Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Monday, July 6
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಜಾತಿಯ ವೈಭವೀಕರಣ ನಡೆಯುತ್ತಿರುವುದು ಸಮಾಜಕ್ಕೆ ಅಪಾಯಕಾರಿ – ಶಾಂತವೀರ ಸ್ವಾಮೀಜಿ
Uncategorized

ಜಾತಿಯ ವೈಭವೀಕರಣ ನಡೆಯುತ್ತಿರುವುದು ಸಮಾಜಕ್ಕೆ ಅಪಾಯಕಾರಿ – ಶಾಂತವೀರ ಸ್ವಾಮೀಜಿ

KumarBy KumarNovember 12, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಜಾತಿಯ ವೈಭವೀಕರಣ ನಡೆಯುತ್ತಿರುವುದು ಸಮಾಜಕ್ಕೆ ಅಪಾಯಕಾರಿ – ಶಾಂತವೀರ ಸ್ವಾಮೀಜಿ

ಚಿತ್ರದುರ್ಗ ಹೊಯ್ಸಳ ಸುದ್ದಿ

ಹೊಸದುರ್ಗದ :

ಪಟ್ಟಣದ ಕುಂಚಟಿಗ ಮಠದಲ್ಲಿ ನಡೆದ 23ನೇ ವರ್ಷದ 11ನೇ ತಿಂಗಳ ಸುಜ್ಞಾನ-ಸಂಗಮ ಹಾಗೂ ಕನಕ ಜಯಂತಿ ದಿವ್ಯ ಸಾನಿಧ್ಯವಹಿಸಿ
ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿಯವರು ಮಾತನಾಡಿದರು.

ಕಾಯಕ ಮಾಡಿದರೆ ಯಶಸ್ಸು ಲಭಿಸರು ಸಾಧ್ಯ ಕೇಡು ಬಯಸಿದರೆ ನೆಮ್ಮದಿ ಕಳೆದುಕೊಂಡು ಪರದ ಚಿಂತೆ ಮಾಡಿ ತಮ್ಮ ಬದುಕಿನ ಚಿಂತೆಯನ್ನು ಕಳೆದುಕೊಳ್ಳುವ ಬದಲು ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಪಾಲಿಸಿದರೆ ಪ್ರಗತಿ ಸಾಧ್ಯ.

ರಾಗ ದ್ವೇಷ ಮರೆತು ಪರಸ್ಪರ ಪ್ರೀತಿ ಗೌರವಿಸಿದರೆ ಸ್ಥಿರ ಸುಂದರ ಮನಸುಗಳ ಸಮಾಜವನ್ನು ನಿರ್ಮಿಸಿ ಪ್ರೀತಿ ಮಮತೆಯನ್ನು ಬೆಳೆಸಬೇಕಿದೆ ಆದರೆ ಕಲಿಯುಗದಲ್ಲಿ ಕೇವಲ ಗಳಿಕೆ ಆದ್ಯತೆ ಕೊಟ್ಟು ಸಂಬಂಧದ ಮಹತ್ವವನ್ನು ಮರೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ ಜಾತಿ ಜಾತಿಗಳ ಮಧ್ಯೆ ಕಲಹಗಳು ಉಂಟಾಗಲು ಜಾತಿಯ ಶ್ರೇಷ್ಠ ಮನೋಭಾವ ಕಾರಣ ಮಾನವ ಶ್ರೇಷ್ಠನೆ ವರೆತು ಯಾವುದೇ ಜಾತಿ ಶ್ರೇಷ್ಠವಲ್ಲ ಯಾವ ಜಾತಿ ಕನಿಷ್ಠವೂ ಅಲ್ಲ ಯೋಜಿಸುವವರ ಮನೋಸ್ಥಿತಿ ಸರಿಯಾದರೆ ಎಲ್ಲರೂ ಶ್ರೇಷ್ಟರಾಗಿ ಕಾಣುತ್ತಾರೆ.

