Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Monday, July 6
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಜಾತಿ ಕಾರಣಕ್ಕೆ ಗರ್ಭಿಣಿ ಮಗಳನ್ನು ಕೊಲ್ಲುವಷ್ಟು ಮಟ್ಟಕ್ಕೆ ಸಮಾಜ ಇಳಿದಿದೆ ಕೃತ್ಯವೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
Uncategorized

ಜಾತಿ ಕಾರಣಕ್ಕೆ ಗರ್ಭಿಣಿ ಮಗಳನ್ನು ಕೊಲ್ಲುವಷ್ಟು ಮಟ್ಟಕ್ಕೆ ಸಮಾಜ ಇಳಿದಿದೆ ಕೃತ್ಯವೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

KumarBy KumarDecember 25, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಸಮಾಜದ ಚಿಂತಕರು, ಸುಧಾರಕರು, ಪ್ರಜ್ಞಾವಂತರು ಯಾರು ಖಂಡಿಸಲಿಲ್ಲ

ಜಾತಿ ಕಾರಣಕ್ಕೆ ಗರ್ಭಿಣಿ ಮಗಳನ್ನು ಕೊಲ್ಲುವಷ್ಟು ಮಟ್ಟಕ್ಕೆ ಸಮಾಜ ಇಳಿದಿದೆ ಕೃತ್ಯವೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು:

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ ಹೊಯ್ಸಳ:

ಚಿತ್ರದುರ್ಗ:

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅನ್ಯ ಜಾತಿಯ ಯುವಕನ ಜೊತೆಗೆ ಮಗಳು ಅಂತರ್ಜಾತಿ ಮದುವೆಯಾದ ಕಾರಣಕ್ಕೆ ತಂದೆಯೇ ಹಲ್ಲೆ ನಡೆಸಿ, ಯುವತಿ ಮೃತಪಟ್ಟಿದ್ದು, ಇದೊಂದು ಅಮಾನವೀಯ ಘಟನೆ. ಸಮಾಜ ಇಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಅಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆದು ಮೂರ್ನಾಲ್ಕು ದಿನವಾದರೂ ಪ್ರಜ್ಞಾವಂತ ಸಮಾಜದ ಚಿಂತಕರು, ಸಮಾಜ ಸುಧಾರಕರು,ಪ್ರಜ್ಞಾವಂತರು ಯಾರು ಖಂಡಿಸಲಿಲ್ಲ. ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದೇವೆಂದು ಹೇಳುವ ಧಾರ್ಮಿಕ ಚಿಂತಕರು ಸಹ ಈ ಕೃತ್ಯ ಖಂಡಿಸುತ್ತಾರೆಂದು ಭಾವಿಸಿದ್ದೆವು. ಆದರೆ ಈವರೆಗೆ ಅದು ಆಗಲಿಲ್ಲ ಎಂದು ಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಳಜಾತಿಯ ಯುವಕನೋರ್ವ ಮೇಲ್ವರ್ಗದ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕೆ ತನ್ನ ಮಗಳನ್ನೇ, ಅದರಲ್ಲೂ ಏಳು ತಿಂಗಳ ಗರ್ಭಿಣಿಯನ್ನು ಮನುಷತ್ವ ಬಿಟ್ಟು ಕ್ರೂರವಾಗಿ ಕೊಲ್ಲುವುದೆಂದರೆ ಈ ಸಮಾಜ ಎತ್ತ ಸಾಗುತ್ತಿದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.

ದಲಿತರು, ಶೋಷಿತರ ಮೇಲೆ ಮತ್ತು ಅವರಿಗೆ ಸಂಬಂಧಿಸಿದವರ ಮೇಲೆ ದೌರ್ಜನ್ಯಗಳು ನಡೆದರೆ ದಲಿತರೆ ಧ್ವನಿ ಎತ್ತಬೇಕು. ಮೇಲ್ವರ್ಗದವರ ಮೇಲೆ ಇಂತಹ ಪ್ರಕರಣಗಳು ನಡೆದರೆ ದಲಿತರಾದಿಯಾಗಿ ಎಲ್ಲರೂ ಅವರೊಟ್ಟಿಗೆ ಧ್ವನಿ ಎತ್ತಬೇಕು ಎಂದಿದ್ದಾರೆ. ಇದೆ ಹುಬ್ಬಳ್ಳಿಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ವರ್ಗದ ಯುವತಿಯನ್ನು ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅನ್ಯ ಧರ್ಮಿಯ ಯುವಕ ಕಾಲೇಜು ಕ್ಯಾಂಪಸ್‌ನಲ್ಲಿಯೇ ಚಾಕುವಿನಿಂದ ಚುಚ್ಚಿ ಕೊಂದಿದ್ದ. ಮರು ದಿನವೇ ವಿದ್ಯಾರ್ಥಿ ಸಂಘಟನೆಗಳು , ಹೋರಾಟಗಾರರು ಬೀದಿಗಿಳಿದರು ಧಾರ್ಮಿಕ ಪೀಠಾಧಿಪತಿಗಳು ಸಾಲು ಸಾಲಾಗಿ ಯುವತಿಯ ಮನೆಗೆ ಭೇಟಿ ಕೊಟ್ಟರು.
ಅಂದು ಕೊಲೆಯಾದವಳು ಮೇಲ್ವರ್ಗದ ಹುಡುಗಿ. ಇವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿಯೇ. ಅಂದು ಬೀದಿಗಿಳಿದು ಖಂಡಿಸಲು ಕಾರಣ ಅದೊಂದು ಧರ್ಮಾಧರಿತ ಕೊಲೆಯಾಗಿತ್ತು. ಇದು ಜಾತಿ ಆಧಾರಿತ ಕೊಲೆಯಾಗಿದೆ. “ದಯವೇ ಧರ್ಮದ ಮೂಲ” “ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ” ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಜಾತಿಯ ಕಾರಣಕ್ಕೆ ಗರ್ಭಿಣಿ ಮಗಳನ್ನು ಕ್ರೂರವಾಗಿ ಕೊಲ್ಲುವಷ್ಟು ಮಟ್ಟಕ್ಕೆ ಈ ಸಮಾಜ ಇಳಿದಿದೆ. ಕೃತ್ಯವೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಮಾದಾರ ಚನ್ನಯ್ಯ ಶ್ರೀಗಳು ಆಗ್ರಹಿಸಿದ್ದಾರೆ.

Share. Facebook Twitter Pinterest LinkedIn Tumblr Email
Previous ArticleThe Ultimate Guide to Casino Website Fair Play
Next Article Stávky na výsledok: Vodič za izkušene igralce
Kumar
  • Website

Related Posts

Hexa Bet Casino im Test: Schwerpunkt auf Zahlungen

July 6, 2026

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Hexa Bet Casino im Test: Schwerpunkt auf Zahlungen

Boho Casino Test: Spiele, Boni & Auszahlungen

Ivibet Casino im Test: Spiele, Boni & Auszahlungen

Boho Casino im Test: Spiele, Boni und Auszahlung

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Hexa Bet Casino im Test: Schwerpunkt auf Zahlungen

July 6, 2026

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.