ಯರಿಂದ ಸಾಮಾಜಿಕ ಅನ್ಯಾಯ:ಬಸವರಾಜ ಬೊಮ್ಮಾಯಿ

ಒಳಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ:ಬಸವರಾಜ ಬೊಮ್ಮಾಯಿ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಬೆಂಗಳೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ ಮಾಡಿದ್ದು, ಸುಪ್ರೀಂ ಕೋರ್ಟ್ ಆದೇಶ ಹಾಗೂ ನ್ಯಾ. ನಾಗಮೋಹನ ದಾಸ್ ವರದಿ ಪಾಲನೆ ಮಾಡದೇ ಸಾಮಾಜಿಕ ಅನ್ಯಾಯ ಮಾಡಿದ್ದು, ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ವರ್ಗಗಳು ಧುಮುಕಬೇಕು ಎಂದು ಮಹಾತ್ಮಾ ಗಾಂಧಿ ಬಯಕೆ ಆಗಿತ್ತು ಆಗ ಡಾ. ಬಿ. ಆರ್. ಅಂಬೇಡ್ಕರ್ ಅವರು ತುಳಿತಕ್ಕೊಳ್ಳಗಾದ ಜನರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದರು. ಆಗ ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪೂಣೆಯಲ್ಲಿ ಒಂದು ವಾರ ಚರ್ಚೆ ಮಾಡಿ ಹಲವಾರು ವಿಚಾರಗಳನ್ನು ಮಹಾತ್ಮಾಗಾಂಧಿ ಒಪ್ಪಿದರು. ಕೆಲವು ವಿಚಾರಗಳಲ್ಲಿ ತಕ್ಷಣ ನ್ಯಾಯ ಕೊಡಿಸುವುದು ಕಷ್ಟ ಮುಂದಿನ ದಿನಗಳಲ್ಲಿ ನ್ಯಾಯ ಕೊಡಿಸಬಹುದು ಎಂದರು ಅದನ್ನು ಪೂಣಾ ಫ್ಯಾಕ್ಟ್ ಅಂತ ಕರೆಯುತ್ತಾರೆ. ಆಗ ಎಲ್ಲ ಸಮುದಾಯಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡವು. ಸಂವಿಧಾನ ರಚನೆಯ ಸಂದರ್ಭದಲ್ಲಿ ಪೂಣಾ ಫ್ಯಾಕ್ಟ್ ಆಧಾರದಲ್ಲಿ ಮೀಸಲಾತಿ ತೀರ್ಮಾನ ಮಾಡಲಾಯಿತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು. ಅವರು ತಮ್ಮ ರಾಜಕೀಯ ಲಾಭಕ್ಕೆ ಒತ್ತು ಕೊಟ್ಟರು. ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಸೇರಿಸಿರುವ ಅಂಶಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಮೀಸಲಾತಿ ನಿರಂತರ ಅವರ ಸಮುದಾಯಕ್ಕೆ ತಕ್ಕಂತೆ ನೀಡಬೇಕು ಎಂದು ತೀರ್ಮಾನಿಸಲಾಯಿತು. ಕಾಂಗ್ರೆಸ್ ಎಸ್ಸಿ ಸಮುದಾಯಗಳನ್ನು ಸೇರಿಸಿತು. ಆದರೆ, ಮೀಸಲಾತಿ ಹೆಚ್ಚಳ ಮಾಡಲಿಲ್ಲ. ರಾಜ್ಯದಲ್ಲಿ ಎಸ್ಸಿ ಪ್ರವರ್ಗದಲ್ಲಿ ಆರು ಜಾತಿ ಇದ್ದಿದ್ದು ಈಗ 101 ಜಾತಿಗಳಾಗಿವೆ. ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡದೇ ಅನ್ಯಾಯ ಮಾಡಿತು‌. ಇದರಿಂದ ಅಸಮಾಧಾನ ಹೆಚ್ಚಾಯಿತು. ಒಳ ಮೀಸಲಾತಿಗೆ ಆಂಧ್ರದಲ್ಲಿ ಚಳವಳಿ ಆರಂಭವಾಗಿ ಕರ್ನಾಟಕಕ್ಕೂ ಹಬ್ಬಿತು ಎಂದು ಹೇಳಿದರು.