ಎಲ್ಲವೂ ನಮ್ಮವರೆಂದು ಹಪ್ಪಿಕೊಂಡಾಗ ಸಮಾಜದಲ್ಲಿ ಸೌಹಾರ್ದತೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಕಲಿಯುಗದಲ್ಲಿ ಶಿಕ್ಷಣ ಪಡೆದ ಜನರಿಂದನೇ ಜಾತಿಯ ವೈಭವೀಕರಣ ನಡೆಯುತ್ತಿರುವುದು ಸಮಾಜಕ್ಕೆ ತುಂಬಾ ಅಪಾಯಕಾರಿ ಬೆಳವಣಿಗೆ ಮನೆಗಳನ್ನು ಬಾಡಿಗೆ ಕೊಡುವುದರಲ್ಲೂ ಜಾತಿ ಬಂದಿರುವುದು ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಿರುವುದರ ಸಂಕೇತ ದಯಮಾಡಿ ಎಲ್ಲರನ್ನೂ ಪ್ರೀತಿಸಿ ಎಲ್ಲರೂ ನಮ್ಮವರೆಂದು ಭಾವಿಸಿ ಪರಸ್ಪರ ಗೌರವಿಸಿದರೆ ಸಮಾಜದಲ್ಲಿ ಸಹಬಾಳ್ವೆಯ ವಾತಾವರಣ ನಿರ್ಮಿಸಲು ಮಠಾಧೀಶರು ರಾಜಕಾರಣಿಗಳು ಪ್ರಜ್ಞಾವಂತರು ಯೋಚಿಸಬೇಕಿದೆ ಎಂದು ಆಶೀರ್ವಚನ ನೀಡಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ ಮಾನವನಿಗೆ ಬೇಕಾಗಿರುವುದು ಸಜ್ಜನರ ಸಂಘ ಗುರು ಹಿರಿಯರ ಸಜ್ಜನರ ಸಂಘ ಮರೆತ ಮಾನವ ಒಂಟಿಯಾಗುತ್ತಿದ್ದಾನೆ ಅವಿಭಕ್ತ ಕುಟುಂಬ ಚಿದ್ರ ಚಿದ್ರವಾಗಿ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಿದೆ ಮನೆಯನ್ನು ದೊಡ್ಡದಾಗಿ ಕಟ್ಟುತ್ತಿದ್ದಾರೆ ಮನಸ್ಸನ್ನು ಸಣ್ಣದಾಗಿ ರೂಪಿಸಿಕೊಳ್ಳುತ್ತಿದ್ದಾರೆ ಇದರಿಂದ ಸಮಾಜದಲ್ಲಿ ನೆಮ್ಮದಿ ಹಾಳಾಗಿ ಕೇವಲ ಆಸ್ತಿ ಮಾಡುವ ಕಡೆಗೆ ಗಮನ ನೀಡುತ್ತಿದ್ದಾರೆ ಪೂಜ್ಯರು ಇದನ್ನು ಮನಗಂಡು ಸುಜ್ಞಾನ ಸಂಗಮದ ಮೂಲಕ ಮನಸುಗಳನ್ನು ಬೆಳೆಸುವ ಎಲ್ಲರನ್ನು ಸೇರಿಸುವ ಅವರ ನಿರಂತರ ಶ್ರಮಕ್ಕೆ ಸಮಾಜ ಸಹಕಾರ ಕೊಡಬೇಕಿದೆ ಎಂದರು.

ಯುವ ಮುಖಂಡ ಬಿ.ಜಿ.ಅರುಣ್ ಮಾತನಾಡಿ ಶಾಂತವೀರ ಶ್ರೀಗಳು ಜಾತ್ಯತೀತ ಮನೋಭಾವವನ್ನು ಉಳ್ಳವರಾಗಿ ಸರ್ವರನ್ನು ಪ್ರೀತಿಸುವ ಕಾಯಕವನ್ನು ಮಾಡುವ ಎಲ್ಲ ಜಾತಿಯವರನ್ನು ನಮ್ಮವರೆಂದು ಒಪ್ಪಿಕೊಳ್ಳುವ ಅವರ ಗುಣ ಯುವಕರು ಪಾಲಿಸಬೇಕಿದೆ ಹೊಸದುರ್ಗದ ಎಲ್ಲಾ ಶ್ರೀಗಳು ಸಹೋದರರಂತೆ ಬಾಳುತ್ತಿದ್ದಾರೆ ಅವರಂತೆ ನಾವುಗಳು ಎಲ್ಲಾ ಸಮಾಜಗಳನ್ನು ಪರಸ್ಪರ ಗೌರವಿಸಿ ಪ್ರೀತಿಸಿ ಬದುಕಬೇಕಿದೆ ಎಂದು ತಿಳಿಸಿ ಶ್ರೀಮಠದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ತಿಳಿಸಿದರು

