
ದೊಡ್ಡಬೊಮ್ಮಯ್ಯ ಇನ್ನಿಲ್ಲ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಬೆಂಗಳೂರು:
ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಇಂದು ಬೆಳಿಗ್ಗೆಯಷ್ಟೆ ಬಂದಿಳಿದಿದ್ದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ (63) ಹೃದಯಾಘಾತದಿಂದ ಮೃತಪಟ್ಟಿದ್ದು,ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕೆಯುಡಬ್ಲ್ಯೂಜೆ ಸಂತಾಪ:
ಸಂಜೆವಾಣಿ,ಇಂದುಸಂಜೆ ಪತ್ರಿಕೆ ವರದಿಗಾರರಾಗಿದ್ದ, ಪ್ರೆಸ್ ಕ್ಲಬ್ ನಲ್ಲೂ ಹಲವಾರು ಬಾರಿ ಪದಾಧಿಕಾರಿಯಾಗಿ ಕ್ರೀಯಾಶೀಲ ಸಂಘಟಕರಾಗಿದ್ದ ದೊಡ್ಡಬೊಮ್ಮಯ್ಯ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಂತಾಪ ವ್ಯಕ್ತಪಡಿಸಿದ್ದಾರೆ