*ಲ್ಯಾಂಡ್ ಮಾರ್ಕ್ ತೀರ್ಮಾನ*

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನ್ಯಾ. ನಾಗಮೋಹದಾಸ್ ಸಮಿತಿ ರಚನೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರದಿ ಸಲ್ಲಿಸಲು ಕಾಲ ಮಿತಿ ನಿಗದಿ ಮಾಡಿದರು. ನಾನು ಸಿಎಂ ಇದ್ದಾಗ ನವೆಂಬರ್ 2022 ರಲ್ಲಿ ಎಸ್ಸಿ ಶೇ15 ರಿಂದ ಶೇ17 ಕ್ಕೆ ಹೆಚ್ಚಳ ಮಾಡಿದೆ. ಎಸ್ಟಿಗೆ ಶೇ 3 ರಿಂದ ಶೇ 7 ಕ್ಕೆ ಹೆಚ್ಚಳ ಮಾಡಿದ್ದೇವು. ಅದು ಲ್ಯಾಂಡ್ ಮಾರ್ಕ್ ತೀರ್ಮಾನ ಆಗಿದೆ ಎಂದು ಹೇಳಿದರು.

*ಸಾಮಾಜಿಕ ಅನ್ಯಾಯ*

ಆಗ ಪ್ರತಿ ಪಕ್ಚದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮೀಸಲಾತಿ ಹೆಚ್ಚಳ ಆಗಿಲ್ಲವೆಂದು ಹೇಳಿಕೊಂಡು ತಿರುಗಾಡಿದರು. ಅದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕು ಎಂದು ಹೇಳಿದರು. ಸಿಎಂ ಆದಾಗಲೂ ಅದನ್ನೇ ಹೇಳಿದರು. ಇದರ ನಡುವೆ ನಮ್ಮ ಅವಧಿಯಲ್ಲಿ ಆಗಿರುವ ತೀರ್ಮಾನದ ಆಧ್ಯಯನ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ನ್ಯಾಯ ನೀಡಲು ಬದ್ದರಾಗಿ ಸಾಲಿಸಿಟರ್ ಜನರಲ್ ಅವರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದರು. ಅದರ ಆಧಾರದಲ್ಲಿ ರಾಜ್ಯಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ನೀಡಿ ಡಿಸೆಂಬರ್ 1, 2024 ರಲ್ಲಿ ಸುಪ್ರೀಂ ಆದೇಶ ಮಾಡಿತು. ಆ ಆದೇಶದ ಪ್ರಕಾರ ನಿಖರ ಡಾಟಾ ಇರಬೇಕು. ಅಸಮರ್ಥರನ್ನು ಪ್ರಾಬಲ್ಯ ಇದ್ದವರ ಜೊತೆ ಸೇರಿಸಬಾರದು ಎಂದು ಹೇಳಿತು. ಅದರ ಆಧಾರದಲ್ಲಿ ರಾಜ್ಯ ಸರ್ಕಾರ ನ್ಯಾ. ನಾಗಮೋಹನದಾಸ್ ಸಮಿತಿ ರಚನೆ ಮಾಡಿದ್ದರು. ಅವರು ಸಮೀಕ್ಷೆ ಮಾಡಿ ವರದಿ ಕೊಟ್ಟರು. ಸರ್ಕಾರ ನ್ಯಾ. ನಾಗಮೋಹನ ದಾಸ್ ವರದಿ, ನ್ಯಾ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಎಲ್ಲವನ್ನು ಕೈ ಬಿಟ್ಟು, ಎಸ್ಸಿ ಪ್ರವರ್ಗ ಎ, ಶೇ 6, ಎಸ್ಸಿ ಪ್ರವರ್ಗ ಬಿ ಶೇ 6 ಹಾಗೂ ಎಸ್ಸಿ ಪ್ರವರ್ಗ ಸಿ ಶೇ 5 ಮೀಸಲಾತಿ ವರ್ಗಿಕರಿಸಿ ರಾಜಕೀಯ ನಿರ್ಣಯ ಮಾಡಿದ್ದಾರೆ. ಇದಕ್ಕೆ ಆಯೋಗ ಮಾಡುವ ಅಗತ್ಯವೇನಿತ್ತು. ಅಲೆಮಾರಿಗಳಿಗೆ ಶೇ 1% ಮೀಸಲಾತಿ ಕೊಡಬೇಕೆಂದು ಮಾಧುಸ್ವಾಮಿ ಹಾಗೂ ನಾಗಮೋಹನ ದಾಸ್ ವರದಿಯಲ್ಲಿ ತಿಳಿಸಿದ್ದರು. ಇವರು ಕೇವಲ ಮತ ಬ್ಯಾಂಕಿನ ಸುರಕ್ಷತೆಗಾಗಿ ಈ ತಿರ್ಮಾನ ಮಾಡಿದ್ದಾರೆ. ಇದರಿಂದ ಸುಪ್ರೀಂ ಕೋರ್ಟ್ ನ ಆದೇಶ ಪಾಲಿಸದೆ ಸಾಮಾಜಿಕ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಲಿಲ್ಲ. ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಅಂತ ಇತ್ತು ಅದನ್ನು ಇವರು ತಿರಸ್ಕರಿಸಿದರು. ಎಕೆ, ಎಡಿ, ಎಎ ಯಾವುದೇ ಗುಂಪಿಗೆ ಸೇರಲಿಲ್ಲ. ಅವರು ಪ್ರವರ್ಗ ಎ, ಪ್ರವರ್ಗ ಬಿ, ದಲ್ಲಿ ಸೇರಿ ಅಂತ ಹೇಳಿ ಅವರನ್ನು ಎಲ್ಲಿಯೂ ಸೇರದಂತೆ ಮಾಡಿದರು. ಅಲೆಮಾರಿಗಳು ಅತ್ಯಂತ ಕನಿಷ್ಠ ಜೀವನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವುದೇ ಮೀಸಲಾತಿ ಇಲ್ಲ. ರಾಜ್ಯ ಸರ್ಕಾರದ ಒಳ ಮೀಸಲಾತಿಯಿಂದ ಯಾರೂ ಸಂತುಷ್ಠರಿಲ್ಲ. ಎಸ್ಸಿ ಬಲಗೈ ಸಮುದಾಯದವರು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ಲಂಬಾಣಿ ಬೊವಿ ಜೊತೆಗೆ 59 ಜಾತಿಗಳನ್ನು ಸೇರಿಸಿದ್ದಾರೆ. ಸರ್ಕಾರದ ಬಳಿ ಹೋದರೆ ನಾವು ರಾಜಕೀಯ ನಿರ್ಣಯ ಕೈಗೊಂಡಿದ್ದೇವೆ ನೀವು ಬೇಕಾದರೆ ಕೋರ್ಟ್ ಗೆ ಹೋಗಿ ಅಂತ ಹೇಳುತ್ತಿದ್ದಾರೆ. ಮತ್ತೆ ಬಗೆಹರಿಯದ ಕಗ್ಗಂಟಾಗಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