ಹಿರಿಯ ಪತ್ರಕರ್ತ, ಅಪ್ಪ ಅವ್ವ ಪಬ್ಲಿಕೇಶನ್ ಸಂಪಾದಕ ಮಾಚೇನಹಳ್ಳಿ ರಾಮ್ಕಿ ಮಾತನಾಡಿ ಶಾಂತವೀರ ಶ್ರೀಗಳು ವಿರೋಧಿಗಳಿಗೆ ತೋಡೆ ತಟ್ಟಲಿಲ್ಲ ದ್ವೇಷ ಮಾಡಲಿಲ್ಲ ಅವರ ಕರ್ತೃತ್ವದ ಮೂಲಕ ಕಾಯಕದ ಮೂಲಕ ಉತ್ತರ ಕೊಟ್ಟಿದ್ದಾರೆ ಎಲ್ಲಾ ಸಮಾಜದವರನ್ನು ನನ್ನಂತೆ ಪ್ರೀತಿಸುವ ಅವರ ತಾಯಿತನ ಇತರೆ ಮಠಾಧೀಶರಿಗೆ ಮಾದರಿ ಎಂದು ತಿಳಿಸಿದರು ನಮ್ಮಂತ ಸ್ನೇಹಿತರನ್ನು ಕರೆದು ಮಾತನಾಡಿಸಿ ಆಶೀರ್ವದಿಸಿ ಮಾರ್ಗದರ್ಶನ ನೀಡುವ ಪೂಜ್ಯರು ಹೊಸದುರ್ಗಕ್ಕೆ ಸಿಕ್ಕಿರುವುದು ತಾಲ್ಲೂಕಿನ ಹೆಮ್ಮೆ ತಿಳಿಸಿದರು.

ನಿವೃತ್ತ ಡೆಪ್ಯೂಟಿ ತಹಶೀಲ್ದಾರರು ಬಿ.ಕೆ. ನಾಗರಾಜಪ್ಪ ಮಾತನಾಡಿ ನಿಸರ್ಗ ಪ್ರೀತಿಸುವ ಮಾತನಾಡಿ ಶಾಂತವೀರ ಶ್ರೀಗಳು ಮಠದ ಸುತ್ತ ಮರ ಗಿಡಗಳನ್ನು ಬೆಳೆಸಿ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಆಹಾರ ನೀಡುತ್ತಿದ್ದಾರೆ ವಾಯುವಿಹಾರಕ್ಕೆ ಬರುವ ಜನಗಳಿಗೆ ಉತ್ತಮ ಪರಿಸರ ಬೆಳೆಸಿದ್ದಾರೆ ಊಟಕ್ಕೆ ಬರುವ ಭಕ್ತರಿಗೆ ಪ್ರತಿ ತಿಂಗಳ ಜ್ಞಾನ ನೀಡುತ್ತಿದ್ದಾರೆ ಕಳ್ಳಿಯಿಂದ ಬರುವ ಅನೇಕ ಸಮಸ್ಯೆಗಳಿಗೆ ನ್ಯಾಯಾಧೀಶರಂತೆ ನ್ಯಾಯ ನೀಡುತ್ತಿದ್ದಾರೆ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಪಾಲಿಸಿ ತಮ್ಮ ಕಾರ್ಯದಕ್ಷತೆಯನ್ನು ಸಾಬೀತುಪಡಿಸಿದ್ದಾರೆ ಶೂನ್ಯದಿಂದ ಸಮಾಜವನ್ನು ಮಠವನ್ನು ಕಟ್ಟಿ ಇತರಿಗೆ ಪ್ರಯಾಣದಾಯಕರಾಗಿದ್ದಾರೆ ಮಾನವನ ಕರ್ತವ್ಯಗಳನ್ನು ಅರಿತು ಅಳವಡಿಸಿಕೊಂಡು ಕರ್ತವ್ಯವನ್ನು ನಿಭಾಯಿಸುವ ಮೂಲಕ ಸಮಾಜದ ಜನಗಳು ತಮ್ಮ ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ಶ್ರೀಗಳು ಮಾರ್ಗದರ್ಶಿಯಾಗಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕರು ಯೋಜನಾ ವರದಿ ಚಿತ್ರದುರ್ಗ ಹಾಗೂ
ಮಾಜಿ ಅಧ್ಯಕ್ಷರು ಪುರಸಭೆ ಹೊಸದುರ್ಗ ಶ್ರೀನಿವಾಸ್ ಮಾತನಾಡಿ ಶಾಂತವೀರ ಶ್ರೀಗಳು ಪ್ರತಿ ತಿಂಗಳು ಸುಜ್ಞಾನ ಸಂಗ್ರಾಮ ಕಾರ್ಯಕ್ರಮ ಮೂಲಕ ಅನೇಕ ಪ್ರತಿಭೆಗಳಿಗೆ, ಸಾಧಕರಿಗೆ, ಸಮಾಜ ಸೇವಕರಿಗೆ ಸನ್ಮಾನ ಮಾಡುವ ಮೂಲಕ ಅವರನ್ನು ಸಮಾಜಮುಖಿಯಾಗಿಸುವ ಸಮಾಜದ ಜವಾಬ್ದಾರಿಗಳನ್ನು ಹೆಚ್ಚಿಸುವ ಮೂಲಕ ಮಾರ್ಗದರ್ಶನ ಮಾಡುತ್ತಿದ್ದಾರೆ.
ತಂದೆ ಗುರುವಿನ ಸ್ಥಾನದಲ್ಲಿ ನಿಂತು ನಮ್ಮನ್ನು ಬೆಳೆಸುತ್ತಿದ್ದಾರೆ ಎಂದು ತಿಳಿಸಿದರು.

