Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Saturday, April 18
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಮಾದಿಗ ವಿದ್ಯಾರ್ಥಿಗಳ ಕೃಜ್ಞತೆ
City

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಮಾದಿಗ ವಿದ್ಯಾರ್ಥಿಗಳ ಕೃಜ್ಞತೆ

KumarBy KumarJanuary 8, 2026Updated:January 8, 2026No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಸಿದ್ದುಗೆ ಸಿಹಿ ತಿನ್ನಿಸಿ ಸಂಭ್ರಮ

ಮಾದಿಗ ವಿದ್ಯಾರ್ಥಿಗಳ ಕೃಜ್ಞತೆ

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ

ಒಳ ಮೀಸಲು ಸೌಲಭ್ಯ ಪಡೆದ ಮೊದಲಿಗರು

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಬೆಂಗಳೂರು:

ಒಳಮೀಸಲಾತಿ ಜಾರಿ ಬಳಿಕ ಮೊದಲ ಬಾರಿಗೆ ಅದರ ಸೌಲಭ್ಯವನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದ ವೈದ್ಯಕೀಯ ಸ್ನಾತಕೋತ್ತರ ಉನ್ನತ (ಎಂಎಸ್, ಎಂಡಿ) ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನಿಯೋಗ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಭ್ರಮಿಸಿತು.
ಸಿಎಂ ನಿವಾಸ ಕಾವೇರಿಗೆ ಗುರುವಾರ ಭೇಟಿ ನೀಡಿ ಸಿದ್ದರಾಮಯ್ಯ ಅವರಿಗೆ ಸಿಹಿ ತಿನ್ನಿಸಿ, ಬೃಹತ್ ಹೂವಿನ ಹಾರ, ಹೂವಿನ ಗುಚ್ಛ ಕೊಟ್ಟು ಕೃತಜ್ಞತೆ ಸಲ್ಲಿಸಿದರು.
ಮಾದಿಗ ಸಮುದಾಯಕ್ಕೆ ಉನ್ನತ ಶಿಕ್ಷಣ ಗಗನಕುಸಮವಾಗಿತ್ತು. ಅದರಲ್ಲೂ ಎಂಎಸ್, ಎಂಡಿ
ಪ್ರವೇಶ ಪಡೆಯಲು ಸಾಧ್ಯವೇ ಇರಲಿಲ್ಲ. ಆದರೆ, ಒಳಮೀಸಲಾತಿ ಜಾರಿ ಬಳಿಕ ನೀಟ್ ಪರೀಕ್ಷೆ ಬರೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳೆಲ್ಲರಿಗೂ ಮೊದಲಬಾರಿಗೆ ಪ್ರವೇಶ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.
ಮಕ್ಕಳು, ಮೂಳೆ, ನರರೋಗ ಸೇರಿ ಬಹಳ ಬೇಡಿಕೆ ಇರುವ ವಿಭಾಗಗಳೇ ನಮಗೆ ದೊರೆತಿವೆ. ಇದೆಲ್ಲ ಸಾಧ್ಯವಾಗಿದ್ದು ಒಳಮೀಸಲಾತಿ ಜಾರಿಗೊಳಿಸಿದ ತಮ್ಮಿಂದ. ಅನೇಕ ವಿರೋಧಗಳು, ಗೊಂದಲಗಳ ಮಧ್ಯೆಯೂ ತಾವು ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ನಾವೆಲ್ಲರೂ ಕನಸಲ್ಲೂ ಕಾಣಲು ಸಾಧ್ಯವಾಗದ ಎಂಎಸ್, ಎಂಡಿ ಉನ್ನತ ಶಿಕ್ಷಣದ ಅತ್ಯುತ್ತಮ ವಿಭಾಗಗಳಿಗೆ ಆಯ್ಕೆಗೊಂಡಿದ್ದೇವೆ. ಅರ್ಜಿ ಸಲ್ಲಿಸಿದ ಬಹುತೇಕರಿಗೂ ಪ್ರವೇಶ ಸಿಕ್ಕಿದೆ ಎಂದು ಸಂಭ್ರಮಿಸಿದರು.
ನ್ಯಾ.ನಾಗಮೋಹನ್ ದಾಸ್ ಆಯೋಗದ ಬಳಿಕ ಕೆಲ ಮಾರ್ಪಾಡು ಮಾಡಿ ಒಳಮೀಸಲಾತಿ ಜಾರಿಗೊಳಿಸಿದ
ತಾವು, ಪರಿಶಿಷ್ಟಜಾತಿಯಲ್ಲಿನ ಎಲ್ಲ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಕೈಗೊಂಡ ದಿಟ್ಟ ನಡೆಗೆ ಅನೇಕ ಅಡ್ಡಿ ಆತಂಕಗಳು ಎದುರಾಗಿದ್ದವು. ಅಲೆಮಾರಿ ಸಮುದಾಯ ಕೋರ್ಟ್ಗೆ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಉದ್ಯೋಗ ನೇಮಕಾತಿಗೆ ತಡೆನೀಡಿದೆ. ಆದರೆ, ಶೈಕ್ಷಣಿಕ ಕ್ಷೇತ್ರಕ್ಕೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಒಳಮೀಸಲಾತಿ ಜಾರಿ ಎಷ್ಟೊಂದು ಪ್ರಮುಖ, ಉಪಯುಕ್ತವೆಂಬ ವಾಸ್ತವ ಸತ್ಯವನ್ನು ಮಾದಿಗ ಸಮುದಾಯದ ನಾವುಗಳು ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದೇ ಸಾಕ್ಷಿ ಎಂದರು.(ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಒಳಮೀಸಲಾತಿಯಡಿ ಪ್ರವೇಶ ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಮಾಜಿ ಎಚ್.ಆಂಜನೇಯ ನೇತೃತ್ವದಲ್ಲಿ ಬೆಂಗಳೂರಿನ ಸಿಎಂ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.)

