ಇಂದು ನಗರಕ್ಕೆ ಕ್ರೇಜಿಸ್ಟ್ರಾರ್ ರವಿಚಂದ್ರನ್ ರವರ ಪುತ್ರ ವಿಕ್ರಮ್ ರವಿಚಂದ್ರನ್ ಆಗಮನ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಳ್ಳಕೆರೆ:
ನಗರದಲ್ಲಿ ಸೆ.17 ರಂದು ಕ್ರೇಜಿ ಪ್ಯಾಷನ್ ಗ್ಯಾಲರಿಯ ಎರಡನೇ ಬ್ರಾಂಚ್ ಗ್ರಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಕ್ರೇಜಿಸ್ಟ್ರಾರ್ ರವಿಚಂದ್ರನ್ ರವರ ಪುತ್ರನಾದ ವಿಕ್ರಮ್ ರವಿಚಂದ್ರನ್ ಆಗಮಿಸಿ ಕ್ರೇಜಿ ಪ್ಯಾಷನ್ ಗ್ಯಾಲರಿಯ ಆರಂಭೋತ್ಸವಕ್ಕೆ ಚಾಲನೆ ನೀಡುತ್ತಾರೆ ಎಂದು ನೇತಾಜಿ ಪ್ರಸನ್ನ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಲೆಗೆ ಕಲಾವಿದರಿಗೆ ಹೆಚ್ಚು ಗೌರವ ನೀಡುವ ಮೂಲಕ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಯಾಗಿ ನಗರದ ಬೆಂಗಳೂರು ರಸ್ತೆಯಲ್ಲಿ ಕ್ರೇಜಿ ಪ್ಯಾಶನ್ ಅಂಗಡಿ ತೆರೆದು ಯಶಸ್ವಿ ಆಗಿರುವ ಮಧುಕುಮಾರ್ ಅವರು ಎರಡನೇ ಬ್ರಾಂಚ್ ತೆರೆಯಲು ಮತ್ತೊಂದು ಕ್ರೇಜಿ ಪ್ಯಾಷನ್ ಗ್ಯಾಲರಿಯ ಆರಂಭಕ್ಕೆ ಸಿದ್ಧತೆ ಮಾಡಿಕೊಂಡು ಗ್ರಾಂಡ್ ಓಪನಿಂಗ್ ಅನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಯಿಂದ ಮಾಡಿಸಬೇಕಾಗಿತ್ತು.
ಅವರು ಶೂಟಿಂಗ್ ನಲ್ಲಿ ಬ್ಯುಸಿ ಇರುವುದರಿಂದ ಅವರ ಮಗನಾದ ವಿಕ್ರಮ್ ರವಿಚಂದ್ರನ್ ಅವರು ಚಾಲನೆ ನೀಡುತ್ತಾರೆ ಜೊತೆಗೆ ಅತಿ ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ಕೂಡಲಾಗುವುದು ಹಾಗೂ ವಿಶೇಷವಾಗಿ ಸಾರ್ವಜನಿಕರಿಗೆ ಅಂಗಡಿಯ ಆರಂಭೋತ್ಸವದ ದಿನ 1000 ಸಾವಿರ ಶರ್ಟಗಳನ್ನು ಉಚಿತವಾಗಿ ಕೊಡಲಾಗುವುದು. ಇದಕ್ಕೆ ಪ್ರತಿಯೊಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.
ಮಧುಕುಮಾರ ಮಾತನಾಡಿ ಶಾಂತಿನಗರ ಸಿಟಿ ಹಾಸ್ಪಿಟಲ್ ಹತ್ತಿರ ಕ್ರೇಜಿ ಪ್ಯಾಷನ್ ಗ್ಯಾಲರಿಯ ಎರಡನೇ ಶಾಖೆ ಉದ್ಘಾಟನೆಗೆ ಚಲನಚಿತ್ರ ನಟರಾದ ಕ್ರೇಜಿಸ್ಟ್ರಾರ್ ರವಿಚಂದ್ರನ್ ರವರ ಪುತ್ರ ಕ್ರೇಜಿ ವಿಕ್ರಮ್ ರವಿಚಂದ್ರನ್ ರವರು ಸೆ.17ರ ಬುಧವಾರ 11 ಗಂಟೆಗೆ ಚಳ್ಳಕೆರೆ ನಗಕ್ಕೆ ಅಗಮಿಸಲಿದ್ದು ಅವರನು ಸ್ವಾಗತ ಮಾಡಲು 50ಕ್ಕೂ ಹೆಚ್ಚು ಅಟೋ ಚಾಲಕರು ನೆಹರು ವೃತ್ತ ಸರ್ಕಲ್ ನಿಂದ ರೋಡ್ ಶೋ ಮೂಲಕ ಹೊಸದಾಗಿ ನಿರ್ಮಿಸಿರುವ ನೂತನ ಅಂಗಡಿಯ ಉದ್ಘಾಟನೆಗೆ ಆಗಮಿಸುತ್ತಾರೆ.
ಇವರ ಜೊತೆಗೆ ದೊಡ್ಡೇರಿ ಮಲ್ಲಪ್ಪ ಸ್ವಾಮಿ, ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ರವರು ಆಗಮಿಸುತ್ತಾರೆ ಎಂದರು.