*ಕ್ಷಮೆ ಕೇಳುತ್ತೀರಾ?*

ಸಿಎಂ ಸಿದ್ದರಾಮಯ್ಯ ರಾಜಕೀಯ ಅನುಭವಿಗಳಿದ್ದಾರೆ. ಆ ಸಮುದಾಯಗಳಿಗೆ ನ್ಯಾಯ ಕೊಡಿ, ನಾವು ಮೀಸಲಾತಿ ಹೆಚ್ಚಳ ಮಾಡಿದ್ದಾಗ ಅದನ್ನು ವಿರೋಧಿಸಿದ್ದೀರಿ, ಈಗ ಅದೇ ಆಧಾರದಲ್ಲಿ ಒಳ ಮೀಸಲಾತಿ ನೀಡಿದ್ದೀರಿ, ಈಗ ಆ ಜನರ ಕ್ಷಮೆ ಕೇಳುತ್ತೀರಾ ? ಇಲ್ಲವೇ ಇನ್ನೊಂದು ಪರ್ಸೆಂಟ್ ಹೆಚ್ಚಳ ಮಾಡಿ ಅವರಿಗೆ ನ್ಯಾಯ ಕೊಡಿಸುತ್ತೀರಾ. ಅವರಿಗೆ ಪ್ಯಾಕೆಜ್ ಕೊಡುವ ಬಗ್ಗೆ ಮಾತನಾಡುತ್ತಾರೆ. ಇದೇನು ವ್ಯವಹಾರಿಕ ಡೀಲಾ ಆ ಸಮುದಾಯಗಳಿಗೆ ಶಾಸ್ವತ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

*ಕಾನೂನು ಹೋರಾಟ*

ಸರ್ಕಾರದ ಮುಂದೆ ಬಿಜೆಪಿಯ ಬೇಡಿಕೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಬೇಡಿಕೆ ನಾಗಮೋಹನ ದಾಸ್ ವರದಿ ಒಪ್ಪಿಕೊಳ್ಳಬೇಕು. ಇನ್ನೊಂದು ಪರ್ಸೆಂಟ್ ಹೆಚ್ಚಳ ಮಾಡಿ ಅಲೆಮಾರಿಗಳಿಗೆ ನೀಡಿ, ಬೋವಿ, ಲಂಬಾಣಿಯವರಿಗೆ ನೀಡಿರುವ ಮೀಸಲಾತಿ ಇನ್ನೊಮ್ಮೆ ಪರಿಷ್ಕರಿಸಿ, ಎಕೆ, ಎಡಿ, ಎಎ ಸಮುದಾಯಗಳಿಗೆ ನ್ಯಾಯ ಕೊಡಬೇಕು. ಶಿಕ್ಷಣ ನೇಮಕಾತಿ ಹಾಗೂ ಭಡ್ತಿಯಲ್ಲಿ ಎಲ್ಲದರಲ್ಲೂ ಒಳ ಮೀಸಲಾತಿ ಪಾಲನೆಯಾಗಬೇಕು. ನಾವು ಬಿಜೆಪಿಯಿಂದ ಎಲ್ಲ ಸಮುದಾಯಗಳ ಜೊತೆಗೆ ನಿಲ್ಲುತ್ತೇವೆ. ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ. ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಲು ಅವಕಾಶ ಇದೆ. ಅದನ್ನು ಬಗೆ ಹರಿಸದಿದ್ದರೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಪಿ. ರಾಜೀವ ಹಾಜರಿದ್ದರು.

Share. Facebook Twitter Pinterest LinkedIn Tumblr Email
Previous Articleಜಿಲ್ಲಾಸ್ಪತ್ರೆಗೆ ಸಚಿವ ಡಿ.ಸುಧಾಕರ್ ದಿಢೀರ್ ಭೇಟಿ:
Next Article ಭದ್ರ ಯೋಜನೆಗೆ ಭೂಮಿ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದ ನಾಲ್ವರು ರೈತರನ್ನು ಮನವೊಲಿಸಿದ:ಮಾಜಿ ಸಚಿವ ಹೆಚ್.ಆಂಜನೇಯ
Kumar
  • Website

Related Posts

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026

Boho Casino im Test: Spiele, Boni und Auszahlung

June 30, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Boho Casino Test: Spiele, Boni & Auszahlungen

Ivibet Casino im Test: Spiele, Boni & Auszahlungen

Boho Casino im Test: Spiele, Boni und Auszahlung

Hexabet Casino Test: Spiele, Boni und Auszahlungen

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026

Boho Casino im Test: Spiele, Boni und Auszahlung

June 30, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.