ಇಂತಹದ್ದೊಂದು ಅವಕಾಶ ಕಲ್ಪಿಸಿಕೊಟ್ಟ ತಮಗೆ ಮಾದಿಗ ಸಮುದಾಯ ಸದಾ ಕೃತಜ್ಞವಾಗಿರುತ್ತದೆ. ಅದರಲ್ಲೂ ನಾವುಗಳು ನಿಮ್ಮ ಕೊಡುಗೆ ಸದಾ ಸ್ಮರಿಸುತ್ತೇವೆ. ಜೊತೆಗೆ ಉನ್ತನ ಶಿಕ್ಷಣದ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ನಾವು ನಿಮ್ಮನ್ನು ಪ್ರತಿಕ್ಷಣ ನೆನಪು ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದಸಂಸ, ಮಾದಿಗ ಸೇರಿ ಅನೇಕ ಸಂಘಟನೆಗಳು ಮೂರವರೇ
ದಶಕಗಳ ನಡೆಸಿದ ಹೋರಾಟದ ಫಲ ಹಾಗೂ ವಿರೋಧ ಲೆಕ್ಕಿಸದೆ ತಾವು ಒಳಮೀಸಲಾತಿ ಜಾರಿಗೊಳಿಸಿದ್ದರಿಂದ ನಿರೀಕ್ಷೆಗೂ ಮೀರಿ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಮೊದಲ ಬಾರಿಗೆ ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದರು.
ಕೋರ್ಟ್ನಲ್ಲಿ ಉದ್ಯೋಗ ನೇಮಕಾತಿಗೆ ಇರುವ ತಡೆಯಾಜ್ಞೆ ತೆರವುಗೊಳಿಸಿದರೆ ಇದೇ ರೀತಿ ಮಾದಿಗ ಸಮುದಾಯ ಸರ್ಕಾರಿ ಕೆಲಸವನ್ನು ಪಡೆದುಕೊಂಡು ಬದುಕು ಕಟ್ಟಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಶೀಘ್ರ, ತ್ವರಿತ ಕ್ರಮಕೈಗೊಳ್ಳಬೇಕೆಂದು ಕೋರಿದರು.
ಮೀಸಲಾತಿ ಇದ್ದರೂ 101 ಜಾತಿಗಳ ಪೈಪೋಟಿಯಲ್ಲಿ ಮಾದಿಗರು ಉನ್ನತ ಶಿಕ್ಷಣ, ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಹಿಂದುಳಿಯುತ್ತಿದ್ದರು. ಈ ಸತ್ಯವನ್ನು ಅಂಕಿ ಅಂಶಗಳ ಮೂಲಕ ಅರಿತು ಹೋರಾಟ ನಡೆಸಿದ್ದು ಹಾಗೂ ತಮ್ಮ ಬದ್ಧತೆ ಕಾರಣಕ್ಕೆ ಒಳಮೀಸಲಾತಿ ಜಾರಿಗೊಂಡಿದೆ. ಅದರ ಮೊದಲ ಫಲಾನುಭವಿಗಳು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸ ತಂದಿದೆ. ಆದ್ದರಿಂದ ಅವರೆಲ್ಲರೂ ತಮಗೆ ಅಭಿನಂದಿಸಿ, ಕೃತಜ್ಞತೆ ಸಲ್ಲಿಸುತ್ತಿರುವುದು ಸ್ಮರಣೀಯ ಎಂದರು.

