ತುಮಕೂರು ವಲಯ 19 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಚಿತ್ರದುರ್ಗ ಪ್ರೀತಮ್.ಎ. ಆಯ್ಕೆ
ಚಿತ್ರದುರ್ಗ ಹೊಯ್ಸಳ ನ್ಯೂಸ್ /
ಚಿತ್ರದುರ್ಗ:
ಬಿ.ಸಿ.ಸಿ.ಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ನಡೆಯುತ್ತಿರುವ 19 ವರ್ಷದೊಳಗಿನವರ ತುಮಕೂರು ವಲಯ ತಂಡದ ಆಯ್ಕೆಗಾಗಿ ನಡೆಯುವ ಅಂತರ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತುಮಕೂರು ವಲಯ ತಂಡಕ್ಕೆ ಚಿತ್ರದುರ್ಗ ಆಟಗಾರ ಹಾಗೂ ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿ ಪ್ರೀತಮ್.ಎ ಆಯ್ಕೆಯಾಗಿರುತ್ತಾರೆ
ಬೆಂಗಳೂರಿನಲ್ಲಿ ಸೆ.09 ರಿಂದ 20 ರವರೆಗೆ ನಡೆಯುವ ತಂಡದ ಆಯ್ಕೆಗಾಗಿ ನಡೆದ ಅಂತರ ವಲಯ ಪಂದ್ಯಾವಳಿಯಲ್ಲಿ ಉತ್ತಮ ಆಟವನ್ನು ಪ್ರದರ್ಶನ ಮಾಡಿದ ಪ್ರೀತಮ್ ನನ್ನು ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ರಮೇಶ್‌ರಾವ್, ಎ.ವಿ.ಮೂರ್ತಿ, ಕ್ಲಬ್‌ನ ಹಿರಿಯ ಆಟಗಾ ಬಾಸ್ಕರ್, ರಮೇಶ್, ಓಂಕಾರ್, ಡಿ.ಆರ್.ಸುನೀಲ್ ಕುಮಾರ್, ಸತೀಶ್‌ಬಾಬು ಎಂ.ಎನ್., ರವಿಕ್ ಜೆ.ಎಸ್, ಮಲ್ಲಿಕಾರ್ಜುನ್ ಹಾಗೂ ಕ್ರಿಕೆಟ್ ತರಬೇತುದಾರರಾದ ಮನ್ಸೂರ್ ಅಹಮ್ಮದ್, ಅಹಮ್ಮದ್, ಕ್ರಿಕೆಟ್ ಕ್ಲಬ್‌ನ ಕಾರ್ಯದರ್ಶಿ, ಎನ್.ಅಶೋಕ್ ಇವರುಗಳು ಶುಭ ಕೋರಿರುತ್ತಾರೆ.
