Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Wednesday, March 4
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ ಜ್ಞಾನ ಸಂಪಾದನೆ ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್
ಬೆಂಗಳೂರು

ಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ ಜ್ಞಾನ ಸಂಪಾದನೆ ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್

KumarBy KumarOctober 6, 2025No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ
ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ
ಜ್ಞಾನ ಸಂಪಾದನೆ ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಬೆಂಗಳೂರು:

ಇಂದಿನ ಡಿಜಿಟಲ್ ಯುಗದಿಂದಾಗಿ ಪುಸ್ತಕ ಓದುವ ಹವ್ಯಾಸವು ದೂರವಾಗಿರುವುದು ವಿಷಾದಕರ. ಪತ್ರಕರ್ತರು ನಿರಂತರವಾಗಿ ಓದುವ ಹವ್ಯಾಸದಲ್ಲಿ ತೊಡಗಿಕೊಂಡರೆ ಮಾತ್ರ ಜ್ಞಾನ ಸಂಪಾದಿಸಿಕೊಂಡು, ವೃತ್ತಿ ಬದ್ಧತೆ ತೋರಿಸಲು ಸಾಧ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು.

ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಕಚೇರಿಯಲ್ಲಿ ಸಂಘದ ಸದಸ್ಯರಿಗಾಗಿ ಸ್ಥಾಪಿಸಿರುವ ಗ್ರಂಥಾಲಯ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳೇ ರಾರಾಜಿಸುತ್ತವೆ. ಪತ್ರಕರ್ತರು ಸದಾ ವಸ್ತುನಿಷ್ಠ ವರದಿಗಳಿಗೆ ಗಮನ ನೀಡಿದರಷ್ಟೇ ಪತ್ರಿಕೋದ್ಯಮ ಮೌಲ್ಯ ಉನ್ನತಿಗೇರಲು ಸಾಧ್ಯ ಎಂದೂ ಅವರು ಹೇಳಿದರು.

ಜಿಲ್ಲಾಧಿಕಾರಿಯಾಗಿ ನಾನು ಬಂದ ಮೇಲೆ ಬೆಂಗಳೂರಿನಲ್ಲಿ ಸುಮಾರು 300 ಎಕರೆ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ. ಯಾವುದೇ ಸಂದರ್ಭಗಳಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ತನ್ನಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಪುಸ್ತಕಗಳು ಜ್ಞಾನದ ಭಂಡಾರವಾಗಿದ್ದು, ಪತ್ರಕರ್ತರು ಪುಸ್ತಕಗಳ ಓದಿನತ್ತ ಹೆಚ್ಚಿನ ಒಲವನ್ನು ತೋರಿಸಿದರೆ ಮಾತ್ರ ಪ್ರಬುದ್ಧರಾಗಲು ಸಾಧ್ಯ. ಸಾಹಿತ್ಯ ಕೃತಿಗಳು ಪತ್ರಕರ್ತರಿಗೆಂದೂ ಮಾರ್ಗದರ್ಶಿಯಾಗುತ್ತವೆ. ಇದನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದೇವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಈಗಾಗಲೇ ನಮ್ಮ ಸಂಘವು ತನ್ನ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಆ ನಿಟ್ಟಿನಲ್ಲಿ ಇದೀಗ ಗ್ರಂಥಾಲಯವೂ ಕೂಡಾ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಭವಾನಿ ಸಿಂಗ್ ಠಾಕೂರ್, ಅಜಮಾಡು ಕುಟ್ಟಪ್ಪ, ಪುಂಡಲೀಕ ಬಾಳೋಜಿ, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರೆಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ ಮತ್ತು ಸಂಘದ ವಿವಿಧ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email
Previous Articleಟಿಜೆಎಸ್ ಜಾರ್ಜ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ
Next Article ಗಣತಿ ಸರ್ವ ಜಾತಿ ಪ್ರಗತಿಗೆ ಬುನಾದಿ ನಿರ್ಲಕ್ಷ್ಯಿಸಿದರೇ ಸಮುದಾಯಕ್ಕೆ ಅನ್ಯಾಯ ಮಾಜಿ ಸಚಿವ ಹೆಚ್.ಆಂಜನೇಯ
Kumar
  • Website

Related Posts

ಬಸವಣ್ಣನ ನಾಡು ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ : ಶಿವಾನಂದ ತಗಡೂರು

January 11, 2026

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಮಾದಿಗ ವಿದ್ಯಾರ್ಥಿಗಳ ಕೃಜ್ಞತೆ

January 8, 2026

ಕೆಯುಡಬ್ಲೂಜೆ ಮನವಿಗೆ ಸ್ಪಂದನೆ ಆಯಾ ವರ್ಷವೇ ಪ್ರಶಸ್ತಿ ಪ್ರದಾನಕ್ಕೆ ಕ್ರಮ: ಕೆ.ವಿ.ಪ್ರಭಾಕರ್

September 5, 2025
Leave A Reply Cancel Reply

Search
Tags
Apartment guides best Lucky8 games best VoltageBet games Biggest fashion angel Brave Business casino 770 Cheapest flights Civil societies culture Culture tips Fashion Feature featured fitness Flight scanners Food Good stock quotes Instant free spins leisure Lifestyle Link Makeup artists Makeup brushes Music NetBet withdrawal options play Starburst VoltageBet Preventative medicines Sports Staff Pick Stockcharts Studio apartments Tech Tech reviews Topic Trending Trip activities Unbelievable home decor Vaccination schedules VoltageBet bonus review VoltageBet crypto deposits VoltageBet deposit bonus VoltageBet PayPal casino Weight loss meal plans Weight loss supplements

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

ತುಳಿತಕ್ಕೊಳಗಾದ ದಲಿತರಿಗೆ ಅನ್ಯಾಯವಾಗಲು ಕಾಂಗ್ರೆಸ್ ಸರ್ಕಾರ ಬಿಡುವುದಿಲ್ಲ: ಡಿ. ಸುಧಾಕರ್

Blackjack Oregon – The State of Online Gaming on the West Coast

Immerion Casino No Deposit Bonus Code Free Spins

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

ತುಳಿತಕ್ಕೊಳಗಾದ ದಲಿತರಿಗೆ ಅನ್ಯಾಯವಾಗಲು ಕಾಂಗ್ರೆಸ್ ಸರ್ಕಾರ ಬಿಡುವುದಿಲ್ಲ: ಡಿ. ಸುಧಾಕರ್

March 2, 2026

March 2, 2026

Blackjack Oregon – The State of Online Gaming on the West Coast

March 2, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.