ಒಳ್ಳೆಯ ವೈದ್ಯರಾಗಿ

ಒಳಮೀಸಲಾತಿ ಜಾರಿ ಅನೇಕ ವರ್ಷಗಳ ಬೇಡಿಕೆ ಅಗಿತ್ತು. ಅದನ್ನು ನಾವುಗಳು ಜಾರಿಗೊಳಿಸಿ, ಕಾನೂನು ರೂಪ ನೀಡಿ ಅನುಷ್ಠಾನಗೊಳಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನೀವು ನನಗೆ ಸಿಹಿ ತಿನ್ನಿಸಿ, ಕೃತಜ್ಞತೆ ಸಲ್ಲಿಸಿರುವುದು ಖುಷಿ ಆಗಿದೆ. ಅದಕ್ಕಿಂತಲೂ ಹೆಚ್ಚು ಸಂತಸ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಉಂಟು ಮಾಡಿದೆ. ವ್ಯಾಸಂಗ ವೇಳೆ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಬಳಿಕ ಒಳ್ಳೆಯ ವೈದ್ಯರಾಗಿ ಸಮಾಜ ಸೇವೆ ಮಾಡಿ. ಆಗ ಒಳಮೀಸಲಾತಿ ಜಾರಿಗೊಳಿಸಿದ್ದು ಸಾರ್ಥಕ ಪಡೆದುಕೊಳ್ಳಲಿದೆ ಎಂದು ಹೇಳಿದರು. ಅನೇಕ ಸಮುದಾಯಗಳು ಮೀಸಲಾತಿ ಸೌಲಭ್ಯಗಳಿಂದ ವಂಚಿತವಾಗಿದ್ದವು. ಒಳಮೀಸಲಾತಿ ಜಾರಿಯಿಂದ ಸಮ ಸಮಾಜ ನಿರ್ಮಾಣಕ್ಕೆ ಸಹಕಾರದ ಜೊತೆಗೆ ಅಸ್ಪೃಶ್ಯ, ಹಿಂದುಳಿದ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

Share. Facebook Twitter Pinterest LinkedIn Tumblr Email
Previous ArticleDzīvo dīleru spēļu attīstība tiešsaistes kazino
Next Article Casino Bonus Australia: A Comprehensive Review
Kumar
  • Website

Related Posts

ಬಸವಣ್ಣನ ನಾಡು ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ : ಶಿವಾನಂದ ತಗಡೂರು

January 11, 2026

ಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ ಜ್ಞಾನ ಸಂಪಾದನೆ ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್

October 6, 2025

ಕೆಯುಡಬ್ಲೂಜೆ ಮನವಿಗೆ ಸ್ಪಂದನೆ ಆಯಾ ವರ್ಷವೇ ಪ್ರಶಸ್ತಿ ಪ್ರದಾನಕ್ಕೆ ಕ್ರಮ: ಕೆ.ವಿ.ಪ್ರಭಾಕರ್

September 5, 2025
Leave A Reply Cancel Reply

Search
Tags
Apartment guides best Lucky8 games Biggest fashion angel Brave Business casino 770 Cheapest flights Civil societies culture Culture tips Fashion Feature featured fitness Flight scanners Food Good stock quotes Instant deposit bonus Instant free spins leisure Lifestyle Link Lucky8 slots review Makeup artists Makeup brushes MrXbet slots review Music NetBet withdrawal options Preventative medicines Sports Staff Pick Studio apartments Tech Tech reviews Topic Tower Rush Trending Trip activities Vaccination schedules VoltageBet bonus review VoltageBet crypto deposits VoltageBet deposit bonus VoltageBet PayPal casino Weight loss meal plans Weight loss supplements

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Finest Online Betting Sites: A Review

Spinz noston kesto – Kaikki mitä sinun tarvitsee tietää

Expert Article: Quick.bet Kotiutus – Everything You Need to Know

TonyBet Suomi: Expert Review for Finnish Players

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Finest Online Betting Sites: A Review

April 14, 2026

Spinz noston kesto – Kaikki mitä sinun tarvitsee tietää

April 12, 2026

Expert Article: Quick.bet Kotiutus – Everything You Need to Know

April 11, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.