ಟಿ.ಎಸ್.ಶಂಕರಮೂರ್ತಿ ಅಧ್ಯಕ್ಷರು ಹಾಪ್ ಕಾಮ್ಸ್ ಚಿತ್ರದುರ್ಗ ಮಾತನಾಡಿ ಕುಂಚಿಟಿಗ ಸಮಾಜ ಅಸಂಘಟಿತ ಸಮಾಜ ಈ ಸಮಾಜದ ಗುರುಗಳಾಗಿ ಬಂದ ನಂತರ ನೆಲನೆ ಇಲ್ಲದ ಸಮಾಜಕ್ಕೆ ನೆಲೆಯಿಂದ ಹೇಳಿ ರುತ್ತವೇ ಇಲ್ಲದ ಸಮಾಜಕ್ಕೆ ಮಠವನ್ನು ಕಟ್ಟಿ ಸಮಾಜವನ್ನು ರಕ್ಷಿಸುವ ಗುರುವಾಗಿ ನಿಂತಿರುವುದು ನಮ್ಮ ಸಮಾಜದ ಹೆಮ್ಮೆಯಾಗಿದೆ ಅವರ ಸೇವೆಗೆ ಸಮಾಜ ಸಹಕರಿಸಿದರೆ ಇನ್ನು ಉತ್ತಮ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಈ ವೇಳೆ ಸನ್ಮಾನಿತರು, ಮಠದ ಭಕ್ತರು, ಸಾರ್ವಜನಿಕರು ಭಾಗಿಯಾಗಿದ್ದರು.

Share. Facebook Twitter Pinterest LinkedIn Tumblr Email
Previous Articleಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ನಾಗತಿಹಳ್ಳಿಮಂಜುನಾಥ್ ಆಯ್ಕೆ
Next Article ಸಾರಿಗೆ ಬಸ್ ನಿಲ್ದಾಣದ ಅರಮನೆ ಹೋಟೆಲ್ ಕರ್ಮಕಾಂಡ ಬಯಲು ಮಾಡಿದ ಸಾರ್ವಜನಿಕರು
Kumar
  • Website

Related Posts

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026

Boho Casino im Test: Spiele, Boni und Auszahlung

June 30, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Boho Casino Test: Spiele, Boni & Auszahlungen

Ivibet Casino im Test: Spiele, Boni & Auszahlungen

Boho Casino im Test: Spiele, Boni und Auszahlung

Hexabet Casino Test: Spiele, Boni und Auszahlungen

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026

Boho Casino im Test: Spiele, Boni und Auszahlung

June 30, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.